ಇತ್ತೀಚಿನ ಸುದ್ದಿ
ಫ್ಲೀಸ್ ಬಿಟ್ಟುಬಿಡಿ, ನಾನು ಹೋಗಬೇಕು ಮಾತನಾಡಲು ಮನಸ್ಸಿಲ್ಲ: ಎಸ್. ಎಂ. ಕೃಷ್ಣ ದರ್ಶನಕ್ಕೆ ಓಡೋಡಿ ಬಂದ ನಟಿ ರಮ್ಯಾ!

ಬೆಂಗಳೂರು: ಪ್ಲೀಸ್ ಬಿಟ್ಟುಬಿಡಿ, ನಾನು ಹೋಗಬೇಕು. ಅಂತಿಮ ದರ್ಶನ ಪಡೆಯಲು ಹೋಗುತ್ತಿದ್ದೇನೆ. ಮಾತನಾಡಲು ಮನಸ್ಸಿಲ್ಲ.
ಇದು ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣರ ಅಂತಿಮ ದರ್ಶನಕ್ಕೆ ಬಂದ ಸ್ಯಾಂಡಲ್ ವುಡ್ ನಟಿ, ಮಾಜಿ ಸಂಸದೆ ರಮ್ಯಾ ನೀಡಿದ ಮೊದಲ ಪ್ರತಿಕ್ರಿಯೆ.
ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿಗೆ ಆಗಮಿಸಿ ರಮ್ಯಾ ಅವರು, ಭಾವುಕರಾಗಿಯೇ ಬಂದರು. ಈ ವೇಳೆ ಗದ್ಗತರಾಗಿದ್ದರು.
ರಮ್ಯಾ ಆಗಮಿಸುತ್ತಿದ್ದಂತೆ ಮಾಧ್ಯಮಗಳು ಮುಗಿಬಿದ್ದವು. ಮಾತನಾಡುವಂತೆ ಮನವಿ ಮಾಡಿದರು. ಈ ವೇಳೆ ರಮ್ಯಾ ಪ್ಲೀಸ್ ಬಿಟ್ಟುಬಿಡಿ, ನಾನು ಹೋಗಬೇಕು. ಅಂತಿಮ ದರ್ಶನ ಪಡೆಯಬೇಕು. ಮಾತನಾಡಲು ಮನಸ್ಸಿಲ್ಲ ಎಂದು ರಮ್ಯಾ ಹೇಳಿ ಹೊರ ನಡೆದರು. ಬಳಿಕ ಎಸ್. ಎಂ. ಕೃಷ್ಣ ಮೃತದೇಹದ ಅಂತಿಮ ದರ್ಶನ ಪಡೆದರು. ಈ ವೇಳೆ ರಮ್ಯಾ ಭಾವುಕರಾಗಿಯೇ ಸುಮಾರು ಹೊತ್ತು ನಿಂತಿದ್ದರು.