ವಿಕಲಚೇತನರಿಗೆ ರಿವರ್ಸ್ ವಾಕರ್ ವಿತರಣೆ..

ವಿಕಲತೆ ಒಂದು ಶಾಪವಲ್ಲ, ಮಕ್ಕಳಿಗೆ ಅನುಕಂಪ ಬೇಡ ಅವಕಾಶ ಕೊಡಿ ಎಂದು ಬಿ ಆರ್ ಸಿ ನಂಜುಂಡಯ್ಯ ಸಲಹೆ ನೀಡಿದರು.
ಯಳಂದೂರು; ಪಟ್ಟಣದ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿಗಳ ಕಚೇರಿಯಲ್ಲಿ ಮಾರ್ಗದರ್ಶಿ ವಿಕಲಚೇತನ ಸೇವಾ ಸಂಸ್ಥೆ ಮತ್ತು ಮೋಟಿಕೇಶನ್ ಇಂಡಿಯಾ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ 4 ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ತಿರುಗಡೆ ವಾಕರ್ ( ರಿವರ್ಸ್ ವಾಕರ್) ಅನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಬಿ. ಆರ್. ಸಿ. ನಂಜುಂಡಯ್ಯ ರವರು ಉದ್ಘಾಟಿಸಿ ಮಾತನಾಡಿ ಅಂಗವಿಕಲರು ಎಲ್ಲರಂತೆ ಜೀವನದ ಪಯಣ ಮುನ್ನಡೆಸಬೇಕು ಎಂಬ ಉದ್ದೇಶವನ್ನು ಹೊಂದಿ ಅವರಿಗಾಗಿ ವಿಶೇಷ ವಾಹನವನ್ನು ನೀಡಲಾಗಿದೆ, ಸಾಮಾನ್ಯ ನಾಗರೀಕರಂತೆ ಅವರು ಬದುಕುವುದರೊಂದಿಗೆ ತಮ್ಮ ಕುಟುಂಬವನ್ನು ಮುನ್ನಡೆಸಲು ಈ ವಾಹನವು ಸಹಕಾರಿಯಾಗಲಿ ಹಲವು ಸಂಸ್ಥೆಗಳು ಜೊತೆಗೂಡಿ ವಿಶೇಷ ಚೇತನ ಮಕ್ಕಳಿಗೆ ಹೆಚ್ಚಿನ ಒತ್ತುನೀಡುತ ಮುನ್ನಡೆಸುತ್ತಿರುವ ಮಾರ್ಗದರ್ಶಿ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಎಲ್ಲಾ ವಿಶೇಷ ಚೇತನರು ಈ ವಾಹನವನ್ನು ಪಡೆದುಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ ಆರ್ ಪಿ ಸತೀಶ್, ನಂಜುಂಡಸ್ವಾಮಿ, ಇಸಿಓ ಕುಮಾರ್, ಬಾಗ್ಯ, ಬಿ. ಪಿ.ಇ.ಆರ್.ಟಿ. ಗಳಾದ ಕೆ.ಎಂ. ಮಧು, ಲೀಲಾವತಿ, ಬಿ. ಆರ್. ರಂಜಿತಾ, ಮಾರ್ಗದರ್ಶಿ ವಿಕಲಚೇತನ ಸಂಸ್ಥೆಯ ಶಿಕ್ಷಣ ಸಂಯೋಜಕ ಮೇಘ, ಭೌತ ಶಿಕ್ಷಕರಾದ ಶ್ರೀನಿವಾಸ್, MSW ವಿದ್ಯಾರ್ಥಿಗಳಾದ ಪ್ರಸಾದ್, ಪ್ರಶಾಂತ್, ಕಚೇರಿಯ ಸಿಬ್ಬಂದಿ ಗಳಾದ ಚಿನ್ನಮ್ಮ,ಮಹೇಶ್, ನಂದೀಶ್, ಬಿಳಿಗಿರಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ಎಸ್. ಪುಟ್ಟಸ್ವಾಮಿಹೊನ್ನೂರು tv8newskannada ಯಳಂದೂರು