ಸುದ್ದಿ

ಡಿ.7ರಿಂದ ಮೂರು ದಿನ ಕೃಷಿ ಮೇಳ, ರೈತರಿಗೆ ಹೊಸ ತಂತ್ರಜ್ಞಾನ, ಆವಿಷ್ಕಾರಗಳ ಸಂಪೂರ್ಣ ಮಾಹಿತಿ; ಕುಲಪತಿ – ಡಾ.ಎಂ.ಹನುಮಂತಪ್ಪ

ರಾಯಚೂರು,ಡಿ.07: ಮೂರು ದಿನಗಳ ಕಾಲ ಕೃಷಿ ಮೇಳವನ್ನು ಹವಾಮಾನ ವೈಪರೀತ್ಯಕ್ಕೆ ಸುಸ್ಥಿರ ಕೃಷಿ ಎಂಬ ಶೀರ್ಷಿಕೆಯೊಂದಿಗೆ ಆಯೋಜಿಸಲಾಗುತ್ತಿದ್ದು, ಮೇಳದಲ್ಲಿ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳು ಹಾಗೂ ಆವಿμÁ್ಕರಗಳ ಕುರಿತು ರೈತರಿಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ ಇಂದಿನ ಕೃಷಿ ಗೆ ಪೂರಕ ವಾದ ತಂತ್ರಜ್ಞಾನ ವಾದ ಇ ಸ್ಯಾಪ ನೂತನ ಆವಿಷ್ಕಾರ ಇದನ್ನ ಎಲ್ಲ ರೈತರ ಸದುಪಯೋಗ ಮಾಡಿಕೊಳ್ಳಿ ಎಂದು ಗದಗ ಜಿಲ್ಲಾ ಕಪ್ಪತ್ತ ಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠದ ಶಿವಕುಮಾರ್ ಮಹಾಸ್ವಾಮಿಗಳು ಹೇಳಿದರು.

ಅವರಿಂದು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ ಕೃಷಿ ಮೇಳ ದ ಮೊದಲನೇ ದಿನದ ಮೇಳಕ್ಕೆ ಗೋ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ನಂತರ ಕುಲಪತಿ ಡಾ.ಎಂ.ಹನುಮಂತಪ್ಪ ಮಾತನಾಡಿ
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಡಿಸೆಂಬರ್ 7, 8, ಮತ್ತು 9ರಂದು ಮೂರು ದಿನಗಳ ಕಾಲ ಕೃಷಿ ಮೇಳವನ್ನು ಹವಾಮಾನ ವೈಪರೀತ್ಯಕ್ಕೆ ಸುಸ್ಥಿರ ಕೃಷಿ ಎಂಬ ಶೀರ್ಷಿಕೆಯೊಂದಿಗೆ ಆಯೋಜಿಸಲಾಗುತ್ತಿದ್ದು, ಮೇಳದಲ್ಲಿ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳು ಹಾಗೂ ಆವಿμÁ್ಕರಗಳ ಕುರಿತು ರೈತರಿಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳನ್ನೊಳಗೊಂಡಂತೆ ರಾಜ್ಯದ ಭೌಗೋಳಿಕ ಸ್ಥಿತಿಗಳಿಗೆ ಪೂರಕವಾಗಿರುವ ಕೃಷಿ ಪರಿಸರಗಳು ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆಗಳ ನಕಾರಾತ್ಮಕ ಪರಿಣಾಮಗಳನ್ನು ಸಾಕಷ್ಟು ಎದುರಿಸುತ್ತಿವೆ. ಈ ಕಾರಣದಿಂದ ವೈವಿಧ್ಯಮಯವಾದ ಕೃಷಿ ವ್ಯವಸ್ಥೆಗಳ ಸುಸ್ಥಿರತೆ ಹಾಗೂ ಸುಭದ್ರತೆಗಳ ದೃಷ್ಟಿಯಿಂದ ಬೆಳೆಗಳ ಆಯ್ಕೆ, ಸಾಗುವಳಿ ಕ್ರಮಗಳು, ಮಣ್ಣು, ನೀರು ಹಾಗೂ ಇತರೆ ಸಂಪನ್ಮೂಲಗಳ ಸಂರಕ್ಷಣೆ, ಅವುಗಳ ಸಂವರ್ಧನೆಯ ವಿಧಾನಗಳು, ನಿಯೋಜಿಸಬೇಕಾದ ಯಂತ್ರೋಪಕರಣಗಳು, ಇಂಧನ ಹಾಗೂ ಶಕ್ತಿಯ ವಿನಿಯೋಗ ಹಾಗೂ ಅದಕ್ಕೆ ತಗಲುವ ವೆಚ್ಚ, ಇಳುವರಿಗಳ ಆರ್ಥಿಕ ಲೆಕ್ಕಾಚಾರಗಳ ಬಗ್ಗೆ ನಾವು ವೈಜ್ಞಾನಿಕ ರೀತಿಯಲ್ಲಿ ವ್ಯವಸ್ಥಿತ ಪರಿಹಾರಗಳನ್ನು ಕಂಡುಕೊಳ್ಳಲು ಗಮನಹರಿಸಬೇಕಾಗಿದೆ.

ವರದಿ: ವಿಶ್ವನಾಥ್ ಸಾಹುಕಾರ್ tv8newskannada ರಾಯಚೂರು

Related Articles

Leave a Reply

Your email address will not be published. Required fields are marked *

Back to top button