ಡಾ.ಶ್ರೀ ಶಿವಕುಮಾರಸ್ವಾಮಿಗಳ ಪ್ರತಿಮೆ ವಿರೂಪಗೊಳಿಸಿದರಿಗೆ ಉಗ್ರಶಿಕ್ಷೆಯಾಗಬೇಕು: ಎಂ.ಎಸ್.ರಮೇಶ್

ದೇವನಹಳ್ಳಿ : ಬೆಂಗಳೂರಿನ ಗಿರಿನಗರದಲ್ಲಿರುವ ತುಮಕೂರು ಸಿದ್ಧಗಂಗಾ ಮಠದ ಲಿಂಗೈಕ ಡಾ.ಶ್ರೀ.ಶಿವಕುಮಾರಸ್ವಾಮಿಗಳ ಪ್ರತಿಮೆಯನ್ನು ವಿರೂಪಗೊಳಿಸಿದ ಪ್ರಕರಣವನ್ನು ತ್ವರಿತವಾಗಿ ಪೂರ್ಣಗೊಳಿಸಿ ಆರೋಪಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ವೀರಶೈವ ಲಿಂಗಾಯತ ತಾಲೂಕು ಸಂಘದ ಅಧ್ಯಕ್ಷ ಎಂ.ಎಸ್.ರಮೇಶ್ ಒತ್ತಾಯಿಸಿದ್ದಾರೆ.
ದೇವನಹಳ್ಳಿ ಪಟ್ಟಣದ ವೀರಶೈವ ಲಿಂಗಾಯತ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ನಡೆದಾಡುವ ದೇವರು ತ್ರೀವಿಧ ದಾಸೋಹಿ ಡಾ.ಶ್ರೀ.ಶಿವಕುಮಾರಸ್ವಾಮಿಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಎಲ್ಲಾ ಸಮುದಾಯದ ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣ, ಆಶ್ರಯ, ಅನ್ನ ನೀಡಿ ದೇಶಾದ್ಯಂತ ಕೊಟ್ಯಾಂತರ ಭಕ್ತರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅಂತಹ ಮಹಾನ್ ಪುರುಷರ ಮೂರ್ತಿಯನ್ನು ಬೆಂಗಳೂರಿನ ಭರತನಗರದ ನಿವಾಸಿ ಶಿವಕೃಷ್ಣ ನ,30 ರಂದು ಮೂರ್ತಿಯನ್ನು ವಿರೂಪಗೊಳಿಸಿ ಪರಾರಿಯಾಗಿದ್ದ ಪೊಲೀಸರು ಆರೋಪಿಯನ್ನು ಬಂದಿಸಿದ್ದು ಆರೋಪಿಗೆ ಉಗ್ರ ಶಿಕ್ಷೆಯಾಗಬೇಕು ಇಂತಹ ಕೃತ್ಯಗಳು ಮತ್ತೆ ಮರುಕಳಿಸಬಾರದು ತ್ವರಿತವಾಗಿ ವಿಚಾರಣೆ ನಡೆಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯಕಾರಿ ಸಮಿಸಿ ಸದಸ್ಯ ಪ್ರಸನ್ನಹಳ್ಳಿ ವಿರೂಪಾಕ್ಷಯ್ಯ ಮಾತನಾಡಿ ಡಾ.ಶ್ರೀ ಶಿವಕುಮಾರಸ್ವಾಮಿಗಳು ಪ್ರತಿಮೆ ವಿರೂಪ ಮಾಡಿರುವುದು ಅಕ್ಷಮ್ಯ ಅಪರಾದವಾಗಿದ್ದು ಕೋಟ್ಯಾಂತರ ಭಕ್ತರಿಗೆ ಅಪಾರ ನೋವುಂಟುಮಾಡಿದ್ದಾರೆ.
ತ್ರಿವಿಧ ದಾಸೋಹಿಗಳಾದ ಶ್ರೀಗಳು ದೇಶಾಧ್ಯಂತ ಅಪಾರ ಭಕ್ತಗಣವನ್ನು ಹೊಂದಿದ್ದು ಅವರನ್ನು ಪ್ರತಿಯೊಬ್ಬರು ಗೌರವ ಹಾಗೂ ಪೂಜ್ಯಭಾವದಿಂದ ಕಾಣುತ್ತಾರೆ ಅಂತಹವರ ಪ್ರತಿಮೆಗೆ ರಕ್ಷಣೆ ಇಲ್ಲವಾದರೆ ಹೇಗೆ ಆರೋಪಿಗೆ ಕಠಿಣ ಶಿಕ್ಷೆಗೊಳಪಡಿಸಬೇಕು ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇದೆ ವೇಳೆ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ನಿರ್ದೇಶಕ ಶಾಂತಮೂರ್ತಿ, ತಾಲೂಕು ಸಂಘದ ಉಪಾಧ್ಯಕ್ಷ ಎಸ್.ನಾಗೇಶ್, ಪ್ರಧಾನ ಕಾರ್ಯದರ್ಶಿ ವಿಜಯ್‌ಕುಮಾರ್, ಖಜಾಂಚಿ ಎ.ಪಿ ನಾಗೇಶ್, ನಿರ್ದೇಶಕರಾದ ಮಲ್ಲಾರಿಕುಮಾರ್ ಸದಾಶಿವಯ್ಯ, ಮಲ್ಲಿಕಾರ್ಜುನ, ದಕ್ಷಿಣಮೂರ್ತಿ, ಜಯಶ್ರೀ, ಸುನಿಲ್, ಮಹಿಳಾಘಟಕದ ತಾಲೂಕು ಅಧ್ಯಕ್ಷೆ ಶಿಶಿಕಲಾ ಕಾಂತರಾಜು, ಉಪಾಧ್ಯಕ್ಷೆ ನಳಿನಮಂಜುನಾಥ್, ಮುಖಂಡರಾದ ಮಹೇಶ್, ಕಾಂತರಾಜ್, ಮಧುಚಂದ್ರ ಮುಂತಾದವರು ಇದ್ದರು.
ವರದಿ: ಮಧು tv8newskannada ದೇವನಹಳ್ಳಿ