ರಾಜ್ಯಸುದ್ದಿ

ದಲಿತರು ದೇವಾಲಯ ಪ್ರವೇಶಿಸಿದ್ದಕ್ಕೆ ಪೂಜೆ ಸ್ಥಗಿತ, ದೇವಾಲಯಕ್ಕೆ ಬೀಗ

ಚಿಕ್ಕಮಗಳೂರು : ತಾಲೂಕಿನ ನರಸೀಪುರದಲ್ಲಿ ದೇವಾಲಯಕ್ಕೆ ದಲಿತ ಯುವಕರು ಪ್ರವೇಶಿಸಿದ್ದಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸದೆ ಹಿಂತಿರುಗಿದ್ದಾರೆ. ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದಲ್ಲಿ ಘಟನೆ ನಡೆದಿದ್ದು, ಗುರುವಾರ ಸ್ಥಳಕ್ಕೆ ತಹಶೀಲ್ದಾರ್ ಡಾ. ಸುಮಂತ್ ಮತ್ತು ರಾಜಸ್ವ ನಿರೀಕ್ಷಕರು ಭೇಟಿ ನೀಡಿ ಬೀಗ ಹಾಕಿದ್ದಾರೆ.

ನರಸೀಪುರ ಗ್ರಾಮದಲ್ಲಿ ಕುರುಬ ಸಮುದಾಯದ 200 ಕುಟುಂಬಗಳು, ಪರಿಶಿಷ್ಟ ಜಾತಿ ಸಮುದಾಯದ 15 ಕುಟುಂಬಗಳು ವಾಸವಾಗಿವೆ. ಗ್ರಾಮದ ತಿರುಮಲೇಶ್ವರ ದೇವಾಲಯಕ್ಕೆ ಪರಿಶಿಷ್ಟ ಜಾತಿಯವರು ಹಿಂದಿನಿಂದಲೂ ಪ್ರವೇಶಸುತ್ತಿರಲಿಲ್ಲ ಎನ್ನಲಾಗಿದೆ.

ಮಂಗಳವಾರ ಪರಿಶಿಷ್ಟ ಜಾತಿಯ ಇಬ್ಬರು ಯುವಕರು ದೇವಾಲಯದೊಳಗೆ ಹೋಗುವುದಾಗಿ ತಹಶೀಲ್ದಾರ್ ಗೆ ಮನವಿ ಮಾಡಿದ್ದಾರೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲವೆಂದು ಅಧಿಕಾರಿಗಳು ಹೇಳಿದ್ದಾರೆ. ಪೂಜೆ ನಡೆಯುವಾಗ ಯುವಕರು ದೇವಾಲಯದೊಳಗೆ ಪ್ರವೇಶಿಸಿದ್ದು, ಈ ವೇಳೆ ಕುರುಬ ಸಮುದಾಯದವರು ಪೂಜೆ ಸಲ್ಲಿಸದೇ ತೆರಳಿದ್ದಾರೆ. 2012ರಲ್ಲಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು, ಹಿಂದಿನಿಂದಲೂ ಪೂಜೆ ಸಲ್ಲಿಸುತ್ತಿದ್ದ ಅರ್ಚಕರು ಪೂಜೆ ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಅಧಿಕಾರಿಗಳು ದೇವಾಲಯಕ್ಕೆ ಬೀಗ ಹಾಕಿದ್ದಾರೆ. ಗುರುವಾರ ಹಿರಿಯ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸಭೆ ನಡೆಸಿದ್ದು, ಸಮಸ್ಯೆ ಬಗೆಹರಿಸಲಾಗಿದೆ. ಶುಕ್ರವಾರದಿಂದ ದೇವಾಲಯದಲ್ಲಿ ಪೂಜೆ ನಡೆಸಲಾಗುವುದು ಎಂದು ಹೇಳಲಾಗಿದೆ.

ವರದಿ : C ಕೊಟ್ರೇಶ್ tv8newskannada

Related Articles

Leave a Reply

Your email address will not be published. Required fields are marked *

Back to top button