ದೇಶ

ಕ.ರಾ.ಸ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಡಾ.ರೇಣುಕಾದೇವಿ ಆಯ್ಕೆ

ಚಾಮರಾಜನಗರ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ
ಡಾ.ರೇಣುಕಾದೇವಿ ಆಯ್ಕೆ

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಫಲಿತಾಂಶ ಹೊರಬಿದ್ದಿದೆ.

ಖಜಾಂಚಿಯಾಗಿ ಶಿವಕುಮಾರಯ್ಯ.ಎಂ, ರಾಜ್ಯ ಪರಿಷತ್ ಸ್ಥಾನಕ್ಕೆ ನಟರಾಜು ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ರೇಣುಕಾದೇವಿ ಅವರು 37 ಮತಗಳನ್ನು ಪಡೆದು ಜಿಲ್ಲಾಧ್ಯಕ್ಷರಾದರೆ, ಶಿವಕುಮಾರಯ್ಯ ಅವರು 37 ಮತ ಪಡೆದು ಖಜಂಚಿಯಾಗಿ, ನಟರಾಜ್ 36 ಮತ ಪಡೆದು ರಾಜ್ಯ ಪರಿಷತ್ ಸ್ಥಾನಕ್ಕೆ ಆಯ್ಕೆ ಯಾಗಿದ್ದಾರೆ.

ನೂತನವಾಗಿ ಜಿಲ್ಲಾ ಘಟಕದ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಡಾಕ್ಟರ್.ರೇಣುಕಾದೇವಿ ಅವರು ಮಾತನಾಡಿ, ಮೊದಲಿಗೆ ನೌಕರ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.ಸರ್ಕಾರಿ ನೌಕರರ ಅಭಿವೃದ್ಧಿಗೆ ನಾನು ಕೆಲಸ ಮಾಡುತ್ತೇನೆ ಹಾಗೆಯೇ ನೌಕರರ ಭವನ ಸೇರಿದಂತೆ ಇತರೆ ಮಹತ್ವಕಾಂಕ್ಷಿ ಕೆಲಸಗಳನ್ನು ಮಾಡಲು ಮುಂದಾಗುತ್ತೇನೆ ಎಂದರು

ನಂತರ ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಣೆ ಮಾಡಿ ಜಿಲ್ಲಾ ನ್ಯಾಯಾಲಯದ ರಸ್ತೆಯಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿದರು

ವರದಿ: ಇರಸವಾಡಿ ಸಿದ್ದಪ್ಪಾಜಿ, ಟಿವಿ8 ನ್ಯೂಸ್ ಕನ್ನಡ, ಚಾಮರಾಜನಗರ

Related Articles

Leave a Reply

Your email address will not be published. Required fields are marked *

Back to top button