ರಾಜ್ಯಸುದ್ದಿ

ಹಾಸನ ಸಮಾವೇಶಕ್ಕೆ ಟ್ವಿಸ್ಟ್: “ಜನಕಲ್ಯಾಣ ಸಮಾವೇಶ”ವಾಯ್ತು ಸಿದ್ದು ಸ್ವಾಭಿಮಾನಿ ಸಮಾವೇಶ

ಹಾಸನ : ದಲ್ಲಿ ಸಿಎಂ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ ಹೊಸದೇ ರಂಗು ಪಡೆದಿದೆ. ಸಿದ್ದರಾಮಯ್ಯ ಮಾಡಿದ ಬೌಲಿಂಗ್ ಗೆ ಡಿಕೆಶಿ ತಮ್ಮದೇ ರೀತಿಯಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ.. ಇದೀಗ ಹಾಸನದಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ ಸಮಾವೇಶದ ರೂಪುರೇಷೇ, ದಿಕ್ಕೇ ಬದಲಾಗಿದೆ.

ಸದ್ಯ ಸ್ವಾಭಿಮಾನ ಸಮಾವೇಶ ನಡೆಯುತ್ತಾ.. ಹಾಗಿದ್ದರೆ ಡಿಕೆಶಿ ಮಾಡಿದ ಬದಲಾವಣೆ ಏನು ನೋಡೋಣ.. ಅದಕ್ಕೂ ಮುನ್ನ ನೀವಿನ್ನೂ ನಮ್ಮ ಎಐಎನ್ ಕನ್ನಡ ನ್ಯೂಸ್ ಚಾನೆಲ್ ಗೆ ಸಬ್ ಸ್ಕ್ರೈಬ್ ಆಗಿಲ್ಲ ಅದರೆ ಈ ಕೂಡಲೇ ಬೆಲ್ ಬಟನ್ ಕ್ಲಿಕ್ ಮಾಡಿ,ನ ತಾಜಾ ಸುದ್ದಿಗಳ ಅಪ್ಡೇಟ್ ಪಡೆಯಿರಿ..

ಮೂರು ಕ್ಷೇತ್ರಗಳ ಭರ್ಜರಿ ಗೆಲುವಿನ ನಂತರ ಹೆಚ್ ಡಿ ದೇವೇಗೌಡರ ತವರೂರಿನಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಸ್ವಾಭಿಮಾನಿ ಸಮಾವೇಶದ ಹೆಸರಲ್ಲಿ ರಣಕಹಳೆ ಮೊಳಗಿಸಿಲು ತಯಾರಾಗಿದ್ದರು. ಪಕ್ಷದಲ್ಲಿ ಅಪಸ್ವರಗಳು ಎದ್ದಿದ್ದರೂ ಹೈಕಮಾಂಡ್ ನಾಯಕರ ಮನವೊಲಿಸಿದ ಸಿದ್ದು, ಸಮಾವೇಶಕ್ಕೆ ಸಮ್ಮತಿಯನ್ನು ಪಡೆದಿದ್ದರು.. ಸಿದ್ದರಾಮಯ್ಯರ ಮಾತಿಗೆ ಮನ್ನಣೆ ನೀಡಿದ ಹೈಕಮಾಂಡ್ ಹಾಸನದಲ್ಲಿ ಸಮಾವೇಶಕ್ಕೆ ಹಸಿರು ನಿಶಾನೆ ತೋರಿತ್ತು‌. ಜೊತೆಗೆ ರಾಜ್ಯ ಕಾಂಗ್ರೆಸ್ ಘಟಕಕ್ಕೂ ಸಮಾವೇಶದ ಬಗ್ಗೆ ಸೂಚನೆ ನೀಡಿತ್ತು..

ಹೈಕಮಾಂಡ್ ಸೂಚನೆ ಬೆನ್ನಲ್ಲೇ ಸಿಎಂ ಸ್ವಾಭಿಮಾನಿ ಆಟಕ್ಕೆ ಡಿಕೆಶಿ ಎಂಟ್ರಿಯಾದರು.. ಸಮಾವೇಶದ ರೂವಾರಿಯಾಗಿ ಇಡೀ ಕಾರ್ಯಕ್ರಮದ ರೂಪುರೇಷೆಯನ್ನೇ ಬದಲಾಯಿಸಿಬಿಟ್ಟರು.. ಸಮಾವೇಶದ ಸಿದ್ದತೆಯ ಬಗ್ಗೆ ಸಭೆ ನಡೆಸಿದ ಡಿಸಿಎಂ ಡಿಕೆಶಿವಕುಮಾರ್ ಸಮಾವೇಶದ ಚಿತ್ರಣವನ್ನೇ ಬದಲಾಯಿಸಿದ್ದಾರೆ.. ಸಮಾವೇಶದ ಹೆಸರನ್ನೇ ಬದಲಾಯಿಸಿ ಇದ್ದಾರೆ.

ಎಸ್.. ಹಾಸನದಲ್ಲಿ ನಡೆಯಬೇಕಿದ್ದ ಸಿಎಂ ಸ್ವಾಭಿಮಾನಿ ಸಮಾವೇಶವನ್ನು ಜನಕಲ್ಯಾಣ ಸಮಾವೇಶವೆಂದು ಕಾಂಗ್ರೆಸ್ ಬದಲಾಯಿಸಿದೆ.. ಈ ಕುರಿತು ಪೋಸ್ಟರ್ ಕೂಡ ಬಿಟ್ಟಿದೆ. ಇದರ ಕಾರಣಕರ್ತ ಡಿಕೆಶಿ ಎಂದರೆ ತಪ್ಪಾಗಲಾರದು.. ಸ್ವತಃ ಡಿಕೆಶಿಯವರೇ ಹಾಸನಕ್ಕೆ ತೆರಳಿ ಸಭೆಗಳನ್ನು ನಡೆಸಿ, ಸಮಾವೇಶದ ಸಿದ್ಧತೆಯನ್ನು ನಡೆಸುತ್ತಿದ್ದಾರೆ.. ಇದು ಪಕ್ಷದ ಸಮಾವೇಶ, ಹೀಗಾಗಿ ಎಲ್ಲರೂ ಸಹ ಒಗ್ಗಟ್ಟಾಗಿ ಮಾಡ್ತೇವೆ ಎಂದಿದ್ದಾರೆ..

ಇನ್ನೂ ಸಮಾವೇಶದ ಹೆಸರನ್ನು ಬದಲಿಸಿರುವ ಬಿಜೆಪಿ ಟೀಕೆ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಆರ್ ಅಶೋಕ್, ಸಿಎಂ ಸಿದ್ದರಾಮಯ್ಯ ಅವರ ಸ್ವಾಭಿಮಾನಿ ಸಮಾವೇಶ ಈಗ ಡಿಸಿಎಂ ಡಿ. ಕೆ. ಶಿವಕುಮಾರ್‌ ಅವರ ಜನಕಲ್ಯಾಣ ಸಮಾವೇಶ ಆಯ್ತು!’ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ. ಕೆ. ಶಿವಕುಮಾರ್ ಅವರ ನಡುವೆ ಅದೇನು ‘ಒಪ್ಪಂದ’ ಆಗಿದೆಯೋ, ಆ ‘ಒಪ್ಪಂದ’ ಕಾರ್ಯಗತ ಆಗೋಲ್ಲ ಅನ್ನೋ ಅನುಮಾನ ಡಿ. ಕೆ. ಶಿವಕುಮಾರ್ ಅವರಿಗೆ ಯಾಕೆ ಕಾಡುತ್ತಿದೆಯೋ ಗೊತ್ತಿಲ್ಲ, ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಶೀಘ್ರದಲ್ಲೇ ದೊಡ್ಡ ರಾಜಕೀಯ ಸ್ಫೋಟವಾಗುವ ಎಲ್ಲ ಲಕ್ಷಣಗಳಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ’ ಎಂದು ಅಂದಾಜಿಸಿದ್ದಾರೆ. ಎಂದು ಟೀಕಿಸಿದ್ದಾರೆ.

ಸದ್ಯ ಹಾಸನ ಸಮಾವೇಶದ ಸಂಪೂರ್ಣ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡಿದ್ದಾರೆ ಡಿಸಿಎಂ ಡಿಕೆಶಿ.. ಆದರೆ ಸ್ವಾಭಿಮಾನಿ ಸಭೆಯ ಯೋಜನೆ ರೂಪಿಸಿದ ಸಿದ್ದು ಮಾತ್ರ ಸೈಲೆಂಟ್ ಆಗಿದ್ದಾರೆ. ಒಟ್ನಲ್ಲಿ ಹಾಸನದ ಕಾಂಗ್ರೆಸ್ ಸಮಾವೇಶ ಹೇಗಿರಲಿದೆ, ಯಾವೆಲ್ಲಾ ನಾಯಕರು ಬರ್ತಾರೆ.. ಸಿದ್ದು ಮುಂದಿನ ನಡೆ ಏನು ಕಾದು ನೋಡಬೇಕಿದೆ.

ವರದಿ: ಮಹಮ್ಮದ್ ಶಫಿ tv8newskannada ಹಾಸನ

Related Articles

Leave a Reply

Your email address will not be published. Required fields are marked *

Back to top button