ಡಿ.6ಕ್ಕೆ ಬಹುಜನಸಮಿತಿಯಿಂದ ಅಂಬೇಡ್ಕರ್ ಅವರ 68ನೇ ಪರಿನಿಬ್ಬಾಣ ದಿನಾಚರಣೆ

ದೇವನಹಳ್ಳಿ : ಡಿ.6ರಂದು ಮಹಾತ್ಮ ಹಾಗೂ ಮಾನವತಾವಾದಿ ಸಂವಿಧಾನ ಶಿಲ್ಪಿ ಭಾರತರತ್ನ÷ ಬಿ.ಆರ್.ಅಂಬೇಡ್ಕರ್ ಅವರ 68ನೇ ವರ್ಷದ ಪರಿನಿಬ್ಬಾಣ ಹಾಗೂ ವಿಚಾರ ಅರಿವು ಆಂದೋಲನ ಕಾರ್ಯಕ್ರಮವನ್ನು ಪಟ್ಟಣದ ಹಳೆ ಬಸ್ ನಿಲ್ದಾಣದ ಸಂತೇ ಮೈದಾನದಲ್ಲಿ ಹಮ್ಮಿಕೊಳ್ಳಾಗಿದ್ದು ಜಿಲ್ಲೆಯಾಧ್ಯಂತ ಹೆಚ್ಚಿನ ಜನ ಭಾಗವಹಿಸಿ ಎಂದು ಬಹುಜನ ಸೇವಾಸಮಿತಿ ರಾಜ್ಯಾಧ್ಯಕ್ಷ ವಿ.ಪೂಜಪ್ಪ ತಿಳಿಸಿದ್ದಾರೆ.
ದೇವನಹಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಪ್ರತಿಯೊಬ್ಬರು ಜೀವನದಲ್ಲಿ ಮಹಾ ನಾಯಕನ ಆದರ್ಶಗಳು ಮತ್ತು ತತ್ವ ಸಿದ್ಧಾಂತಗಳನ್ನು ಪಾಲಿಸಿದ್ದಲ್ಲಿ ಮಾತ್ರ ಅವರಿಗೆ ನಿಜವಾದ ನಮನಗಳನ್ನು ಸಲ್ಲಿಸಿದಂತೆ ಭಾರತ ದೇಶಕ್ಕೆ ಎಲ್ಲಾ ಗ್ರಂಥಗಳಿಗೂ ಮಿಗಿಲಾದ ಭಾರತ ಸಂವಿಧಾನದ ಗ್ರಂಥವನ್ನು ಅಂಬೇಡ್ಕರ್ ಅವರು ನೀಡಿದ್ದಾರೆ ಅದರಲ್ಲಿರುವ ಸಾರಾಂಶವನ್ನು ಅರಿತು ಸಮಾಜದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವವನ್ನ ಬೆಳೆಸಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ತಾಲೂಕಿನ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರನ್ನು ಸನ್ಮಾನಿಸಲಾಗುವುದು ಎಂದರು.

ಕಾರ್ಯಕ್ರಮವನ್ನು ಪ್ರಜಾವಿಮೋಚನಾ ಚಳುವಳಿ(ಎಸ್) ರಾಜ್ಯ ಕಾರ್ಯದರ್ಶಿ ದಾಸರಬೀದಿ ಮುರಳಿ ಉದ್ಟಾಟಿಸಲಿದ್ದಾರೆ. ಬಿ.ಎಸ್.ಎಸ್. ರಾಜ್ಯಗೌರವಾಧ್ಯಕ್ಷ ತಿಮ್ಮರಾಯಪ್ಪ, ಅನಿರುದ್ಧ ಬಂತೇಜರವರು, ಬಿ.ಟಿ.ಲಲಿತಾನಾಯಕ್, ನಿವೃತ್ತ ಕೆ.ಎಸ್.ಎಸ್ ಅಧಿಕಾರಿ ಎಲ್.ಸಿ.ನಾಗರಾಜ್, ಆರ್.ಪಿ.ಐ. ರಾಷ್ಟ್ರೀಯ ಅಧ್ಯಕ್ಷ ವೆಂಕಟಸ್ವಾಮಿ, ತಹಶಿಲ್ದಾರ್ ಎಚ್.ಬಾಲಕೃಷ್ಣ, ಕ್ಷೇತ್ರಶಿಕ್ಷಣಾಧಿಕಾರಿ ಸುಮಾ, ಕಾರಹಳ್ಳಿ ಶ್ರೀನಿವಾಸ್, ಪುರಸಭೆ ಸದಸ್ಯ ಬಾಲರಾಜ್, ಸೇರಿದಂತೆ ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ವಿವಿಧ ಇಲಾಖೆಯ ಅಧಿಕಾರಿಗಳು, ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ.
ಇದೆ ವೇಳೆ ಬಹುಜನ ಸೇವಾ ಸಮಿತಿ ರಾಜ್ಯಪ್ರಧಾನ ಕಾರ್ಯದರ್ಶಿ ಕಾರಹಳ್ಳಿ ಮುನಿರಾಜು, ರಾಜ್ಯ ಹಿಂದುಳಿದ ವರ್ಗಗಳ ಕಾರ್ಯದ್ಯಕ್ಷ ಜೊಸೇಪ್, ತಾಲೂಕು ಕಾರ್ಯದ್ಯಕ್ಷ ಮಾರುತಿ, ನಗರ ಹಿಂದುಳಿದ ಘಟಕದ ಕಾರ್ಯದರ್ಶಿ ನರಸಿಂಹಮೂರ್ತಿ, ಮನುವಡೇರಹಳ್ಳಿ, ಮುಂತಾದವರು ಇದ್ದರು.