ಕನ್ನಡ ಉಳಿವಿಗಾಗಿ ಆಟೋ ಚಾಲಕರ ಕೊಡುಗೆ ಅಪಾರವಾದದು: ಕೆಲ್ಲಂಬಳ್ಳಿ ಸೋಮನಾಯಕ

ಚಾಮರಾಜನಗರ,ನ.30; ಮಾತೃಭಾಷೆ ಕನ್ನಡ ಉಳಿವಿಗಾಗಿ ಆಟೋ ಮಾಲೀಕರು ಮತ್ತು ಚಾಲಕರ ಕೊಡುಗೆ ಅಪಾರವಾದದ್ದು ಎಂದು ಮೈಸೂರು ಮತ್ತುಚಾಮರಾಜನಗರ ಜಿಲ್ಲಾ ನಾಯಕ ಜನಾಂಗದ ಅಧ್ಯಕ್ಷ ಕೆಲ್ಲಂಬಳ್ಳಿ ಸೋಮನಾಯಕ ಅವರು ತಿಳಿಸಿದರು.
ನಗರದ ನಂಜನಗೂಡು ಸರ್ಕಲ್ ಎಂ.ಡಿ.ಸಿ.ಸಿ ಬ್ಯಾಂಕ್ ಹತ್ತಿರ ಇರುವ ಸರ್.ಎಂ.ವಿಶ್ವೇಶ್ವರಯ್ಯ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು,ನಮ್ಮ ರಾಜ್ಯದಲ್ಲಿ ನಾನಾ ಭಾಷೆಗಳ ಸೇರ್ಪಡೆಯಾಗಿದೆ ಆದರೆ ನಮ್ಮ ಮಾತೃಭಾಷೆ ಕನ್ನಡ ಉಳಿಯುವಿಗೆ ಶ್ರಮಿಸುತ್ತಿರುವವರೆಂದರೆ ಅದು ಆಟೋ ಮಾಲಿಕರು ಮತ್ತು ಚಾಲಕರು.ಕನ್ನಡ,ನಾಡು,ನುಡಿ ಜಲಕ್ಕೆ ಹೋರಾಟ ಆಟೋ ಚಾಲಕರಿಂದಲೂ ನಡೆಯುತ್ತಿದೆ. ಅವರ ಜೀವನ ಹೋರಾಟದ ಬದುಕಾಗಿದೆ ಇವರಿಗೆ ಸಂಪತ್ತೇನಾದರೂ ಇದ್ದರೆ ಇನ್ನೂ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದರು. ಇದು ಸಂಪತ್ತನ್ನು ಹೊಂದಿರುವ ವ್ಯಕ್ತಿಗಳಿಗೆ ಎಚ್ಚರಿಕೆಯಾಗಬೇಕು. ಬಂದಂತಹ ಸರ್ಕಾರಗಳ ಮಂತ್ರಿಗಳಾಗಲೀ,ಶಾಸಕರಾಗಲೀ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಇನ್ನೂ ಮಾಡಿಲ್ಲ. ಇವರು ಹಗಲು ರಾತ್ರಿ ಎನ್ನದೆ ಹೋರಾಟದ ಬದುಕನ್ನು ಮಾಡುತ್ತಿದ್ದಾರೆ ಇವರ ಬಗ್ಗೆ ಯಾವುದೇ ಶಾಸಕರಾಗಲೀ ಅಸೆಂಬ್ಲಿಯಲ್ಲಿ ಚರ್ಚೆ ಮಾಡಿರುವುದನ್ನು ನಾನು ಕೇಳಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ನನಗೆ ಅವಕಾಶಗಳು ದೊರೆತರೆ ಮೊದಲ ಆದ್ಯತೆ ಇವರಿಗೆ ನೀಡುತ್ತೇನೆ ಅಲ್ಲದೆ ಸರ್ಕಾರಗಳು ಆಟೋ ಚಾಲಕರ ಬಗ್ಗೆ ಗಮನಹರಿಸಿ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.
ಇದೇ ವೇಳೆ ವಿವಿಧ ಮುಖಂಡರಿಗೆ ಸನ್ಮಾನಿಸಿ ಗೌರವಿಸಿದರು ಹಾಗೂ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದಲ್ಲಿ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಬಿಜೆಪಿ ಜಿಲ್ಲಾ ಎಸ್.ಟಿ.ಮೋರ್ಚಾ ಅಧ್ಯಕ್ಷ ಸಿ.ಎಸ್.ಚಂದ್ರಶೇಖರ್,ಉಪಾಧ್ಯಕ್ಷ ಬುಲೆಟ್ ಚಂದ್ರು, ಸಂತೋಷ್ (ಅಪ್ಪು), ನಗರಸಭಾ ಮಾಜಿ ಸದಸ್ಯ ಚಂಗುಮಣಿ,ಎಂ.ಡಿ.ಸಿ ಸಿ ಬ್ಯಾಂಕ್ ನ ವ್ಯವಸ್ಥಾಪಕ ಮಂಜು, ಮುಖಂಡರಾದ ನಾಗೇಶ್,ವಿಶ್ವ, ಪ್ರಶಾಂತ್,ಮಂಜುನಾಥ್, ಮಂಜು.ಡಿ.ಸಿ,ಗಣೇಶ್, ಮಹದೇವಶೆಟ್ಟಿ, ಮಣಿ, ಹೇಮಂತ್, ಮಂಜುಭಕ್ತ, ಸತೀಶ್, ಲಚ್ಚಿ, ಸೂರಿ, ನಟ, ಕುಮಾರ್, ಕುಮಾರ್ ಡಾಬಾ ರಮೇಶ್ ಇದ್ದರು.
ವರದಿ: ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ