ಕಾಳಿಕಾದೇವಿ ದೇವಸ್ಥಾನದ ಜೀರ್ಣೋದ್ದಾರಕ್ಕೆ ಧರ್ಮಸ್ಥಳ ಸಂಘದಿಂದ150000/ರೂ ಡಿಡಿ ವಿತರಣೆ.

ಕೊಟ್ಟೂರು: ಈ ದಿನ ಕೊಟ್ಟೂರು ಯೋಜನಾ ವ್ಯಾಪ್ತಿಯ ಸಿರಿಮಠ ವಲಯದ ದೂಪದಹಳ್ಳಿ ಕಾರ್ಯಕ್ಷೇತ್ರದ ಶ್ರೀ ಕಾಳಿಕಾದೇವಿ ದೇವಸ್ಥಾನದ ಜೀರ್ಣೋದ್ದಾರ ಕೆಲಸಕ್ಕೆ ಧರ್ಮಸ್ಥಳದ ಧರ್ಮಧಿಕಾರಿಗಳಾದ ಡಾ. ಡಿ. ವೀರೇಂದ್ರ. ಹೆಗ್ಗಡೆಯವರು ಮಂಜೂರು ಮಾಡಿದ 150000/ರೂ ಡಿಡಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಯೂನಿಯನ್ ಬ್ಯಾಂಕ್ ಪ್ರಬಂಧಕರಾದ ಸುರೇಶ ದಿದ್ದಿಮನಿ ಉದ್ಘಾಟಕರಾಗಿ ವಿಜಯ ನಗರ ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ಸತೀಶ ಶೆಟ್ಟಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಹಂಪಿಬಾಯಿ ಉಪಾಧ್ಯಕ್ಷರಾದ ಟಿ ರೇಖಾ ವಿಶ್ವ ಕರ್ಮ ಸಮಾಜದ ಅಧ್ಯಕ್ಷರಾದ ಬಿ ಕೊಟ್ರಪ್ಪ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಯಶೋಧ ಹಾಗೂ ಊರಿನ ಗಣ್ಯರಾದ ಎಸ್ ಬಸವನಗೌಡರು ಕೊಟ್ಟೂರು ತಾಲೂಕಿನ ಯೋಜನಾಧಿಕಾರಿಗಳಾದ ನವೀನ ಕುಮಾರ ಎನ್ ಡಿ ವಲಯದ ಮೇಲ್ವಿಚಾರಕರಾದ ಶ್ರೀಮತಿ ಸಾವಿತ್ರಿ ಜಾಡರ್ ಸೇವಾಪ್ರತಿನಿಧಿ ಯೋಗೀಶ ಹಾಗೂ ಗ್ರಾಮದ ಉಪಸ್ಥಿತರಿದ್ದರು. ಅವರ ಸಮ್ಮುಖದಲ್ಲಿ ಡಿ ಡಿ ವಿತರಣೆ ಮಾಡಲಾಯಿತು.