ಪೂರಕ ಪೌಷ್ಠಿಕ ಆಹಾರ ವಿತರಣೆ ಜವಾಬ್ದಾರಿಯಿಂದ ಮುಕ್ತಗೊಳಿಸಲು ಮನವಿ

ಕೊಟ್ಟೂರು : ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ವ್ಯವಸ್ಥೆ ನಡೆಯುತ್ತಿದ್ದು, ಅದರ ಜೊತೆ ಅಜೀಂ ಪ್ರೇಮ್ಜೀ ಫೌಂಡೇಷನ್ ಸಹಭಾಗಿತ್ತವದಲ್ಲಿ ಪೂರಕ ಪೌಷ್ಠಿಕ ಆಹಾರವಾದ ಮೊಟ್ಟೆ, ಬಾಳೆಹಣ್ಣು, ಶೇಂಗ ಚಿಕ್ಕಿ ವಿತರಣೆ ಮಾಡಲಾಗುತ್ತಿದೆ. ಸದರಿ ಪೂರಕ ಪೌಷ್ಠಿಕ ಆಹಾರ ವ್ಯವಸ್ಥೆಯನ್ನು ಮಾಡಲು ಮುಖ್ಯಗುರುಗಳು ಮಾರುಕಟ್ಟೆಗೆ ಹೋಗಿ ಖರೀದಿ ಮತ್ತು ಸಾಗಾಣಿಕೆ ಮಾಡಬೇಕಾಗಿರುತ್ತದೆ. ಇದರಿಂದ ಗುಣಾತ್ಮಕ ಶಿಕ್ಷಣ ನೀಡಲು ಅಡಚಣೆ ಯಾಗುತ್ತಿದೆ. ಆದ್ದರಿಂದ ಬಿಸಿಊಟದ ಜೊತೆ ನೀಡುವ ಪೂರಕ ಪೌಷ್ಠಿಕ ಆಹಾರಗಳನ್ನು ಖರೀದಿ, ಸಾಗಾಣಿಕೆ ಹಾಗೂ ವಿತರಣೆ ಜವಾಬ್ದಾರಿ ಯಿಂದ ಮುಕ್ತಗೊಳಿಸಿ ಈ ಜವಾಬ್ದಾರಿಯನ್ನು ಬೇರೆ ವ್ಯಕ್ತಿಗಳಿಗೆ ಅಥವಾ ಸಂಘಸಂಸ್ಥೆಗಳಿಗೆ ವಹಿಸಿ ಸರ್ಕಾರಿ ಶಾಲಾ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಶಿಕ್ಷಕರ ಸಂಘ, ಸರ್ಕಾರಿ ನೌಕರರ ಸಂಘದಿಂದ ಜೆ ಕೆ ಅಮರೇಶ್ ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಮಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಮುತ್ತೇಶ, ನಾಗೇಶ ಪಿ, ಶಶಿಕಲಾ ಕೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಿದ್ದಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ- ಯೋಗೀಶ್ವರ ದಿನ್ನೆ, ಉಪಾಧ್ಯಕ್ಷ- ಸಿದ್ದಪ್ಪ ಜಿ, ರಾಜ್ಯಪರಿಷತ್ ಸದಸ್ಯರಾದ ಎಸ್ ಎಂ ಗುರುಬಸವರಾಜ, ಕಾರ್ಯದರ್ಶಿ- ರಮೇಶ ಕೆ, ಜಂಟಿ ಕಾರ್ಯದರ್ಶಿ- ಶಿವಕುಮಾರ್ ಎಂ, ಸಂಘಟನಾ ಕಾರ್ಯದರ್ಶಿ- ಗುರುಬಸವರಾಜ ಎ ವಿ, ಚನ್ನೇಶಪ್ಪ , ಮುಖ್ಯಗುರುಗಳು ಹಾಗೂ ಸಹಶಿಕ್ಷಕರು ಹಾಜರಿದ್ದರು.
ವರದಿ : C ಕೊಟ್ರೇಶ್ tv8kannada ಬಳ್ಳಾರಿ