IPL 2025 RCB: ಈ ಬಾರಿ ಆರ್‌ಸಿಬಿಗೆ ಕಪ್ ಗೆಲ್ಲಿಸಲಿದೆ BJP ಆಟಗಾರರು!

ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಂತ ಖ್ಯಾತ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಸ್ಥಾನ. ಈ ಲೀಗ್‌ನಲ್ಲಿ ಈ ತಂಡ ಒಮ್ಮೆಯೂ ಪ್ರಶಸ್ತಿ ಗೆಲ್ಲದೇ ಇದ್ದರೂ, ಈ ತಂಡದ ಮೇಲೆ ಅಭಿಮಾನ ಮಾತ್ರ ಕಡಿಮೆ ಆಗಲೇ ಇಲ್ಲ. ಕಳೆದ ಬಾರಿ ಆರ್‌ಸಿಬಿಗೆ ಕೆಜಿಎಫ್ ಮುಕುಟ ತೊಡಿಸಲಿದೆ ಎಂದು ಎಲ್ಲರೂ ಲೆಕ್ಕಾಚಾರ ಹಾಕಿಕೊಂಡಿದ್ದರು.
ಆದರೆ ಈಗ ಬಿಜೆಪಿ ಆರ್‌ಸಿಬಿ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸುವಲ್ಲಿ ಶ್ರಮಿಸಲಿದೆ ಎಂದು ತಿಳಿಸುತ್ತಿದ್ದಾರೆ. ಹಾಗಿದ್ದಾರೆ ಬಿಜೆಪಿಗೂ ಹಾಗೂ ಆಟಕ್ಕೂ ಏನು ಸಂಬಂಧ ಎಂಬ ಬಗ್ಗೆ ವರದಿ ಇಲ್ಲಿದೆ.17ನೇ ಆವೃತ್ತಿಯಲ್ಲಿ ಕೆಜಿಎಫ್ ಖ್ಯಾತಿಯ ಸ್ಟಾರ್ ಆಟಗಾರರು ತಂಡದಲ್ಲಿದ್ದು. ವಿರಾಟ್ ಕೊಹ್ಲಿ (ಕೆ), ಗ್ಲೇನ್ (ಜಿ) ಮ್ಯಾಕ್ಸ್‌ವೆಲ್, ಫಾಫ್ (ಎಫ್) ಡುಪ್ಲೇಸಿಸ್ ರೂಪದಲ್ಲಿ ಇದ್ದರು. ಆದರೆ ಈ ಬಾರಿ ಈ ಮೂರು ಆಟಗಾರರು ಬೇರೆ ಬೇರೆ ತಂಡಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಅಭಿಮಾನಿಗಳು ಈಗ ಬಿಜೆಪಿಯ ಮೊರೆ ಹೋಗಿದ್ದಾರೆ. ಹೌದು ಈ ಬಾರಿ ಆರ್‌ಸಿಬಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ಬಿಜೆಪಿ ಶ್ರಮಿಸಲಿದೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಕೆಜಿಎಫ್ ಹೋಯಿತು, ಬಿಜೆಪಿ ಬಂತು
ಐಪಿಎಲ್ ಪ್ರಶಸ್ತಿಯ ಕನಸನ್ನು ಈ ಬಾರಿ ಬಿಜೆಪಿ ನಿವಾರಿಸಲಿದೆ ಎಂದು ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ. ಈ ಮೂವುರ ಆಟಗಾರರು ತಮ್ಮದೇ ಕ್ಷೇತ್ರದಲ್ಲಿ ಭಾರೀ ಹೆಸರು ಮಾಡಿದವರು. ಹೀಗಾಗಿ ಈ ಮೂವರ ಆಟಗಾರರ ಮೇಲೆ ಅಭಿಮಾನಿಗಳಿಗೆ ಅಪಾರ ಅಭಿಮಾನ ಇದ್ದು, ಆರ್‌ಸಿಬಿಗೆ ಬಿಜೆಪಿ ಬಲ ಇದೆ ಎಂದು ಹೇಳುತ್ತಿದ್ದಾರೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಮ್ಯಾನೇಜ್ಮೆಂಟ್ ಅಭಿಮಾನಿಗಳು ಅಂದುಕೊಂಡ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ವಿಫಲವಾಗಿದೆ. ಆದರೆ ಗೆಲುವಿನ ತಂತ್ರವನ್ನು ರೂಪಿಸಬಲ್ಲ ಬೌಲರ್‌ಗಳು ಇದ್ದಾರೆ ಎಂಬ ಖುಷಿ ಮಾತ್ರ ಅಭಿಮಾನಿಗಳ ಮುಖದಲ್ಲಿದೆ. ಈ ನೂತನ ಬಿಜೆಪಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಕುತೂಹಲಕ್ಕೆ ಇನ್ನು ಉತ್ತರ ಸಿಕ್ಕಿಲ್ಲ.
ಬಿಜೆಪಿ ಎಂದರೇನು?
ಅಂದಹಾಗೆ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಭಾರೀ ಮೊತ್ತವನ್ನು ನೀಡಿ ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್, ಸ್ವಿಂಗ್ ಸುಲ್ತಾನ್ ಭುವನೇಶ್ವರ್ ಕುಮಾರ್ ಹಾಗೂ ಇಂಗ್ಲೆಂಡ್ ತಂಡದ ಫಿಲ್ ಸಾಲ್ಟ್ ಅವರಿಗೆ ಮಣೆ ಹಾಕಿದೆ. ಅಭಿಮಾನಿಗಳು ಈ ಹೆಸರಗಳನ್ನು ಕಂಡು ಯುದ್ಧ ಗೆದ್ದ ಸಂಭ್ರಮದಲ್ಲಿದ್ದಾರೆ. ಆದರೆ ಈ ತಂಡಕ್ಕೆ ರಾಹುಲ್, ರಿಷಭ್ ಇಬ್ಬರಲ್ಲಿ ಒಬ್ಬರು ಇರಬೇಕಿತ್ತು ಎಂಬುದು ಅಭಿಮಾನಿಗಳ ವಾದ.
ಭುವನೇಶ್ವರ್ (ಬಿ) ಕುಮಾರ್,

ಜೋಶ್ (ಜೆ) ಹ್ಯಾಜಲ್‌ವುಡ್),

ಫಿಲ್ (ಪಿ) ಸಾಲ್ಟ್

ಈ ಮೂರು ತಮ್ಮ ಜವಾಬ್ದಾರಿಯನ್ನು ಅರಿತು ಆಡಿದರೆ, ಯಾವುದೇ ದೊಡ್ಡ ಗುರಿಯನ್ನು ಸುಲಭಾವಗಿ ಮೆಟ್ಟಿ ನಿಲ್ಲಬಹುದು ಎಂಬುದೇ ಅಭಿಮಾನಿಗಳ ಆಶಯ. 17 ಆವೃತ್ತಿಗಳಲ್ಲಿ ಮಾಯಾ ಜಿಂಕೆಯಂತೆ ಕಾಡಿದ ಐಪಿಎಲ್ ಟ್ರೋಫಿಯನ್ನು ಈ ಬಾರಿಯಾದರೂ ಬಿಜೆಪಿ ಮುಂದಾಳತ್ವದಲ್ಲಿ ಆರ್‌ಸಿಬಿ ಗೆಲ್ಲುತ್ತದಾ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಬರಹ: ಮಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು