ಇತ್ತೀಚಿನ ಸುದ್ದಿ

ಸರಗೂರಿನಲ್ಲಿ ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ

ಸರಗೂರು. : ದೇಶದಲ್ಲಿ ನಡೆದ ಚುನಾವಣೆ ನಡುವೆ ರಾಜ್ಯದ ಮೂರು ಕಡೆ ನಡೆದ ಉಪಚುನಾವಣೆಯಲ್ಲಿ ಕರ್ನಾಟಕದ ಆಡಳಿತ ಪಕ್ಷ ಕಾಂಗ್ರೆಸ್ ನೇತಾರರು ನುಡಿದಂತೆ ನಡೆದ ಪಕ್ಷಗಳ ಹಗ್ಗ ಜಗ್ಗಾಟದಲ್ಲಿ ಗೆಲುವಿನ ಮಂದಹಾಸ ದೊಂದಿಗೆ ಉಪಚುನಾವಣೆಗಳ ಮೂರು ಕ್ಷೇತ್ರದಲ್ಲಿ ವಿಕ್ರಮ ಸಾಧಿಸಿ ಆಡಳಿತ ಪಕ್ಷದ ಗೌರವವನ್ನು ಉಳಿಸಿಕೊಳ್ಳುವುದದೊಂದಿಗೆ ಕಾಂಗ್ರೆಸ್ ನ ಸಾಧನೆಗಳನ್ನು ಜನತೆ ಬೆಬಂಲಿಸಿರುವುದು ಎಂದು ಕಾಂಗ್ರೆಸ್ ಪಕ್ಷದ ಟೌನ್ ಅಧ್ಯಕ್ಷ ನಾಗರಾಜು ವ್ಯಕ್ತಪಡಿಸಿದರು.
ತಾಲೂಕಿನ ಪಟ್ಟಣದ ಪಂಚಾಯಿತಿ ಮುಂಭಾಗದಲ್ಲಿ ಶನಿವಾರ ದಂದು ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಸಾಧಿಸಿದ ಅಂಗವಾಗಿ ಪಟಾಕಿ ಸಿಡಿಸಿ ಸಂಭ್ರಮಿಸಿ ಮಾತನಾಡಿದರು.


ರಾಜ್ಯದಲ್ಲಿ ನಡೆದ ಉಪ ಚುನಾವಣೆಗಳ ಹಣ ಹಣಿಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಜೆಡಿಎಸ್ ಸಮಬಲ ಹೋರಾಟಕ್ಕೆ ಸಜ್ಜಾಗಿ ನಿಂತಿದ್ದವು.ಚುನಾವಣೆ ಪೂರ್ವ ಸಮೀಕ್ಷೆಗಳು ಒಂದೊಂದು ಕ್ಷೇತ್ರದ ಸಮೀಕ್ಷೆಗಳನ್ನು ಡೋಲಾಯಮಾನವಾಗಿ ಬಿಂಬಿದ್ದವು. ಅದರೆ ಅವೆಲ್ಲವುಗಳನ್ನು ತಲೆ ಕಳಗಾಗಿಸಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನೆತಾರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇವರ ನೇತೃತ್ವದಲ್ಲಿ ಮತ್ತು ಡಿ ಕೆ ಶಿವಕುಮಾರ್ ಅವರ ಸೋದರ ಡಿ ಕೆ ಸುರೇಶ್ ಅವರ ನಿರ್ದೇಶನದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಚಾಣಕ್ಯನ ಗೆಲುವಿನ ತಂತ್ರಗಳನ್ನು ಹೆಣದ ಜೆಡಿಎಸ್ ಪಕ್ಷದ ಮಾಜಿ ಉಪಪ್ರಧಾನಿ ಎಚ್ ಡಿ ದೇವೇಗೌಡ ಹಿರಿಯತಾನಗಲಿ ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರವರ ತಂತ್ರಗಾರಿಕೆವಾಗಲಿ ಯಾವುದಕ್ಕೂ ಅಂಜದ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆದೊಂದಿಗ ಪ್ರಮುಖವಾಗಿ ಮಹಿಳೆಯರಿಗೆ ಸಾರಿಗೆಯ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಭಾಗ್ಯಗಳ ನೆರವಾಗಿ ಇಲ್ಲಿ ಕೈ ಹಿಡಿದೆ.ಅದರೆ ಬಿಜೆಪಿ ಮತ್ತು ಜೆಡಿಎಸ್ವನ್ನು ಮಕ್ಕಾಡೆ ಮಲಗಿಸಿದ್ದಲ್ಲದೆ ಮಣ್ಣು ಮುಕ್ಕಿಸಿರುವ ರುಚಿಯನ್ನು ತೊರಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು. ಗೆಲುವಿನ ಸಂಭ್ರಮದ ಅಲೆಯಲ್ಲಿ ಮಿಂಚಿದೆದ್ದ ಸರಗೂರು ಜನತೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಹಾಗೂ ದಿ ಮಾಜಿ ಸಂಸದ ಹಾಗೂ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್.ಸಿದ್ದರಾಮಯ್ಯ ರವರಿಗೆ ಜೈಕಾರ ‌ಹಾಕುತ್ತ ಉಪಚುನಾವಣೆಯಲ್ಲಿ ಗೆದ್ದು ಬಿಗಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಪಟ್ಟಣದ ಎಲ್ಲಾ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾಂಗ್ರೆಸ್ ಪಕ್ಷದ ವರಿಷ್ಠರು ಗೆಲುವಿನ ಸಂಭ್ರಮದಲ್ಲಿ ಕಿವಿಗಡಚಿಕ್ಕುವಂತೆ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು.


ಈ ಸಂದರ್ಭದಲ್ಲಿ ಪಪಂ ಸದಸ್ಯರು ಶ್ರೀನಿವಾಸ, ಚೆಲುವ ಕೃಷ್ಣ,ವರ್ತಕ ಸಂಘದ ಮಾಜಿ ಬ್ರಮ್ಮದೇವಯ್ಯ, ಎಸ್ ಬಿ ನಾಗರಾಜು,ಅಕ್ರಮ ಸಕ್ರಮ ಸಮಿತಿ ಸದಸ್ಯ ಶಿವಶಂಕರ್, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಚೆಲುವರಾಜು,ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಂ ಕೆಂಡಗಣಸ್ವಾಮಿ, ಗುತ್ತಿಗೆದಾರ ಬಸವರಾಜು, ರಸ್ತೆ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಹದೆವ್ ಆಟೋ ಚಾಲಕರ ಸಂಘ ಅಧ್ಯಕ್ಷ ಸಾಹಿಧ್ ವಸಿಮ್,ಲೋಡಸ್ಸ್ ಸಂಘದ ಅಧ್ಯಕ್ಷ ಗೋಪಾಲಯ್ಯ, ಮುಖಂಡರು ಮುಕ್ತಿ,ಅಮೀರಾಪಾಷಾ, ಮಹೇಶ್, ರಂಗಸ್ವಾಮಿ, ಸಿದ್ದರಾಜು, ಇನ್ನೂ ಮುಖಂಡರು ಸೇರಿದಂತೆ ಭಾಗಿಯಾಗಿದ್ದರು.


ವರದಿ : ಹಾದನೂರು ಚಂದ್ರ tv8kannada ಸರಗೂರು

Related Articles

Leave a Reply

Your email address will not be published. Required fields are marked *

Back to top button