BBK 11: ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ: ಒಂದೇ ಬಾತ್ರೂಮ್ನಲ್ಲಿ ಒಟ್ಟಿಗೆ ಸ್ನಾನ ಮಾಡಿದ ಇಬ್ಬರು ಸ್ಪರ್ಧಿಗಳು,

ಸೀಸನ್ 11 (Bigg Boss kannada 11) ರೋಚಕತೆ ಸೃಷ್ಟಿಸುತ್ತಿದೆ. ಸ್ಪರ್ಧಿಗಳು ತಮ್ಮದೇ ಆದ ಗೇಮ್ ಪ್ಲ್ಯಾನ್ ರೂಪಿಸುತ್ತಿದ್ದಾರೆ. ಇದರ ಮಧ್ಯೆ ಮನೆಗೆ ಶೋಭಾ ಶೆಟ್ಟಿ ಹಾಗೂ ರಜತ್ ಇಬರಬು ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ.
ಆದರೆ, ಬಿಗ್ ಬಾಸ್ ಮನೆಯ ಬೆಸ್ಟ್ ಫ್ರೆಂಡ್ಸ್ ಧನರಾಜ್ ಆಚಾರ್ ಹಾಗೂ ಹನುಮಂತ ತಮ್ಮದೇ ಲೋಕದಲ್ಲಿದ್ದಾರೆ. ಕಾಮಿಡಿ ಮೂಲಕ ಜನಕ್ಕೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.
ದಿನದಿಂದ ದಿನಕ್ಕೆ ಧನರಾಜ್ ಹಾಗೂ ಹನುಮಂತ ಅವರ ಸ್ನೇಹ ಹಾಗೂ ಕಾಮಿಡಿ ಹೆಚ್ಚಾಗುತ್ತಿದೆ. ಎಷ್ಟರಮಟ್ಟಿಗೆ ಅಂದರೆ, ಅವರಿಬ್ಬರು ಈಗ ಒಟ್ಟಿಗೆ ಸ್ನಾನ ಮಾಡಿದ್ದಾರೆ. ಇಬ್ಬರ ಈ ವರ್ತನೆಯನ್ನು ನೋಡಿ ಗೋಲ್ಡ್ ಸುರೇಶ್, ಭವ್ಯಾ, ಶೋಭಾ ಶೆಟ್ಟಿ, ರಜತ್ ಮುಂತಾದವರಿಗೆ ಶಾಕ್ ಆಗಿದೆ. ಇಬ್ಬರು ಒಟ್ಟಿಗೆ ಸ್ನಾನ ಮಾಡಲು ಒಂದೇ ಬಾತ್ ರೂಮ್ಗೆ ಹೋಗಿದ್ದಾರೆ. ಇದರಲ್ಲಿ ತಪ್ಪೇನಿದೆ, ಒಟ್ಟಿಗೆ ಸ್ನಾನ ಮಾಡಬಾರದು ಎನ್ನುವ ರೂಲ್ಸ್ ಇಲ್ಲ ಎಂದು ನುಮಂತ ಹೇಳಿದ್ದಾರೆ.
ಇದುವರೆಗೂ ಬಿಗ್ ಬಾಸ್ ಇತಿಹಾಸದಲ್ಲಿ ಯಾರು ಮಾಡದ ಕೆಲಸವನ್ನ ಈ ಇಬ್ಬರು ಸ್ಪರ್ಧಿಗಳು ಮಾಡಿದ್ದಾರೆ. ಹನುಮಂತ ಹಾಗೂ ಧನರಾಜ್ ಒಂದೇ ಬಾತ್ ರೂಮ್ನಲ್ಲಿ ಸ್ನಾನ ಮಾಡುವುದನ್ನು ಕಂಡು ಗೋಲ್ಡ್ ಸುರೇಶ ಇಬ್ಬರನ್ನು ರೇಗಿಸಿದ್ದಾರೆ. ಬಾತ್ ರೂಮ್ ಬಾಗಿನಲ್ಲೇ ನಿಂತು ತಮಾಷೆ ಮಾಡಿದ್ದಾರೆ.