ಅಂತಾರಾಜ್ಯ ಕಳ್ಳರ ಬಂಧನ: 41 ಲಕ್ಷ ರೂ. ಚಿನ್ನಾಭರಣ ವಶ

ಚಾಮರಾಜನಗರ ಜಿಲ್ಲೆಯ 13 ಕಡೆಗಳಲ್ಲಿ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಕುಖ್ಯಾತ ಅಂತರ್ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಮಿಳುನಾಡು ಮೂಲದ ಕೊಡಂಗಸ್ವಾಮಿ (58), ಕೇರಳ ರಾಜ್ಯದ ಪಾಲಕರ ಜಿಲ್ಲೆಯ ಜೇಸುದಾಸ್(39) ಕೊಯಿಮತ್ತೂರು ಜಿಲ್ಲೆಯ ಪೊಲ್ಲಚಿ ತಾಲೂಕಿನ ಇಂದಿರಾ ರಾಜ್ (35), ಹಾಸನ ತಾಲೂಕು ಅಂಗಡಿಯಲ್ಲ ಗ್ರಾಮದ ಅಜಿತ್ (23) ಬಂದಿತ ಆರೋಪಿಗಳಾಗಿದ್ದಾರೆ,
ಆರೋಪಿಗಳ ಬಂಧನ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ. ಟಿ. ಕವಿತಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸದರಿ ಆರೋಪಿಗಳಿಂದ 41 ಲಕ್ಷ ಬೆಲೆಬಾಳುವ ಐದು 504 ಗ್ರಾಂ ಚಿನ್ನಾಭರಣಗಳು, 3 ಕೆ.ಜಿ ಬೆಳ್ಳಿ ಆಭರಣಗಳು ಹಾಗೂ ರೂ.4,400 ನಗದು ಹಣ, ಕೃತ್ಯಕ್ಕೆ ಬಳಸಿದ ಮಹೇಂದ್ರ ಕಾರು ಹಾಗೂ ಸ್ಪ್ಲೆಂಡರ್ ಮೋಟಾರ್ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಅಕ್ಟೋಬರ್ 23ರಂದು ಹನೂರು ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಸಾಬಿರ್ ಅಹಮದ್ ಎಂಬುವರು ದೂರಿನಲ್ಲಿ ತಾವು ಮನೆಗೆ ಬೇಗ ಹಾಕಿಕೊಂಡು ಸಂಬಂಧಿಕರ ಮದುವೆಗೆ ಹೋಗಿ ವಾಪಸ್ಸು ಬಂದು ನೋಡಿದಾಗ ಯಾರೋ ಕಳ್ಳರು ಮನೆ ಬಾಗಿಲನ್ನು ಮೀಟಿ ಬೀರುವಿನಲ್ಲಿ ಇಟ್ಟಿದ್ದ 11 ಲಕ್ಷ ರೂ ಬೆಳೆ ಬಾಳುವ ಚಿನ್ನ ಬೆಳ್ಳಿ ಆಭರಣಗಳು ಮತ್ತು 20,000 ನಗದು ಹಣವನ್ನು ಕಳ್ಳತನ ಮಾಡಿರುತ್ತಾರೆ ಎಂಬ ದೂರು ನೀಡಿದ ಪ್ರಯುಕ್ತ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಆರೋಪಿಗಳು ಮತ್ತೆ ಕಳ್ಳತನ ಮಾಡಲು ಹಾಗೂ ಕೆಲವು ಮಾಲುಗಳನ್ನು ಮಾರಾಟ ಮಾಡಲು ಮಲೆ ಮಹದೇಶ್ವರ ಬೆಟ್ಟ ಮತ್ತು ಕೊಳ್ಳೇಗಾಲಕ್ಕೆ ಬಂದಿದ್ದ ವೇಳೆ ನಾಲ್ವರು ಈ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿಗಳಾದ ಲಕ್ಷ್ಮಯ್ಯ ಹಾಗೂ ಧರ್ಮೇಂದ್ರ ಅವರ ಮಾರ್ಗದರ್ಶನದಲ್ಲಿ ಹನೂರು ಪೊಲೀಸ್ ಠಾಣೆ ಸಿಪಿಐ ಶಿವಮಾದಯ್ಯ, ಪಿಎಸ್ಐ ಮಂಜುನಾಥ್ ಪ್ರಸಾದ್, ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ತಕಿಯುಳ್ಳ, ರವಿ, ಕಿಶೋರ್, ಬಿಳಿ ಗೌಡ, ಶಿವಕುಮಾರ್, ಲಿಯಾಖತ್, ವೆಂಕಟೇಶ್, ಹನೂರು ಠಾಣೆಯ ಸಿಬ್ಬಂದಿಗಳಾದ ಚಂದ್ರ, ರಾಮಕೃಷ್ಣ, ವಿಶ್ವನಾಥ, ತೆಲಕಣಂಬಿ ಠಾಣೆಯ ಜಿ ಎನ್ ಪುಟ್ಟರಾಜು, ಚಾಲಕರಾದ ಸೋಮಶೇಖರ್ ಮತ್ತು ಶಿವಕುಮಾರ್ ಭಾಗವಹಿಸಿದ್ದರು.