ಚಾಮರಾಜನಗರದಲ್ಲಿ ಅದ್ದೂರಿಯಾಗಿ ನಡೆದ 537ನೇ ಕನಕದಾಸರ ಜಯಂತಿ ಮೆರವಣಿಗೆ

ಚಾಮರಾಜನಗರ: ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯು ಗೊರವರ ಕುಣಿತ, ಕಂಸಾಳೆ, ನಂದಿಕಂಬ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ತೆರಳಿತು.
ಈ ಸಂದರ್ಭದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಉಮೇಶ್, ಸಿದ್ದರಾಮಯ್ಯ ಅಭಿಮಾನಿ ಬಳಗದ ಅಧ್ಯಕ್ಷರು ಹಾಗೂ ಸಂಘದ ಗೌರವ ಅಧ್ಯಕ್ಷ ಬೆಳ್ಳೇಗೌಡ, ಸ್ವತ್ತನುಂಡಿ ಸೋಮಣ್ಣ, ಅಹಿಂದ ಜಿಲ್ಲಾ ಅಧ್ಯಕ್ಷ ಕೆಎಸ್ ರೇವಣ್ಣ, ಎಪಿಎಂಸಿ ನಿರ್ದೇಶಕ ಎಂ.ಡಿ.ಬದನಗುಪ್ಪೆ ಗುರುಸ್ವಾಮಿ, ಮುಖಂಡರಾದ ಹೊಸಹಳ್ಳಿ, ಮಧುಸೂದನ್,ಕೆ.ಕೆ.ಹುಂಡಿ ನಾಗರಾಜು, ಮಹದೇವಸ್ವಾಮಿ, ಕಾಡಹಳ್ಳಿ ಸುಬ್ಬೇಗೌಡ, ಹಳೆಪುರ ಮಹೇಶ್, ಕೆರೆಹಳ್ಳಿ ಪುನೀತ್, ಮಹದೇವಸ್ವಾಮಿ ರಾಮಸಮುದ್ರ, ಕಾರ್ಗೋ ಮಹದೇವಸ್ವಾಮಿ, ನಟರಾಜು ಬಸಪ್ಪನಪಾಳ್ಯ, ಶಿವಲಿಂಗೇಗೌಡ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ