ಇತ್ತೀಚಿನ ಸುದ್ದಿ
ಅರ್ಚಕರಿಬ್ಬರು ದೇವಸ್ಥಾನದ ಗರ್ಭ ಗುಡಿಯೊಳಗೆ ಫುಲ್ ಡಿಶುಂ.. ಡಿಶುಂ…

ಕಲಬುರ್ಗಿ: ಅರ್ಚಕರಿಬ್ಬರು ದೇವಸ್ಥಾನದ ಗರ್ಭ ಗುಡಿಯೊಳಗೆ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ನಡೆದಿದೆ.
ಗಾಣಗಾಪುರದ ಶ್ರೀ ಗುರು ದತ್ತಾತ್ರೇಯ ದೇವಸ್ಥಾನದ ಭಕ್ತರಿಗೆ ದರ್ಶನದ ಲೈನ್ ಬಿಡೋ ವಿಚಾರದಲ್ಲಿ ಅರ್ಚಕರಾದ ಕಿರಣ್ ಭಟ್ ಪೂಜಾರಿ ಮತ್ತು ವಲ್ಲಭಟ್ ಪೂಜಾರಿ ಎಂಬುವವರ ಮಧ್ಯೆ ಜಗಳವಾಗಿದೆ.
ಇಬ್ಬರ ಅರ್ಚಕರ ಮಧ್ಯೆ ತಮ್ಮ ಕಡೆಯವರ ಭಕ್ತರಿಗೆ ಮೊದಲು ಬಿಡಬೇಕು.. ಇಲ್ಲಾ ನಮ್ಮ ಕಡೆಯವರ ಭಕ್ತರಿಗೆ ಮೊದಲು ಬಿಡಬೇಕು ಎಂಬ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಶುರುವಾಗಿ ಪರಸ್ಪರ ಹೊಡೆದಾಟ ನಡೆಸಿದ್ದಾರೆ.ಸದ್ಯ ಅರ್ಚಕರ ಜಗಳ ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಇಬ್ಬರ ಅರ್ಚಕರ ವಿರುದ್ಧ ದೂರು ದಾಖಲಾಗಿದೆ.