ಸುದ್ದಿ

ಸರಗೂರು ಹೆಸರಿಗೆ ಮಾತ್ರ ತಾಲೂಕಾಗಿದೆ ಎಂದು ಆಕ್ರೋಶ ;


ಸರಗೂರು : ಪ್ರತ್ಯೇಕ ತಾಲ್ಲೂಕೆಂದು ಘೋಷಣೆಯಾಗಿ 7 ರಿಂದ 8 ವರ್ಷಗಳ ಕಳೆದು ಹೋಗಿದೆ . ಹೆಸರುವಾಸಿಯಾದ ಉರಾಗಿದ್ದರೂ ತಾಲೂಕು ಕೇಂದ್ರವಾಗಿ ಬಿಂಬಿಸುವಂತಹ ಮೂಲಭೂತ ಸೌಕರ್ಯಗಳನ್ನು ಇದುವರೆಗೂ ಯಾವುದೇ ಸರ್ಕಾರ ಬಂದರೂ ಕಲ್ಪಿಸದೇ ಹೆಸರಿಗೆ ಮಾತ್ರ ತಾಲೂಕು ಎಂದು ಕರೆಯಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು .


ತಾಲೂಕಿನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ದಂದು ರೈತ ಸಂಘ ಕಾರ್ಯಕರ್ತರ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸರಗೂರು ತಾಲೂಕಿನ ಸರ್ವತೋಮುಖ ಬೆಳವಣಿಗಾಗಿ ಹೋರಾಟ ರೂಪಿಸಲು ಪೂರ್ವಭಾವಿ ಸಭೆಯನ್ನು ಬಡಗಲಪುರ ನಾಗೇಂದ್ರ ಅವರು ಅಧ್ಯಕ್ಷತೆಯಲ್ಲಿ ಸಭೆ ಕರೆದು ಮಾತನಾಡಿದರು.


ತಾಲೂಕವೆಂದು ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇತೃತ್ವದಲ್ಲಿ ಮಾಡಿದ್ದಾರೆ.ಅದರೆ ಇನ್ನೂ ಅಭಿವೃದ್ಧಿ ಕಂಡಿಲ್ಲ ಈ ತಾಲೂಕಿನಲ್ಲಿ 2 ಎರಡು ಹೋಬಳಿಗಳಲ್ಲೂ ಅರಣ್ಯ ಪ್ರದೇಶವಿದೆ.ಇದರೂ ಅಭಿವೃದ್ಧಿ ಕಂಡಿಲ್ಲ‌.
ತಾಲೂಕಿನ ಎರಡು ಹೋಬಳಿಯಲ್ಲಿ ಬಂಡಿಪುರ ಅಭಯಾರಣ್ಯ ವ್ಯಾಪ್ತಿಯ ಬರುವ ಗ್ರಾಮಗಳು ಹೆಚ್ಚು ಕಾಡಂಚಿನ ಭಾಗದ ಪ್ರದೇಶದಲ್ಲಿ ವಾಸು ಸುತ್ತಿದ್ದಾರೆ.ಜೀವನ ಅತ್ಯಂತ ಶೋಚನೀಯವಾಗಿದೆ.ಹಲವಾರು ಹಳ್ಳಿಗಳಿಗೆ ಇನ್ನೂ ರಸ್ತೆಗಳೆ ಇಲ್ಲ.ಕುಡಿಯುವ ನೀರಿನ ಸಂಪರ್ಕ ಇತ್ಯಾದಿ ಮೂಲಭೂತ ಸೌಕರ್ಯಗಳೆ ದೊರೆತಿಲ್ಲ ಎಂದರು.


ಶಿಕ್ಷಣ ಕ್ಷೇತ್ರ ಮುಂದಕ್ಕೆ ಸಾಗುತ್ತಿಲ್ಲ.ತಾಲ್ಲೂಕಿನಲ್ಲಿರುವ ಹಲವಾರು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶುವೈದ್ಯ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲ.ತಾಲ್ಲೂಕಿನ ಆಡಳಿತ ಸುಸಿಚ್ಚಿತವಾದ ಕಟ್ಟಡಗಳಿಲ್ಲ ಸಾರ್ವಜನಿಕ ಆಡಳಿತವನ್ನು ಸಮರ್ಪಕವಾಗಿ ನಡೆಸಲು ಖಾಲಿ ಇರುವ ಹುದ್ದೆಗಳನ್ನು ತುಂಬಿಯೇ ಇಲ್ಲ.ಕ್ಷೇತ್ರದ ಶಾಸಕರು ತಾಲೂಕಿನ ಬಗ್ಗೆ ಗಮನಹರಿಸಿ ಅಭಿವೃದ್ಧಿಗೊಳಿಸಲು ಮುಂದಾಗಬೇಕು.


ರಾಜ್ಯದಲ್ಲಿ ವನಸಿರಿ ನಾಡು ಎಂದು ಬಿರುದು ಪಡೆದಿರುವ ಎಚ್ ಡಿ ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ನಾಲ್ಕು ಜಲಾಶಯಗಳು ಇದರು.ತಾಲ್ಲೂಕಿನ ಜನತೆಗೆ ಯಾವುದೇ ಅನುಕೂಲ ಇಲ್ಲ ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ತಿಂಗಳು ಡಿ 8 ರಂದು ತಾಲೂಕಿನ ಎಲ್ಲಾ ಪ್ರಗತಿಪರ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಗೆ ಆಹ್ವಾನಿಸಲಾಗುವುದು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಪೂರ್ವಭಾವಿ ಸಭೆಗೆ ಬಂದು ತಮ್ಮ ಸಲಹೆ ಸಹಕಾರವನ್ನು ನೀಡಿ ತಾಲೂಕಿನ ಕ್ಷೇಮಾಭಿವೃದ್ಧಿಗಾಗಿ ಹೋರಾಟ ಹೆಜ್ಜೆ ಹಾಕಬೇಕೆಂದು ಮನವಿ ಮಾಡಿಕೊಂಡರು.


ಸರಗೂರು ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ ಮಾತನಾಡಿ ತಾಲೂಕಿಗೆ ಹೆಚ್ಚು ಇಲಾಖೆಗಳು ಬರಬೇಕು.ಡಬಲ್ ರಸ್ತೆ ಮಾಡಬೇಕು.ಇತ್ತಿಚಗೆ ಸರಗೂರು ತಾಲೂಕು ದೊಡ್ಡದಾಗಿ ಬೆಳೆಯುತ್ತದೆ.ಅದರಿಂದ ಶಾಸಕರು ಹಾಗೂ ಲೋಕಸಭಾ ಸಂಸದರು ಸರಗೂರು ತಾಲೂಕಿನ ಹೆಚ್ಚಿನ ರೀತಿಯಲ್ಲಿ ಗಮನಹರಿಸಬೇಕು.ಏಕೆಂದರೆ ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಳವಾಗಿದೆ.ಎಲ್ಲಾ ಇಲಾಖೆಗಳು ಬಂದರೆ ತಾನಾಗಿ ಅಭಿವೃದ್ಧಿ ಕಡೆಗೆ ಹೋಗುತ್ತದೆ.ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳು ಕಾಡಂಚಿನ ಭಾಗದಿಂದ ಬರುವ ರೈತರಿಗೆ ತೊಂದರೆ ನೀಡುತ್ತಿದ್ದಿರೆ ಎಂದು ಕೂಗು ಕೇಳಿ ಬರುತ್ತಿದೆ.ಅದರ ಜೊತೆಯಲ್ಲಿ ರೈತರಿಗೆ ಸಾಗುವಾಳಿ ವಿತರಣೆ ಮಾಡುತ್ತಿಲ್ಲ.ಅಕ್ರಮ ಸಕ್ರಮ ಸಮಿತಿ ವತಿಯಿಂದ ಪಾಸ್ ಯಾಗಿ ಬಂದರು ಕಂದಾಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಮಾಡುತ್ತಾರೆ.ಅದರ ಜೊತೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನೀಡುತ್ತಿದ್ದಾರೆ ಎಂದು ಆಗ್ರಹಿಸಿದರು.


ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷರು ಚನ್ನನಾಯಕ,ಮಹದೇವನಾಯಕ, ಕಾರ್ಯಧ್ಯಕ್ಷ ಬಿರ್ವಾಳ್ ಮಹಲಿಂಗ, ಕಾರ್ಯದರ್ಶಿಗಳು ನವೀನ್ ಕುಮಾರ್, ನಂದಿಶ್ವರಸ್ವಾಮಿ, ಕುಮಾರ್ ಗೌಡ, ಉಪಾಧ್ಯಕ್ಷ ಗೊವಿಂದರಾಜು, ಯುವ ಘಟಕದ ಅಧ್ಯಕ್ಷ ಶಿವಪ್ಪ,ಎಲ್ಲಾ ಸಂಘ ಸಂಘಟನೆ ಮುಖಂಡರು ವೈಕುಂಠನಾಯಕ, ಸಣ್ಣ ಸ್ವಾಮಿ, ಸರಗೂರು ಕೃಷ್ಣ, ವೆಂಕಟೇಶ್, ಬ್ರಹ್ಮದೇವ, ರಂಗಸ್ವಾಮಿ, ರಮೇಶ್, ನಾರಾಯಣ್, ಸುರೇಶ್, ರೈತ ಮಹಿಳಾ ಸಂಘ ಉಪಾಧ್ಯಕ್ಷರು ರತ್ನಮ್ಮ, ಮಹದೇವಮ್ಮ,ಮಹದೇವನಾಯಕ,ಜವರನಾಯಕ, ಚೆಲುವರಾಜು, ಅಣ್ಣಯ್ಯಸ್ವಾಮಿ, ಮಹೇಶ್ ಕುಮಾರ್, ಗೋವಿಂದರಾಜು, ಇನ್ನೂ ಎಲ್ಲಾ ಪ್ರಗತಿಪರ ಹಾಗೂ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ವರದಿ : ಹಾದನೂರು ಚಂದ್ರ tv8kannada ಸರಗೂರು

Related Articles

Leave a Reply

Your email address will not be published. Required fields are marked *

Back to top button