Threatened SalmanKhan: ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ; ರಾಯಚೂರಿನ ಮಾನ್ವಿ ಯಲ್ಲಿ ಸೊಹೈಲ್ ಪಾಶಾ ಅರೆಸ್ಟ್,

ಮುಂಬೈ: ನಟ ಸಲ್ಮಾನ್ ಖಾನ್‌ಗೆ ಜೀವಬೆದರಿಕೆಯೊಡ್ಡಿದ್ದ ರಾಯಚೂರು ಜಿಲ್ಲೆಯ ಮಾನ್ವಿಯ ಉದಯೋನ್ಮುಖ ಗೀತ ರಚನೆಕಾರನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಇನ್ನು ಆರೋಪಿಯನ್ನು ಸೋಹೇಲ್ ಪಾಷಾ ಎಂದು ಗುರುತಿಸಲಾಗಿದ್ದು, ತಾನು ರಚಿಸಿದ ಹಾಡು ಖ್ಯಾತಿ ಗಳಿಸಬೇಕೆಂಬ ಕಾರಣಕ್ಕೆ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನ.7ರಂದು ಮುಂಬೈ ಸಂಚಾರಿ ಪೊಲೀಸರ ಸಹಾಯವಾಣಿಗೆ ಸಂದೇಶ ಕಳಿಸಿದ್ದ ಆರೋಪಿ, ಸಲ್ಮಾನ್ ಮತ್ತು ‘ಮೇ ಸಿಖಂದರ್ ಹೂ ಎಂಬ ಗೀತೆಯ ರಚನಾಕಾರರಿಗೆ ಬೆದರಿಕೆಯೊಡ್ಡಿದ್ದ. ಅಲ್ಲದೆ ಐದು ಕೋಟಿ ರೂ. ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ ಸಂದೇಶದ ಜಾಡು ಹಿಡಿದಿದ್ದಪೊಲೀಸರು, ರಾಯಚೂರಿಗೆ ಆಗಮಿಸಿ ಶೋಧ ನಡೆಸಿದಾಗ ಆತ ಮತ್ತೊಬ್ಬನ ಮೊಬೈಲ್ ಬಳಸಿ ವಾಟ್ಸ್‌ಆ್ಯಪ್ ಸಂದೇಶ ಕಳಿಸಿರುವುದು ಪತ್ತೆಯಾಗಿದೆ.
ಈ ನಡುವೆ ‘ ಮಾಧ್ಯಮ ‘ ಜೋತೆ ಮಾತನಾಡಿದ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟ ಮಾದಯ್ಯ ಅವರು, ಮುಂಬೈ ಪೊಲೀಸರು ಈ ಬಗ್ಗೆ ನಮ್ಮನ್ನು ಸಂಪರ್ಕಿಸಿದ್ದು ನಿಜ. ಬೇಕಿದ್ದರೆ ಸಹಕಾರ ಪಡೆಯುವುದಾಗಿ ತಿಳಿಸಿದ್ದರು. ಆದರೆ ಬಂಧಿಸಿರುವ ಮಾಹಿತಿ ಇಲ್ಲ. ಅವರ ಕೆಲಸ ಅವರು ಮಾಡಿಕೊಂಡು ಹೋಗಿರಬಹುದು ಎಂದು ತಿಳಿಸಿದ್ದಾರೆ.
ವರದಿ : ವಿಶ್ವನಾಥ ಸಾಹುಕಾರ್ tv8kannada ರಾಯಚೂರು