ಗುರಿ ಮೀರಿ 9 ಕೆಜಿ ಚಿನ್ನ ಉತ್ಪಾದನೆ ಮಾಡಿದ ಹಟ್ಟಿ ಚಿನ್ನದ ಗಣಿ ಕಂಪನಿ

ರಾಯಚೂರು: ರಾಜ್ಯ ಸರ್ಕಾರದ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿ ಪ್ರಸಕ್ತ ಸಾಲಿನ ಅರ್ಧ ವಾರ್ಷಿಕ ನಿಗದಿತ ಗುರಿ ಮೀರಿ 8. ಕೆಜಿ ಚಿನ್ನ ಉತ್ಪಾಧಿಸಿದೆ.
2024 ಏಪ್ರಿಲ್ ನಿಂದ ಸೆಪ್ಟೆಂಬರ್ ವರಗೆ 752.ಕೆ.ಜಿ ಚಿನ್ನ ಉತ್ಪಾದನೆ ಗುರಿ ಹೋಂದಲಾಗಿತ್ತು, 761.ಕೆ.ಜಿ ಚಿನ್ನ ಉತ್ಪಾದನೆ ಮಾಡಿದೆ ಅಂದರೆ ಸುಮಾರು 8 ಕೆ.ಜಿ ಚಿನ್ನವನ್ನು ಗುರಿ ಮೀರಿ ಚಿನ್ನ ಉತ್ಪಾದನೆ ಮಾಡಿ ಸಾಧನೆ ಮಾಡಿದೆ.

ಏಪ್ರೀಲ್ ನಲ್ಲಿ 109.ಕೆ.ಜಿ ಗುರಿಗೆ,118.ಕೆ.ಜಿ ಉತ್ಪಾದನೆ, ಮೇ ತಿಂಗಳಲ್ಲಿ 118 ಕೆ.ಜಿ ಗುರಿಗೆ 90 ಕೆ.ಜಿ ಜೂನ್ ತಿಂಗಳಲ್ಲಿ 109 ಕೆ.ಜಿ ಗುರಿಗೆ 110 ಕೆ.ಜಿ. ಜುಲೈ ತಿಂಗಳಲ್ಲಿ 133.ಕೆ.ಜಿ ಗುರಿಯಲ್ಲಿ 150.ಕೆ.ಜಿ ಆಗಷ್ಟ ತಿಂಗಳಲ್ಲಿ 142 ಕೆ.ಜಿ ಗುರಿಯಲ್ಲಿ 127.ಕೆ.ಜಿ ಸೆಪ್ಟೆಂಬರ್ ತಿಂಗಳಲ್ಲಿ 139. ಕೆಜಿ ಗುರಿಗೆ 163.ಕೆಜಿ ಚಿನ್ನ ಉತ್ಪಾದನೆ ಮಾಡಲಾಗಿದೆ. ಏಪ್ರೀಲ್ ತಿಂಗಳಲ್ಲಿ 8 ಜೂನ್ ತಿಂಗಳಲ್ಲಿ .8.ಕೆ.ಜಿ.
ಜುಲೈ ತಿಂಗಳಲ್ಲಿ 16.ಕೆಜಿ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ 24 ಕೆ.ಜಿ ಚಿನ್ನವನ್ನು ಗುರಿಗಿಂತ ಹೆಚ್ಚುವರಿಯಾಗಿ ಉತ್ಪಾದಿಸಲಾಗಿದೆ.ಆದರೆ ಮೇ ತಿಂಗಳ ವೇಳೆ ಗುರಿಯಲ್ಲಿ 27.ಕೆ.ಜಿ ಹಾಗೂ ಆಗಷ್ಟ ತಿಂಗಳಲ್ಲಿ15.ಕೆ.ಜಿ ಕಡಿಮೆ ಉತ್ಪಾದನೆ ಮಾಡಲಾಗಿದೆ.
ಅಧಿರು ಉತ್ಪಾದನೆಯಲ್ಲಿ ಹಿನ್ನಡೆ ಕಳೆದ ಆರು ತಿಂಗಳಲ್ಲಿ ಚಿನ್ನ ಉತ್ಪಾದನೆ ಯಲ್ಲಿ ಸಾಧನೆ ಮಾಡಿರುವ ಕಂಪನಿ ಅಧಿರು ಉತ್ಪಾದನೆ ಯಲ್ಲಿ ಮಾತ್ರ, ಹಿನ್ನಡೆ ಕಂಡಿದೆ. ಈ ಅವಧಿಯಲ್ಲಿ 3.80ಲಕ್ಷ ಮೇಟ್ರಿಕ್ ಟನ್ ಅಧಿರು ಉತ್ಪಾದನೆ ಗುರಿಯಲ್ಲಿ 3.1378.ಲಕ್ಷ ಮೇಟ್ರಿಕ್ ಟನ್. ಅಧಿರು ಉತ್ಪಾದನೆ ಯಾಗಿದೆ.
ಒಟ್ಟಾರೆ 28 ಸಾವಿರ 622. ಮೇಟ್ರಿಕ್ ಟನ್ ಅಧಿರು ಉತ್ಪಾದನೆಯಲ್ಲಿ
ಹಿನ್ನಡೆಯಾಗಿರುವುದು ಗಣಿ ಆಡಳಿತ ವರ್ಗವನ್ನು ಚಿಂತೆಗಿಡುಮಾಡಿದೆ. ಅಧಿಕ ಚಿನ್ನ ಉತ್ಪಾದನೆ ಗೆ ಹೆಚ್ಚು ನೀಕ್ಷೇಪ ಇರುವ ಅಧಿರು ಬಂದಿದ್ದರಿಂದ ಗುರಿ ಮುಟ್ಟಲು ಸಾಧ್ಯವಾಗಿದೆ ಎಂದು ವಿಶ್ಲೇಷಣೆಯಾಗಿದೆ, ಆದರು ಅಧಿರು ಅಧಿಕ ಉತ್ಪಾದನೆಯಲ್ಲಿ ಸುದಾರಣೆ ಕಾಣದಿರುವುದಕ್ಕೆ
COMPANY LTD
ಸರ್ಕ್ಯೂಲರ್ ಶಾಫ್ಟ್ CIRCULAR SHAFT
ಮಾನವ ಸಂಪನ್ಮೂಲ ಕೊರತೆ ಕಾರಣ ಎಂದು ಹೇಳಲಾಗುತ್ತಿದೆ. ಈಗಿರುವ ಕಾರ್ಮಿಕರಲ್ಲಿ ನಿತ್ಯ 400ರಿಂದ 500 ಜನ ಕಾರ್ಮಿಕರು ನಾನಾ ಕಾರಣಗಳ ಮೇಲೆ ಕೆಲಸಕ್ಕೆ ಗೈರು ಹಾಜರಾಗುತ್ತಿರುವುದು, ಸಹ ಅದಿರು ಉತ್ಪಾದನೆಯ ಹಿನ್ನಡೆಗೆ ಕಾರಣವೆಂದು ಗಣಿ ಆಡಳಿತ ಅಧಿಕಾರಿಗಳು ತಿಳಿಸುತ್ತಾರೆ.
ಬೆಲೆ ಏರುಗತಿಯ. ಲಾಭ ಪಡೆಯಲು ಚಿಂತನೆ : ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 10.ಗ್ರಾಮ್ ಚಿನ್ನದ ಬೆಲೆ 80.ಸಾವಿರ ರೂ. ಇದೆ ನಿರಂತರ ಏರುಗತಿಯಲ್ಲಿ ಇರುವ ಲಾಭ ಪಡೆಯಲು ಗಣಿ ಆಡಳಿತ ವರ್ಗ ಉತ್ಪಾದನೆ ಅಧಿಕ ಗೊಳಿಸಲು ಇನ್ನಷ್ಟು ಗಣಿ ಅಭಿವೃದ್ಧಿ ಪಡಿಸಲು ಚಿಂತನೆ ಮಾಡಲಾಗಿದೆ.
ಉತ್ತರ ಹಾಗೂ ದಕ್ಷಿಣಾಭಿಮುಖವಾಗಿ ಚಿನ್ನದ ನೀಕ್ಷೆಪಗಳು ವಿಸ್ತರಿಸಿ ವೆ. ಈ ಹಿಂದೆ ಉತ್ಪಾದನೆ ವೆಚ್ಚ ಅಧಿಕವಾಗುತ್ತದೆ ಎಂದು ಪ್ರತಿ ಟನ್ ಅದಿರಿಗೆ 5. ಗ್ರಾಮ್ ಚಿನ್ನ ಸಿಕ್ಕಲ್ಲಿ ಮಾತ್ರ. ಗಣಿ ಗಾರಿಕೆ ಮಾಡಿ 3. ಗ್ರಾಮ್ ಹಾಗೂ 4.ಗ್ರಾಮ್ ಚಿನ್ನ ಸಿಕ್ಕಲ್ಲಿ ಉತ್ಪಾದನೆ ಕೈಗೊಳ್ಳದೆ ಬಿಡಲಾಗಿತ್ತು.
ಆದರೆ ಈಗ ಹಿಂದೆ ಬಿಟ್ಟು ಹೋಗಿರುವ ಪ್ರದೇಶದಲ್ಲಿ ಪುನಃ ಗಣಿಗಾರಿಗೆ ಮುಂದುವರೆಸಲು ಯೋಜನೆ ರೂಪಿಸಿದೆ ಶೀಘ್ರವೆ ಈ ಕೆಲಸ ಆರಂಭವಾಗಲಿದೆ ಎಂದು ಗಣಿ ಕಂಪನಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವರದಿ : ಮುಸ್ತಫಾ tv8kannada ಲಿಂಗಸುಗೂರು