ನಾನು ರಾಜಕಾರಣ ಮಾತಾಡಲ್ಲ.. ಮೋದಿಗಾಗಿ ಮಾತ್ರ ಮಾತನಾಡ್ತೀನಿ: ಚಕ್ರವರ್ತಿ ಸೂಲಿಬೆಲೆ

ವಿಜಯಪುರ : ನಾನು ರಾಜಕಾರಣ ಮಾತನಾಡಲ್ಲ, ಮೋದಿಗಾಗಿ ಮಾತ್ರ ರಾಜಕಾರಣ ಮಾತನಾಡಿದ್ದೇನೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು. ವಿಜಯಪುರದಲ್ಲಿ ಮಾತನಾಡಿದ ಅವರು, ಈಗ ಕಾಂಗ್ರೆಸ್ಗೆ ವೋಟು ಹಾಕಿದ್ದಕ್ಕೆ ದೇವರ ಮುಂದೆ ನಿಂತು ಕಣ್ಣೀರು ಹಾಕಿ ಎಂದು ಹೇಳಿದರು. ಗಲಭೆ ಮಾಡಿದವರನ್ನ ಪೊಲೀಸರು ಬಂಧಿಸಿದಾಗ, ಸಚಿವರೇ.. ‘ಅವರು ಅಮಾಯಕರು ಬಿಡಿ’ ಎಂದು ಪತ್ರ ಬರೆಯುತ್ತಾರೆ. ಜ್ಞಾನ ದೇಗುಲ ಹೆಸರು, ಕಾಲೇಜುಗಳಲ್ಲಿ ಸರಸ್ವತಿ ಪೂಜೆ ನಿಲ್ಲಿಸಿದ್ರು ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದರು. ಇಂದು ವಕ್ಫ್ ಬೋರ್ಡ್ಗೆ ಯುವಕರು ಕಳೆದುಕೊಂಡರೆ, ನಾಳೆ ತಲೆ ತಗ್ಗಿಸಿಕೊಂಡು ನಮ್ಮ ಭೂಮಿಯನ್ನ ಕೊಡಬೇಕಾಗುತ್ತೆ. ನಾಳೆ ನಮ್ಮದೇ ಹಿಂದೂಗಳು, ಇಷ್ಟು ಭೂಮಿ ಕೊಟ್ಟರೆ ಏನಾಗುತ್ತೆ ಕೊಡಿ ಎನ್ನುತ್ತಾರೆ. ಈಗ ಹೋರಾಡುವ ಸಮಯ ಎಂದು ಎಚ್ಚರಿಸಿದರು.

ವಿಜಯಪುರದಲ್ಲಿ ಅತಿ ಹೆಚ್ಚು ಸ್ಲೀಪರ್ ಸೆಲ್ಗಳಿದ್ದಾರೆ. ಇಲ್ಲಿಯೆ ಕುಂತು ಮಾಹಿತಿ ಕೊಡ್ತಾರೆ. ವಕ್ಫ್ ಬೋರ್ಡ್ ಹೋರಾಟ ವಿಜಯಪುರದ ಹೋರಾಟ ಅಲ್ಲ, ತಮಿಳುನಾಡಿನಿಂದ ಶುರುವಾಗಿದೆ. ಇಸ್ಲಾಂ ಧರ್ಮ ಹುಟ್ಟಿಯೇ ಇರಲಿಲ್ಲ, ಆಗ ಹಿಂದೂ ದೇಗುಲಗಳಲ್ಲಿ ಗಂಟೆ, ಜಾಗಟೆ ಸದ್ದು ಕೇಳ್ತಿದ್ವು ಎಂದರು.