ಅದ್ಧೂರಿಯಾಗಿ ಜರುಗಿದ 3ನೇ ವರ್ಷದ ಚಾಮುಂಡೇಶ್ವರಿ ಉತ್ಸವ

ಹೆಚ್ ಡಿ ಕೋಟೆ: ಪಟ್ಟಣದ ವಡ್ಡರಗುಡಿ ವಾರ್ಡಿನಲ್ಲಿ ಚಾಮುಂಡೇಶ್ವರಿಯ ಮೂರನೇ ವರ್ಷದ ಉತ್ಸವ ಅದ್ಧೂರಿಯಾಗಿ ಜರುಗಿತು. ವಾರ್ಡಿನ ಪ್ರಮುಖ ರಸ್ತೆಗಳಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.
ಮಹಿಳೆಯರು ರಂಗುರಂಗಿನ ಸೀರೆಯನ್ನುಟ್ಟು ದೇವಿಗೆ ಜೈಕಾರ ಕೂಗಿ ಭಾವ ಪರವಶರಾದರು. ರಸ್ತೆಯಲ್ಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಚಿತ್ತಾರ ಮೂಡಿಸಿದರು. ಮೆರವಣಿಗೆಯಲ್ಲಿ ಸತ್ತಿಗೆ ಸುರಪಾನಿ, ವೀರಗಾಸೆ ನೃತ್ಯ, ವಾಧ್ಯಗೋಷ್ಠಿ, ಮೆರವಣಿಗೆಯಲ್ಲಿ ಗಮನ ಸೆಳೆದವು. ವಾರ್ಡಿನ ದೊಡ್ಡ ಯಜಮಾನ ವೆಂಕಟೇಶ್ ಮಾತನಾಡಿ ದೇವಿಯ ಆರಾಧನೆಯನ್ನು ಗ್ರಾಮಸ್ಥರ ಸಹಕಾರದಿಂದ ಮೂರು ವರ್ಷಗಳಿಂದ ಶಾಂತಿಯುತವಾಗಿ ನಡೆಸಿಕೊಂಡು ಬಂದಿದ್ದೇವೆ. ದೇವಿಯು ನಮಗೆ ಇನ್ನೂ ಅದ್ಧೂರಿಯಾಗಿ ನಡೆಸುವ ಶಕ್ತಿಯನ್ನು ಕರುಣಿಸಲಿ, ಗ್ರಾಮದ ಸರ್ವ ಜನರಿಗೂ ಅರೋಗ್ಯ ಆಯಸ್ಸು ಸುಖ ಸಂಪತ್ತು ನೀಡಿ ಕಾಪಾಡಲಿ ಎಂದು ಬೇಡಿಕೊಂಡರು. ಮೆರವಣಿಗೆಯಲ್ಲಿ ಮಹಿಳೆಯರ ನೃತ್ಯ ಆಕರ್ಷಣೀಯವಾಗಿತ್ತು. ಉತ್ಸವದಲ್ಲಿ ಗ್ರಾಮದ ಹಿರಿಯರು, ಯಜಮಾನರು, ಮುಖಂಡರು, ನೂರಾರು ಮಹಿಳೆಯರು, ಮಕ್ಕಳು ಪುರುಷರು, ಗ್ರಾಮಸ್ಥರು ಪಾಲ್ಗೊಂಡಿದರು.
ವರದಿ :ಮಲಾರ ಮಹದೇವಸ್ವಾಮಿ