ವಿದೇಶಸುದ್ದಿ

 ಉಕ್ರೇನ್, ರಷ್ಯಾ ನಡುವೆ ಇಂದು ಮತ್ತೊಂದು ಶಾಂತಿ ಸಭೆ!

ರಷ್ಯಾ ಉಕ್ರೇನ್​ ಮೇಲೆ ದಾಳಿ ಮುಂದುವರೆಸಿರುವ ಹಿನ್ನೆಲೆ, ಯುದ್ಧದ ಭೀಕರತೆಯನ್ನು ಕಂಡು, ಕೈವ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯು ಯುಎಸ್ ನಾಗರಿಕರನ್ನು ತಕ್ಷಣವೇ ಉಕ್ರೇನ್ ತೊರೆಯುವಂತೆ ಒತ್ತಾಯಿಸಿದೆ.19ನೇ ದಿನವೂ ಉಕ್ರೇನ್-ರಷ್ಯಾ ಯುದ್ಧ ಮುಂದುವರೆದಿದ್ದು, ಉಕ್ರೇನ್‌ನ 19 ನಗರಗಳಲ್ಲಿ ಎಚ್ಚರಿಕೆಯ ಸೈರನ್ ಮೊಳಗಿದೆ. ಹಲವು ನಗರಗಳಲ್ಲಿ ರಷ್ಯಾದಿಂದ ಏರ್‌ಸ್ಟ್ರೈಕ್‌ನ ಎಚ್ಚರಿಕೆ ನೀಡಲಾಗಿದ್ದು, ಖಾರ್ಕಿವ್‌ನಲ್ಲಿ ರಷ್ಯಾ ಮತ್ತೆ ಬಾಂಬ್ ಸ್ಫೋಟ ನಡೆಸುತ್ತಿದೆ.

ಉಕ್ರೇನ್ ಮೇಲೆ 18 ದಿನಗಳು ರಷ್ಯಾ ಅಟ್ಯಾಕ್ ಮಾಡಿದ್ರೂ, ಪುಟ್ಟ ರಾಷ್ಟ್ರವನ್ನು ಮಣಿಸೋಕೆ ಸಾಧ್ಯವಾಗುತ್ತಿಲ್ಲ. ಇತ್ತ ಜಾಗತೀಕವಾಗಿ ರಷ್ಯಾ ವಿರುದ್ಧ ನಿರ್ಬಂಧ ಹೆಚ್ಚಾಗಿದೆ. 18 ದಿನವಾದ್ರೂ ಉಕ್ರೇನ್ ಮಣಿಸೋಕೆ‌ ಸಾಧ್ಯವಾಗದ ತಮ್ಮ ಸೇನೆಯ ವಿರುದ್ದ ಪುಟಿನ್ ಅಸಮಾಧಾನಗೊಂಡಿದ್ದಾರೆ ಎಂದು ಅಮೇರಿಕಾ ಭದ್ರತಾ ಸಲಹೆಗಾರ ಹೇಳಿಕೆ ನೀಡಿದೆ. ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್‌ನಲ್ಲಿ ತಮ್ಮ ಸೇನೆಯ ಪ್ರಗತಿಯಿಂದ ನಿರಾಶೆಗೊಂಡಿದ್ದಾರೆ. ರಷ್ಯಾಪಡೆಗಳು ಪುಟಿನ್ ಊಹಿಸಿದಂತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಯುಎಸ್ ರಾಷ್ಟ್ರೀಯ ರಕ್ಷಣಾ ಸಲಹೆಗಾರ ಜೇಕ್ ಸುಲ್ಲಿವನ್ ಹೇಳಿಕೆ ನೀಡಿದ್ದಾರೆ.

ಉಕ್ರೇನ್ ಮತ್ತು ರಷ್ಯಾ ನಡುವೆ ಭೀಕರ ಯುದ್ಧ ಮುಂದುವರೆದಿದೆ. ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಉಕ್ರೇನ್​ನ ಮಿಲಿಟರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಗಾಯಗೊಂಡ ಸೈನಿಕರನ್ನು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭೇಟಿ ಮಾಡಿದ್ದಾರೆ. ಗಾಯಗೊಂಡ ಸೈನಿಕರ ಜೊತೆ ಮಾತನಾಡಿದ್ದಾರೆ. ಜೊತೆಗೆ ಸೆಲ್ಪಿಗೆ ಪೋಸ್​ ಕೂಡ ನೀಡಿದ್ದಾರೆ.

ಉಕ್ರೇನ್‌ನ ಕಪ್ಪು ಸಮುದ್ರದ ಕರಾವಳಿಯ ಮೇಲೆ ರಷ್ಯಾ ದಿಗ್ಬಂಧನವನ್ನು ಸ್ಥಾಪಿಸಿದೆ ಎಂದು ಯುಕೆಯ ರಕ್ಷಣಾ ಸಚಿವಾಲಯವು ಹೇಳಿದೆ. ಇದು ದೇಶವನ್ನು ಕಡಲ ವ್ಯಾಪಾರದಿಂದ ಪರಿಣಾಮಕಾರಿಯಾಗಿ ಕಡಿತಗೊಳಿಸುತ್ತದೆ.

ಕ್ಯಾನ್ಸರ್ ಹೊಂದಿರುವ 21 ಉಕ್ರೇನಿಯನ್ ಮಕ್ಕಳನ್ನು ತಮ್ಮ ಚಿಕಿತ್ಸೆಯನ್ನು ಮುಂದುವರಿಸಲು ಯುಕೆಗೆ ಕರೆತರಲಾಗಿದೆ ಎಂದು ಬ್ರಿಟನ್‌ನ ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ರಾಜ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಅವರು ತಿಳಿಸಿದ್ದಾರೆ.

ರಷ್ಯಾ ಸೇನೆ ಉಕ್ರೇನ್‌ನ ಎರಡು ನಗರಗಳ ಮೇಯರ್‌ಗಳನ್ನು ಅಪಹರಿಸಿರುವುದನ್ನು ಈಯೂ ಖಂಡಿಸಿದೆ. ಆಗ್ನೇಯ ನಗರದ ಡ್ನಿಪ್ರೊರುಡ್ನೆ ಮೇಯರ್ ಯೆವ್ಹೆನ್ ಮ್ಯಾಟ್ವೀವ್ ಅವರನ್ನು ಶಸ್ತ್ರಸಜ್ಜಿತ ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ಭಾನುವಾರ ಹೇಳಿದ್ದರು. ರಷ್ಯಾದ ಸಶಸ್ತ್ರ ಪಡೆಗಳಿಂದ ಮೆಲಿಟೊಪೋಲ್ ಮತ್ತು ಡ್ನಿಪ್ರೊರುಡ್ನೆ ಮೇಯರ್‌ಗಳನ್ನು ಅಪಹರಿಸಿರುವುದನ್ನು ಈಯೂ ಬಲವಾಗಿ ಖಂಡಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳು ಮತ್ತು ಭದ್ರತಾ ನೀತಿಯ ಉನ್ನತ ಪ್ರತಿನಿಧಿ ಜೋಸೆಪ್ ಬೊರೆಲ್ ಫಾಂಟೆಲ್ಲೆಸ್ ಹೇಳಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆ, 2.6 ಮಿಲಿಯನ್‌ಗೂ ಹೆಚ್ಚು ಜನ ಉಕ್ರೇನ್ ತೊರೆದಿದ್ದಾರೆ. 2ನೇ ಮಹಾಯುದ್ಧಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪೋಲೆಂಡ್‌ಗೆ 1.6 ಮಿಲಿಯನ್‌ನಷ್ಟು ಜನರು ಪಲಾಯನ ಮಾಡಿದ್ದಾರೆ. ಉಕ್ರೇನ್‌ನಿಂದ ಹಂಗೇರಿಗೆ 2.46 ಲಕ್ಷ ಜನ ಪಲಾಯನವಾಗಿದ್ದು, ರಷ್ಯಾಗೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಪಲಾಯನ ಮಾಡಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ  ಸೇನೆ ಯುದ್ಧ ಮುಂದುವರಿಸಿದೆ. ಉಕ್ರೇನ್, ರಷ್ಯಾ ನಡುವೆ ಇಂದು ಮತ್ತೊಂದು ಶಾಂತಿ ಸಭೆ ನಡೆಯಲಿದೆ. ಇಂದು ಸ್ಥಳೀಯ ಕಾಲಮಾನ 10.30ಕ್ಕೆ ನಡೆಯುವ ಸಭೆ ನಡೆಯಲಿದ್ದು, ವರ್ಚುವಲ್ ಮೂಲಕ ನಾಯಕರು ಮಾತುಕತೆ ನಡೆಸಲಿದ್ದಾರೆ. ಉಕ್ರೇನ್ ನೆಲದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸುತ್ತಿದೆ. ಉಕ್ರೇನ್ ವಾಯುಪ್ರದೇಶದಲ್ಲಿ ರಷ್ಯಾಗೆ ನಿರ್ಬಂಧ ಹೇರದಿದ್ದರೆ, ಮುಂದೊಂದು ದಿನ ನ್ಯಾಟೋ ನೆಲೆಗಳ ಮೇಲೂ ದಾಳಿ ಆಗುತ್ತೆ ಎಂದು ನ್ಯಾಟೋಗೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿಯಿಂದ ಎಚ್ಚರಿಕೆ ನೀಡಲಾಗಿದೆ. ನ್ಯಾಟೋ ನೆಲದ ಮೇಲೂ ಕ್ಷಿಪಣಿ ದಾಳಿ ನಡೆಯುವ ಎಚ್ಚರಿಕೆ ನೀಡಲಾಗಿದ್ದು, ಇದಕ್ಕೇನು ಹೆಚ್ಚು ಸಮಯ ಕೂಡ ಬೇಕಾಗಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿಕೆ ನೀಡಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆ, ಇಂದು ಅಮೆರಿಕ-ಚೀನಾ ಉನ್ನತ ಮಟ್ಟದ ಸಭೆ ನಡೆಸಲಿದೆ. ಯುದ್ಧದ ವಿಚಾರವಾಗಿ ರಷ್ಯಾ ನಡೆಸುತ್ತಿರುವ ಪ್ರಚಾರ, ವಿವಿಧ ದೇಶಗಳು ವಿಧಿಸಿರುವ ಬ್ಯಾನ್ ಬಗ್ಗೆಯೂ ಚರ್ಚೆ ನಡೆಯಲಿದ್ದು, ರೋಮ್‌ನಲ್ಲಿ ಅಮೆರಿಕ, ಚೀನಾ ಪ್ರತಿನಿಧಿಗಳ ಸಭೆ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button