ದೇಶ

ಪದ್ಮಶ್ರೀ ಪುರಸ್ಕೃತನ ವಿರುದ್ಧ POCSO ಕಾಯ್ದೆ ದಾಖಲು.!

ಅಪ್ರಾಪ್ತೆ(Minor) ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅಸ್ಸಾಂ ಮೂಲದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅದು ಅವನ ದತ್ತು ಮಗು(Adopted Child) ಎಂದು ತಿಳಿದು ಬಂದಿದೆ. ಡಿಸೆಂಬರ್ 17 ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ (DSLA) ಮಾಹಿತಿ ಪಡೆದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ದೂರಿನ ಆಧಾರದ ಮೇಲೆ, ಅಸ್ಸಾಂ ಪೊಲೀಸರು ಮರುದಿನವೇ ವ್ಯಕ್ತಿಯ ವಿರುದ್ಧ IPC ಮತ್ತು ಪೋಕ್ಸೋ(POCSO) ಕಾಯ್ದೆಯ ಸೆಕ್ಷನ್‌ಗಳನ್ನು ಅನ್ವಯಿಸಿ FIR ದಾಖಲಿಸಿದ್ದಾರೆ.

ಆರೋಪಿಗೆ ಮಧ್ಯಂತರ ಜಾಮೀನು

ಈ ಬಗ್ಗೆ ಸದ್ಯಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಆದರೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. FIR ದಾಖಲಾದ ಬಳಿಕ, ವ್ಯಕ್ತಿಯು ಗುವಾಹಟಿ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿ, ಬಂಧನಕ್ಕೆ ಮುಂಚಿತವಾಗಿ ಜಾಮೀನು ಕೋರಿದ್ದರು. ಅದರಂತೆ ಡಿಸೆಂಬರ್ 28ರಂದು ವ್ಯಕ್ತಿಗೆ ಮಧ್ಯಂತರ ಜಾಮೀನು ನೀಡಲಾಯಿತು.

ಗಂಭೀರ ಅಪರಾಧ

ತಮ್ಮ ಆದೇಶದಲ್ಲಿ, ನ್ಯಾಯಮೂರ್ತಿ ಅರುಣ್ ದೇವ್ ಚೌಧರಿ ಅವರು ಆರೋಪಿಸಲಾದ ಅಪರಾಧವು “ಸ್ವಭಾವದಲ್ಲಿ ಗಂಭೀರವಾಗಿದೆ” ಎಂದು ಹೇಳಿದರು. ಆದಾಗ್ಯೂ, ಅರ್ಜಿದಾರರ ಪೂರ್ವಾಪರಗಳು, ಅವರ ಪ್ರತಿಷ್ಠೆಯನ್ನು ಅವಮಾನಿಸಲು ಮತ್ತು ಕೆಡಿಸಲು ತ್ವರಿತ ಎಫ್‌ಐಆರ್ ದಾಖಲಿಸಲಾಗಿದೆ ಎಂಬ ಅವರ ಆರೋಪ ಮತ್ತು ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿ (CWC) ವಿರುದ್ಧದ ಪ್ರತಿ ಅರ್ಜಿಯನ್ನು ಪರಿಗಣಿಸಿ ಮಧ್ಯಂತರ ಜಾಮೀನು ನೀಡಲಾಯಿತು.

ಸಂತ್ರಸ್ತೆಯ ಹೇಳಿಕೆ ಬಹಿರಂಗಪಡಿಸಿಲ್ಲ

FIR ನಲ್ಲಿ ಸಂತ್ರಸ್ತೆಯ ಯಾವುದೇ ನಿರ್ದಿಷ್ಟ ಹೇಳಿಕೆಯನ್ನು ಬಹಿರಂಗಪಡಿಸಿಲ್ಲ ಎಂದು ಗಮನಿಸಿದ ನ್ಯಾಯಾಲಯವು, ನ್ಯಾಯದ ಹಿತಾಸಕ್ತಿಯಲ್ಲಿ ಮಧ್ಯಂತರ ಆದೇಶವನ್ನು ನೀಡಲಾಗುವುದು ಎಂದು ಹೇಳಿದೆ. 7 ದಿನಗಳೊಳಗೆ ಪೊಲೀಸರ ಮುಂದೆ ಹಾಜರಾಗುವಂತೆ ಅರ್ಜಿದಾರರಿಗೆ ಸೂಚಿಸಿದೆ.

ಆರೋಪಿಯನ್ನು ಅವರ ಮುಂದೆ ಹಾಜರುಪಡಿಸಲಾಗಿದ್ದು, ಆತನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಯ ಪೋಷಣೆಯಲ್ಲಿದ್ದ ಮಗು

ವರದಿಗಳಲ್ಲಿ ಉಲ್ಲೇಖ ಮಾಡಿರುವ ಪ್ರಕಾರ, ಮಗು ಆರೋಪಿಯ ಪೋಷಣೆಯಲ್ಲಿತ್ತು ಮತ್ತು ಒಂದು ವರ್ಷಕ್ಕೂ ಹೆಚ್ಚು ಕಾಲ ಪದೇ ಪದೇ ಅತ್ಯಾಚಾರಕ್ಕೆ ಒಳಗಾಗಿತ್ತು. ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗಳು ಆರೋಪಗಳಿಗೆ ಮತ್ತಷ್ಟು ಪುಷ್ಠಿ ನೀಡುತ್ತವೆ ಎಂದು ಉಲ್ಲೇಖಿಸಲಾಗಿದೆ.

ಸಂತ್ರಸ್ತೆಯನ್ನು ಒಂದು ವರ್ಷದ ಅವಧಿಗೆ ಆರೋಪಿಯ ಆರೈಕೆಯಲ್ಲಿ ಇರಿಸಲಾಗಿತ್ತು. ನಂತರ ಮಗುವಿನ ಪೋಷಣೆ ಪತ್ರವನ್ನು ನವೀಕರಿಸಬೇಕು ಎಂದು ಹೇಳಲಾಗಿತ್ತು. ಆದಾಗ್ಯೂ, ಆರೋಪಿಯು ಪತ್ರವನ್ನು ನವೀಕರಿಸಲಿಲ್ಲ ಅಥವಾ ಪತ್ರದ ಅವಧಿ ಮುಗಿದ ನಂತರ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ (CWC) ಮುಂದೆ ಒಪ್ಪಿಸಲಿಲ್ಲ ಎಂದು ತಿಳಿದು ಬಂದಿದೆ.

ಬಳಿಕ, 2021ರ ಅಕ್ಟೋಬರ್ 28 ರಂದು, ಆರೋಪಿಯು ಇಬ್ಬರು ಮಕ್ಕಳನ್ನು (ಸಂತ್ರಸ್ತೆ ಸೇರಿದಂತೆ) CWC ಮುಂದೆ ಹಾಜರುಪಡಿಸಿದ. ಆದರೆ CWC “ಪೋಸ್ಟರ್ ಕೇರ್ ಅನ್ನು ನವೀಕರಿಸಲು, ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ”. ಹೀಗಾಗಿ ಅವರನ್ನು ಮಕ್ಕಳ ಮನೆಗೆ ಕಳುಹಿಸಿತು.

CWCಗೆ ವರದಿ ಕೋರಿದ DSLA

FIR ಪ್ರಕಾರ, CWC ಸದಸ್ಯರು ನವೆಂಬರ್ 30ರಂದು ಸಂತ್ರಸ್ತೆಯ ಹೇಳಿಕೆಯೊಂದಿಗೆ DSLA ನ ದತ್ತಾ ಅವರನ್ನು ಸಂಪರ್ಕಿಸಿದಾಗ, ಲಭ್ಯವಿರುವ ಕಾನೂನು ಪರಿಹಾರಗಳಿಗೆ ಸಹಾಯ ಮಾಡಲು ವಿನಂತಿಸಿದಾಗ ಈ ವಿಷಯವು ಮೊದಲು ಬೆಳಕಿಗೆ ಬಂದಿತು. DSLA ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಿಗೆ ಮಾರ್ಗದರ್ಶನ ನೀಡಿತು. ಜೊತೆಗೆ ಕ್ರಮ-ತೆಗೆದುಕೊಂಡ ವರದಿಯನ್ನು ಕೋರಿ ಡಿಸೆಂಬರ್ 8ರಂದು CWC ಅಧ್ಯಕ್ಷರಿಗೆ ಪತ್ರವನ್ನು ಕಳುಹಿಸಿತು.

CWCಗೆ ಶೋಕಾಸ್ ನೋಟಿಸ್ ನೀಡಿದ DSLA

ಡಿಸೆಂಬರ್ 15 ರವರೆಗೆ CWC ಅಧ್ಯಕ್ಷರು ಯಾವುದೇ ವರದಿಯನ್ನು ಸಲ್ಲಿಸದಿದ್ದಾಗ, DSLA ಡಿಸೆಂಬರ್ 16 ರಂದು CWC ಗೆ ಶೋಕಾಸ್ ನೋಟಿಸ್ ಕಳುಹಿಸಿತು, “CWC ಯ ನಿಷ್ಕ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು” ಮತ್ತು “ಆರೋಪಗಳ ಸ್ವರೂಪ ಮತ್ತು ಗುರುತ್ವ” ಪರಿಗಣಿಸಿ, DSLA ಈ ವಿಷಯದ ಬಗ್ಗೆ ಪ್ರಾಥಮಿಕ ವಿಚಾರಣೆಯನ್ನು ಪ್ರಾರಂಭಿಸಿತು. ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳುವುದರ ಜೊತೆಗೆ ವೈದ್ಯಕೀಯ ಪರೀಕ್ಷೆಗೆ ಆದೇಶಿಸಿತು. ಎಫ್‌ಐಆರ್‌ನ ಪ್ರಕಾರ ಸಂತ್ರಸ್ತೆಯ ವೈದ್ಯಕೀಯ ವರದಿಯು ಲೈಂಗಿಕ ದೌರ್ಜನ್ಯದ ಲಕ್ಷಣಗಳನ್ನು ಸ್ಪಷ್ಟವಾಗಿ ತೋರಿಸಿದೆ.

Related Articles

Leave a Reply

Your email address will not be published. Required fields are marked *

Back to top button