ಸುದ್ದಿ
ಇಂದಿನಿಂದ ಬೆಂಗಳೂರಿನ ಫ್ಲೈ ಓವರ್ಗಳು ಸಂಪೂರ್ಣ ಬಂದ್!
ಬೆಂಗಳೂರು: ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಇಂದಿನಿಂದ ನಗರದ ಎಲ್ಲಾ ಫ್ಲೈ ಓವರ್ಗಳು ಬಂದ್ ಆಗಲಿವೆ.
ಜಕ್ಕೂರು, ಕೆಆರ್ ಮಾರ್ಕೆಟ್ ಸೇರಿದಂತೆ ನಗರದ ಎಲ್ಲಾ ಫ್ಲೈ ಓವರ್ ಇಂದಿನಿಂದ ರಾತ್ರಿ ಬಂದ್ ಆಗಲಿದ್ದು, ಅಗತ್ಯವಿರುವ ವಾಹನಗಳು ನಿರ್ಧಿಷ್ಟ ಕಾರಣ ಸರ್ವಿಸ್ ರೋಡ್ ಮುಖಾಂತರ ತೆರಳಲು ಅವಕಾಶ ನೀಡಲಾಗಿದೆ.
ನೆನ್ನೆ ನೈಟ್ ಕರ್ಫ್ಯೂ ಮೊದಲ ದಿನವಾದ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ಹಾಕಿ ವಾಹನ ಸವಾರಿಗೆ ಸೂಚನೆ ಕೊಟ್ಟಿದ್ದ ಪೊಲೀಸರು, ಇಂದಿನಿಂದ ಅನಾವಶ್ಯಕವಾಗಿ ಓಡಾಡುವವರಿಗೆ ಎನ್ಡಿಎಂಎ ಆ್ಯಕ್ಟ್ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಿದ್ದಾರೆ.