ದೇಶ

ವಿಷ ಆಹಾರ ಸೇವಿಸಿ ಮೊರಾರ್ಜಿ ವಸತಿ ಶಾಲೆಯ 95 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು!

ದಾವಣಗೆರೆ : ವಿಷ ಆಹಾರ ಸೇವಿಸಿ ಮೊರಾರ್ಜಿ ವಸತಿ ಶಾಲೆಯ (Morarji residential school) 95 ಮಕ್ಕಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ. ದಾವಣಗೆರೆ (Davanagere) ಜಿಲ್ಲೆ ಜಗಳೂರು ಪಟ್ಟಣದ ಅಲ್ಪ ಸಂಖ್ಯಾತರ ಮೊರಾರ್ಜಿ ಬಾಲಕಿಯ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ. ಅಸ್ವಸ್ಥ ಮಕ್ಕಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ತಾಲೂಕು ವೈಧ್ಯಾಧಿಕಾರಿ ಡಾ. ನಾಗರಾಜ್ ಭೀತಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾತ್ರಿ ಅನ್ನ ಸಾಂಬಾರ್ (Anna sambar) ಮತ್ತು ಬೆಳಿಗ್ಗೆ ಚಿತ್ರಾನ್ನ ಸೇವಿಸಿದ್ದ ಮಕ್ಕಳು ಅಸ್ವಸ್ಥರಾಗಿದ್ದಾರೆ.  ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದ ಅಲ್ಪ ಸಂಖ್ಯಾತರ ಮೊರಾರ್ಜಿ ಬಾಲಕಿಯ ವಸತಿ ಶಾಲೆಯಲ್ಲಿ ( Morarji vasati shale) ಘಟನೆ ನಡೆದಿದೆ.  ಅನ್ನ (rice) ಸೇವಿಸಿದ ನಂತರ ಮಕ್ಕಳು ಅಸ್ವಸ್ಥರಾಗಿರುವ ಬಗ್ಗೆ ವರದಿಯಾಗಿದೆ. ಅನ್ನ ಸೇವಿಸಿದ ನಂತರ ಮಕ್ಕಳಲ್ಲಿ ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿದೆ. 95 ಮಕ್ಕಳು ಆಹಾರ ಸೇವಿಸಿ ಅಸ್ವಸ್ಥರಾಗಿದ್ದು, ಇವರಲ್ಲಿ 50 ಮಕ್ಕಳನ್ನು  ಜಗಳೂರು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಉಳಿದ ಮಕ್ಕಳಿಗೆ ಮೊರಾರ್ಜಿ ವಸತಿ ಶಾಲೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಆಹಾರ (Food) ಸೇವಿಸಿದ ನಂತರ ಮಕ್ಕಳು ಅಸ್ವಸ್ಥರಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ, ಸ್ಥಳಕ್ಕೆ ತಾಲೂಕು ವೈಧ್ಯಾಧಿಕಾರಿ ಡಾ. ನಾಗರಾಜ್, ಮಕ್ಕಳ ತಜ್ಞ ಜಯಕುಮಾರ್, ತಹಶೀಲ್ದಾರ್ ಶಶಿಧರಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳು ಸೇವಿಸಿದ ಆಹಾರವನ್ನ ಪರೀಕ್ಷೆಗೆ (food testing) ಕಳುಹಿಸಲಾಗಿದೆ. ಒಟ್ಟು 107 ವಿದ್ಯಾರ್ಥಿಗಳಲ್ಲಿ ಆಹಾರ ಸೇವಿಸಿದ ನಂತರ 95 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. 

Related Articles

Leave a Reply

Your email address will not be published. Required fields are marked *

Back to top button