ಚೆನ್ನೈ: ಇತ್ತೀಚೆಗಷ್ಟೇ ತಮಿಳುನಾಡು ರಾಜಕೀಯಕ್ಕೆ ಹಿಂದಿರುಗಿರುವ ಎಐಎಡಿಎಂಕೆ ಉಚ್ಛಾಟಿತ ನಾಯಕಿ ವಿಕೆ ಶಶಿಕಲಾ ಅವರು ಇಂದು ಸೂಪರ್ ಸ್ಚಾರ್ ರಜನಿಕಾಂತ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಚೆನ್ನೈನ ಪೋಯಸ್ ಗಾರ್ಡನ್ ನಲ್ಲಿರುವ ರಜನಿಕಾಂತ್ ನಿವಾಸಕ್ಕೆ ವಿಕೆ ಶಶಿಕಲಾ ಅವರು ಭೇಟಿ ನೀಡಿದ್ದು, ಅವರನ್ನು ರಜನಿಕಾಂತ್ ಮತ್ತು ಲತಾ ದಂಪತಿಗಳು ಸ್ವಾಗತಿಸಿದರು. ಸುಮಾರು ಅರ್ಧ ಗಂಟೆಗೂ ಅಧಿಕಕಾಲ ನಡೆದ ಸಭೆಯಲ್ಲಿ ರಜನಿಕಾಂತ್ ಮತ್ತು ವಿಕೆ ಶಶಿಕಲಾ ಸಾಕಷ್ಟು ವಿಚಾರವಾಗಿ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಮುಖವಾಗಿ ಇತ್ತೀಚೆಗೆ ರಜನಿಕಾಂತ್ ಅವರಿಗೆ ದಾದಾ ಸಾಹೆಬ್ ಫಾಲ್ಕೆ ಪ್ರಶಸ್ತಿ ಲಭಿಸಿದ ಕುರಿತು ಶಶಿಕಲಾ ಶುಭಕೋರಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ರಜನಿ ಅವರ ಆರೋಗ್ಯ ಮತ್ತು ಸಿನಿಮಾಗಳ ಕುರಿತು ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ.
