ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನೂತನ ಪೋಲಿಸ್ ಠಾಣೆ ಲೋಕರ್ಪಣೆ
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ
ಸರಸ್ವತಿ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಪೊಲೀಸ್ ಠಾಣೆ’ ಉದ್ಘಾಟನಾ ಕಾರ್ಯಕ್ರಮ.
ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರು ಗೃಹ ಸಚಿವರಾದ ಆರಗ ಜ್ಞಾನೇಂದ್ರ ,ಸ್ಥಳೀಯ ಶಾಸಕರು ,ವಸತಿ ಸಚಿವರಾದ ವಿ.ಸೋಮಣ್ಣರವರು ,
ಕಂದಾಯ ಸಚಿವರಾದ ಆರ್.ಅಶೋಕ್ , ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ,ಪೋಲಿಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ,
ಬೆಂಗಳೂರುನಗರ ಪೋಲಿಸ್ ಆಯುಕ್ತರಾದ ಕಮಲ್ ಪಂತ್ ರವರು ಉದ್ಘಾಟನೆ ಮಾಡಿದರು.
ರಾಜ್ಯ ಬಿ.ಜೆ.ಪಿ.ಯುವ ಮುಖಂಡರಾದ ಡಾ||ಅರುಣ್ ಸೋಮಣ್ಣ ,
ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ ,ಮಾಜಿ ಪಾಲಿಕೆ ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿ ,ಡಾ||ಎಸ್.ರಾಜು ,ಮೋಹನ್ ಕುಮಾರ್ ,ದಾಸೇಗೌಡ,ಶ್ರೀಮತಿ ಮಧುಕುಮಾರಿ ವಾಗೇಶ್ ಶ್ರೀಮತಿ ರೂಪ ಲಿಂಗೇಶ್ವರ್ ರವರು ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರು ಮಾತನಾಡಿ ಸರಸ್ವತಿನಗರ ಪೋಲಿಸ್ ಠಾಣೆ ನಿರ್ಮಾಣಕ್ಕೆ ನಾನು ಗೃಹ ಸಚಿವನಾಗಿದ್ದ ಸಂದರ್ಭದಲ್ಲಿ ಅನುಮತಿ ನೀಡಿದ್ದೇ ಇಂದು ಮುಖ್ಯಮಂತ್ರಿಯಾಗಿ ಉದ್ಘಾಟನೆ ಮಾಡಿದ್ದೇನೆ.
ಪೋಲಿಸ್ ದಿನದ ಪ್ರತಿದಿನ 24ಘಂಟೆ ಕಾರ್ಯನಿರ್ವಹಿಸುತ್ತಾರೆ .
ಸಂಕಷ್ಟದಲ್ಲಿ ಇರುವವರು ಮೊದಲು ಪೋಲಿಸ್ ನೆನಪಿಸಿಕೊಳ್ಳುತ್ತಾರೆ .ಮಗು ತಾಯಿಯನ್ನ ನೆನಪಿಸಿಕೊಳ್ಳುವಂತೆ ಜನರು ಪೋಲಿಸ್ ರ ಒಡಿನಾಡಿಯಾಗಿದ್ದಾರೆ .
ದೇಶದಲ್ಲಿ ಕರ್ನಾಟಕ ಪೋಲಿಸ್ ವಿಶೇಷ ಸ್ಥಾನಮಾನವಿದೆ .
ರಾಜಕೀಯ ಇಚ್ಚಾ ಶಕ್ತಿ ಇದ್ದರೆ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿ ಇರುತ್ತದೆ .
ಮಾದಕ ವಸ್ತುಗಳ ವಿರುದ್ದ ಸಮರ ಸಾರಲಾಗಿದೆ .ನೂರಾರು ಮಾದಕ ದಂಧೆಯಲ್ಲಿ ಇದ್ದವರನ್ನ ಜೈಲಿಗೆ ಕಳುಹಿಸಲಾಗಿದೆ .50ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ನಾಶ ಮಾಡಲಾಗಿದೆ .ಜೂಜಾಟ ,ಆನ್ ಲೈನ್ ಜೂಜಾಟ ಕಡಿವಾಣ .
ಮಕ್ಕಳು ಜೂಜಾಟಕ್ಕೆ ಬಲಿಯಾಗ ಬಾರದೆಂದು ಆನ್ ಲೈನ್ ವಿರುದ್ದ ಕಾನೂನಿ ರೂಪಿಸಲಾಗಿದೆ.
ದುಷ್ಟಶಕ್ತಿಗಳ ವಿರುದ್ದ ಸೆಣಸಲು ಸರ್ಕಾರ ಸಜ್ಜಾಗಿದೆ .ಬೆಂಗಳೂರುನಗರಕ್ಕೆ 195ಕಿಲೋ ಮೀಟರ್ ಸಿಗ್ನಲ್ ಮುಕ್ತ ಸಂಚಾರಕ್ಕೆ ಯೋಜನೆ ರೂಪಿಸಲಾಗಿದೆ .ಬೆಂಗಳೂರುನಗರ ಸರ್ವಾಂರ್ಗಿಣ ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ಮಾತನಾಡಿ ಸರಸ್ವತಿನಗರ ಪೋಲಿಸ್ ಠಾಣೆ ಅತ್ಯುಧುನಿಕ ಸೌಲಭ್ಯ ಹೊಂದಿದ ಬೆಂಗಳೂರಿನ ಹೈಟೆಕ್ ಪೋಲಿಸ್ ಠಾಣೆಯಾಗಿದೆ 200ಕೋಟಿ ರೂಪಾಯಿ ವೆಚ್ಚದಲ್ಲಿ 100ಪೋಲಿಸ್ ಠಾಣೆ ನಿರ್ಮಿಸಲಾಗುವುದು.
ಪೋಲಿಸ್ ಕುಟುಂಬಗಳಿಗೆ ಸುಸ್ಜಜಿತ ಮನೆಯನ್ನು ನಿರ್ಮಿಸಲಾಗುವುದು.ರಾಜ್ಯದಲ್ಲಿ 5ಐದು ಎಫ್.ಎಸ್.ಎಲ್.ಲ್ಯಾಬ್ ಇದೆ .
ಫಿನ್ ಲ್ಯಾಂಡ್ ದೇಶದಿಂದ ನೂರಾರು ಕೋಟಿ ವೆಚ್ಚದಲ್ಲಿ ಅಗ್ನಿಶಾಮಕ ವಾಹನ ತರಿಸಲಾಗುತ್ತಿದೆ .
ಮಾದಕ ಪದಾರ್ಥಗಳಿಗೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.
ವಸತಿ ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ಗೋವಿಂದರಾಜನಗರ ಜನರ ಸುರಕ್ಷತೆ ,ರಕ್ಷಣೆಗಾಗಿ ಪೋಲಿಸ್ ಠಾಣೆ ಲೋಕರ್ಪಣೆ ಮಾಡಲಾಗಿದೆ .ಸುತ್ತಮುತ್ತಲ ಪ್ರದೇಶದವರು ದೂರದ ವಿಜಯನಗರ ಪೋಲಿಸ್ ಹೋಗಬೇಕಿತ್ತು ಅದ್ದರಿಂದ ಸಮಸ್ಯೆ ನಿವಾರಿಸಲು ಇಲ್ಲಿ ಪೋಲಿಸ್ ಠಾಣೆ ಆರಂಭಿಸಲಾಗಿದೆ .ಇನ್ನ ಮೂರು ತಿಂಗಳಲ್ಲಿ ದಾಸರಹಳ್ಳಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ,ಒಂದೇ ಸೂರಿನಡಿ 3500ವಿದ್ಯಾಭ್ಯಾಸ ಅನುಕೂಲಕ್ಕೆ ಹೈಟೆಕ್ ಶಾಲೆ ಲೋಕರ್ಪಣೆಗೆ ಸಿದ್ದವಾಗಿದೆ.
8ಕಿಲೋ ಮೀಟರ್ ಭೂಗತ ಕೇಬಲ್ ಆಳವಡಿಸಲಾಗಿದೆ.
ವಸತಿ ಇಲಾಖೆ ವತಿಯಿಂದ 5ಲಕ್ಷ ಮನೆಗಳನ್ನು ವಿತರಿಸಲಾಗುವುದು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪೋಲಿಸ್ ಠಾಣೆಯಿಂದ ನೊಂದವರಿಗೆ ನ್ಯಾಯ ಸಿಗಲಿದೆ ಮತ್ತು ಅಪರಾಧ ಚಟುವಟಿಕೆ ,ರೌಡಿಗಳ ಉಪಟಳಕ್ಕೆ ಕಡಿವಾಣ ಬೀಳಲಿದೆ ಎಂದು ಹೇಳಿದರು.