ರಾಜ್ಯ

ಸಿದ್ದರಾಮಯ್ಯ ಹಿಂದುಳಿದ ವರ್ಗದ ಯಾರೊಬ್ಬರನ್ನೂ ಮೇಲೆ ತರಲಿಲ್ಲ…

ದಾವಣಗೆರೆ : ಅಹಿಂದ ನನ್ನ ಬೆಂಬಲಕ್ಕೆ ಇದೆ ಎಂದು ಹೇಳುತ್ತಿದ್ದೆ. ಹಾಗಾದ್ರೆ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಯಾಕಪ್ಪ ಸೋತೆ, ಸಿಎಂ ಪದವಿ ಯಾಕಪ್ಪಾ ಕಳೆದುಕೊಂಡೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಚಿವ ಕೆ ಎಸ್ ಈಶ್ವರಪ್ಪ ಏಕ ವಚನದಲ್ಲೇ ಟಾಂಗ್ ನೀಡಿದ್ದಾರೆ.

ದಾವಣಗೆರೆಯಲ್ಲಿ ನಡೆದ ಹಿಂದುಳಿದ ವರ್ಗಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ದೇವರಾಜ್ ಅರಸು ಅವರ ಬಳಿಕ ಹಿಂದುಳಿದ ವರ್ಗದವರಿಗೆ ಸಿದ್ದರಾಮಯ್ಯ ಸಹಾಯ ಮಾಡಿರುವುದಾಗಿ ಹೇಳ್ತಾರೆ. ಆದ್ರೆ, ಹಿಂದುಳಿದ ವರ್ಗಗಳಿಗೆ ಅವರು ಯಾವುದೇ ಸಹಾಯ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಹಿಂದುಳಿದ ವರ್ಗದ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಿದೆ. ಆದರೆ, ಕಾಂಗ್ರೆಸ್ ಮಾತ್ರ ಹಿಂದುಳಿದ ವರ್ಗದವರನ್ನು ಯಾಕೆ ಪ್ರಧಾನಿ ಮಾಡಿಲ್ಲ? ಸಿದ್ದರಾಮಯ್ಯ ಹಿಂದುಳಿದ ವರ್ಗದ ಯಾರೊಬ್ಬರನ್ನೂ ಮೇಲೆ ತರಲಿಲ್ಲ ಎಂದು ಸಚಿವ ಈಶ್ವರಪ್ಪ ಆರೋಪಿಸಿದರು.

Related Articles

Leave a Reply

Your email address will not be published. Required fields are marked *

Back to top button