ರಾಜಕೀಯ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ JDS ಸಿಂಗಲ್ ಡಿಜಿಟ್ ಅಷ್ಟೇ ಗೆಲ್ಲುವುದು
ವಿಧಾನ ಪರಿಷತ್ ಚುನಾವಣೆಯಲ್ಲಿ (MLC Election) ಜೆಡಿಎಸ್ (JDS) ಏಳು ಸ್ಥಾನದಲ್ಲಿ ಸ್ಪರ್ಧಿಸಿರುವ ವಿಚಾರಕ್ಕೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ (MLA Zameer Ahmed Khan) ಪ್ರತಿಕ್ರಿಯಿಸಿದ್ದಾರೆ. ಜೆಡಿಎಸ್, ಬಿಜೆಪಿ (BJP) ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವ ಸಾಧ್ಯತೆ ಇದೆ. ಎಲ್ಲಾ 25 ಸ್ಥಾನಕ್ಕೂ ಅಭ್ಯರ್ಥಿ ಹಾಕಬೇಕಿತ್ತು. ಕೇವಲ 7 ಸ್ಥಾನಕ್ಕೆ ಹಾಕಿರುವುದು ಅನುಮಾನಸ್ಪದವಾಗಿ ಕಾಣುತ್ತಿದೆ. ಅವರಿಗೆ ಅಭ್ಯರ್ಥಿಗಳು ಇಲ್ಲವಾ? ಇಲ್ಲದಿದ್ದರೆ ಸ್ಪಷ್ಟಪಡಿಸಲಿ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಒತ್ತಾಯಿಸಿದ್ದಾರೆ. ಬಿಜೆಪಿಗೆ ಲಾಭ ಮಾಡಿಕೊಡಲು ಜೆ.ಡಿ.ಎಸ್ ಮಾಡಿರುವ ತಂತ್ರ ಅಂತ ಅನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು. 123 ಸ್ಥಾನ ಗೆದ್ದು ಅಧಿಕಾರ ಹಿಡಿಯುತ್ತೇವೆ ಅನ್ನೋ ಹೆಚ್.ಡಿ.ಕುಮಾರಸ್ವಾಮಿ (Former CM HD Kumarasamy) ಹೇಳಿಕೆಗ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿಂಗಲ್ ಡಿಜಿಟ್ ಮಾತ್ರ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.