ಟೈಂ(Time) ಬ್ಯಾಡ್(Bad) ಆದರೆ, ಒಂಟೆ(Camel) ಮೇಲೆ ಕೂತಿದ್ರು ನಾಯಿ(Dog) ಬಂದು ಎಗರಿ ಕಚ್ಚಿಬುಡುತ್ತೆ ಅನ್ನುವ ಡೈಲಾಗ್ ಅನ್ನು ಕೇಳಿರುತ್ತೀರಾ. ಇಲ್ಲೂ ಅಂಥದ್ದೇ ಒಂದು ಘಟನೆ ನಡೆದಿದೆ. ಮದುವೆ(Marriage) ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ನಾವು ಮದುವೆಯಾದರೆ ಹೀಗೆ ಆಗಬೇಕೆಂಬ ನೂರಾರು ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ಈ ಸ್ಥಳದಲ್ಲೇ ಮದುವೆಯಾಗಬೇಕು, ಇಷ್ಟು ಜನರನ್ನ ಕರಿಯಬೇಕು. ಮದುವೆಗೂ ಮುನ್ನ ಒಳ್ಳೆ ಪ್ರೀ ವೆಡ್ಡಿಂಗ್ ಫೋಟೋ ಶೂಟ್(Pre Wedding Photoshoot) ಮಾಡಿಸಬೇಕೆಂಬ ಆಸೆ ಯಾರಿಗಿಲ್ಲ ಹೇಳಿ.
ಈ ಹಿಂದೆ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಎಲ್ಲ ಇರಲಿಲ್ಲ. ಹುಡುಗಿ ಮುಖ ನೋಡದೇ ಮದುವೆಯಾಗಿರೋದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಈ ಜಮಾನದಲ್ಲಿ ಎಲ್ಲವೂ ಅದ್ಧೂರಿಯಾಗಿ ನಡೆಯಬೇಕು. ತಾವು ಅಂದುಕೊಂಡತೆ ಮದುವೆಯಾಗಬೇಕು ಎಂದು ಪ್ಲ್ಯಾನ್(Plan) ಮಾಡಿಕೊಳ್ಳುತ್ತಾರೆ. ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸುತ್ತಾರೆ. ಇಂಥದ್ದೇ ಒಂದು ಆಸೆ ಆ ಭಾವಿ ಜೋಡಿ(New Couples)ಗಳಿಗೆ ಸಂಕಷ್ಟ ತಂದೊಡ್ಡಿತ್ತು. ಫೋಟೋ ಶೂಟ್ ಮಾಡಿಸಲು ಹೋಗಿ ಪ್ರಾಣಕ್ಕೆ ಕುತ್ತು ಬಂದಿತ್ತು. ಅದೃಷ್ಟವಶಾತ್ ಪ್ರಾಣಪಾಯದಿಂದ ಪರಾಗಿದ್ದಾರೆ.
ಫೋಟ್ ಶೂಟ್ ಮಾಡಿಸಲು ಹೋಗಿ ನದಿ ಮಧ್ಯೆ ಲಾಕ್!
ಹೌದು, ಭಾವಿ ಜೋಡಿಯೊಂದು ಫೋಟೋ ಶೂಟ್ ಮಾಡಿಸಲು ಹೋಗಿ ನದಿ ಮಧ್ಯೆ ಸಿಲುಕಿಕೊಂಡಿದ್ದರು. ರಾಜಸ್ಥಾನದ ಪದಜಾರ್ ಖುರ್ದ್ನಲ್ಲಿರುವ ಚಂಬಲ್ ನದಿಯ ರಾಣಾಪ್ರತಾಪ್ ಸಾಗರ್ ಅಣೆಕಟ್ಟಿನಲ್ಲಿ ಈ ಘಟನೆ ನಡೆದಿದೆ. ಭಾವಿ ಜೋಡಿಯೊಂದು ಇಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಲು ಬಂದಿದ್ದರು. ನೀರಿನ ಪ್ರಮಾಣ ಕಡಿಮೆ ಇದ್ದ ಕಾರಣ ನದಿ ಮಧ್ಯೆ ಹೋಗಿದ್ದಾರೆ. ಈ ವೇಳೆ ಅಣೆಕಟ್ಟಿನಿಂದ ನೀರು ಬಿಡಲಾಗಿದೆ. ಆದರೆ ಈ ಭಾವಿ ಜೋಡಿಗೆ ಇದರ ಅರಿವೆ ಆಗಿಲ್ಲ. ತಮ್ಮ ಪಾಡಿಗೆ ಫೋಟೋಗೆ ಪೋಸ್ ನೀಡಿದ್ದಾರೆ. ಬಳಿಕ ನೀರಿನ ಪ್ರಮಾಣ ಹೆಚ್ಚಾಗಿ ನದಿ ಮಧ್ಯೆ ಇದ್ದ ಒಂದು ಬಂಡೆಯ ಮೇಲೆ ಕುಳಿತುಕೊಂಡಿದ್ದಾರೆ.