ಮಹಾಮಾರಿ ಕೊರೋನಾ(Corona) ಕಪಿ ಮುಷ್ಟಿಯಲ್ಲಿ ಸಿಲುಕಿ ಇಡೀ ವಿಶ್ವವೇ ನಲುಗಿಹೋಗಿತ್ತು. ಎಲ್ಲೋ ದೂರದ ಚೀನಾ(China)ದಲ್ಲಿ ಕಾಣಿಸಿಕೊಂಡಿದ್ದ ಈ ವೈರಸ್, ನೋಡ ನೋಡುತ್ತಿದ್ದಂತೆ ಇಡೀ ಪ್ರಪಂಚಕ್ಕೆ ಹಬ್ಬಿಕೊಂಡಿತ್ತು. ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಜೀವವನ್ನೇ ಕಸಿದುಕೊಂಡಿತ್ತು. ಆದರೆ ಇಡೀ ವಿಶ್ವಕ್ಕೆ ಕೊರೋನಾ ಹಂಚಿದ್ದು ಚೀನಾ ಎಂದು ಎಲ್ಲರಿಗೂ ತಿಳಿದಿದೆ. ಈ ಹೆಮ್ಮಾರಿ ಕೊರೋನಾ ವೈರಸ್ ಹುಟ್ಟುಹಾಕಿದ್ದೇ(The Coronavirus Virus was Born) ಚೀನಾ ಎಂದು ಹೇಳಲಾಗುತ್ತೆ. ಇದು ಹಲವು ಬಾರಿ ಕೂಡ ಸಾಬೀತಾಗಿದೆ.
ಆದರೆ ಈ ಆರೋಪಗಳನ್ನು ಚೀನಾ ತಳ್ಳಿ ಹಾಕಿದೆ. ಆದರೆ ಮತ್ತೆ ಚೀನಾದಲ್ಲಿ ಪರಿಸ್ಥಿತಿ ಕೈ ಮಿರುತ್ತಿದೆ. ಮತ್ತೆ ಕೊರೋನಾ ತನ್ನ ಆರ್ಭಟವನ್ನು ಶುರುಮಾಡಿದೆ. ಆದರೆ ಚೀನಾ ವಾಸ್ತವದ ಬಗ್ಗೆ ವರದಿ(Report on the Reality of China) ಮಾಡಿದ್ದ ಅದೆಷ್ಟೋ ಪತ್ರಕರ್ತರು(Journalists) ನಾಪತ್ತೆಯಾಗಿದ್ದಾರೆ. ಚೀನಾ ಕುತಂತ್ರ ಬಯಲು ಮಾಡಲು ಯತ್ನಿಸಿದ ಪತ್ರಕರ್ತರೆಲ್ಲ ಕಾಣೆಯಾಗಿದ್ದಾರೆ( Journalists are Missing) ಕೆಲ ವರು ನಿಗೂಡವಾಗಿ ಮೃತಪಟ್ಟಿದ್ದಾರೆ. ಇನ್ನೂ ಕೆಲವರನ್ನು ಜೈಲಿಗೆ ಹಾಕಿ ಘನಘೋರ ಶಿಕ್ಷೆಗಳನ್ನ ಚೀನಾ ಸರ್ಕಾರ ನೀಡುತ್ತಿದೆಯಂತೆ. ಕೊರೋನಾ ವಸ್ತುಸ್ಥಿತಿ ವರದಿ ಮಾಡಿ ಬಂಧನಕ್ಕೊಳಗಾಗಿದ್ದ ಪತ್ರಕರ್ತೆ ಇದೀಗ ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.
ಕ್ಷೀಣಿಸುತ್ತಿದೆ ಪತ್ರಕರ್ತೆ ಝಾಂಗ್ ಝಾನ್
2020ರಲ್ಲಿ ಕೊರೋನಾ ಅಬ್ಬರ ಜೋರಾಗಿತ್ತು. ಈ ವೇಳೆ 38 ವರ್ಷದ ಝಾಂಗ್ ಝಾನ್ ಎಂಬ ಪತ್ರಕರ್ತೆ ವುಹಾನ್ ಕೊರೋನಾ ಬಗ್ಗೆ ವರದಿ ಮಾಡಿದ್ದರು. ವುಹಾನ್ ವಾಸ್ತವದ ಬಗ್ಗೆ ಜನರಿಗೆ ತಿಳಿಸುಲು ಯತ್ನಿಸಿದ್ದರು. ಇದು ಚೀನಾ ಸರ್ಕಾರದ ಕೆಂಗಣ್ಣಿಗೆ ಕಾರಣವಾಗಿತ್ತು. ಕೂಡಲೇ ಚೀನಾ ಹಾಗೂ ಸರ್ಕಾರದ ವಿರುದ್ಧ ವರದಿ ಮಾಡಿದ ಕಾರಣಕ್ಕೆ ಪತ್ರಕರ್ತೆಯನ್ನು ಬಂಧಿಸಲಾಗಿತ್ತು. ಫೆಬ್ರವರಿ 2020ರಲ್ಲಿ ಝಾಂಗ್ ವುಹಾನ್‌ಗೆ ತೆರಳಿ ವರದಿ ಮಾಡಿದ್ದರು. ತಮ್ಮ ಮೊಬೈಲ್ ಮೂಲಕ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಈ ನಡೆ ಚೀನಾವನ್ನು ಮತ್ತಷ್ಟು ಕೆರಳಿಸಿತ್ತು. 2020ರ ಮೇ ತಿಂಗಳಲ್ಲಿ ಪತ್ರಕರ್ತೆಯನ್ನು ಚೀನಾ ಸರ್ಕಾರ ಬಂಧಿಸಿತ್ತು.