ರಾಜ್ಯಸುದ್ದಿ

ಆನ್​ಲೈನ್​ನಲ್ಲಿ ಆಡಬಹುದಾದ ಟಾಪ್​ ದೀಪಾವಳಿ ಪಾರ್ಟಿ ಗೇಮ್​ಗಳಿವು..!

ದೇಶದಾದ್ಯಂತ ಜನರು ದೀಪಾವಳಿ ಹಬ್ಬದ ಸಡಗರದಲ್ಲಿ ಇದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸಾಂಕ್ರಾಮಿಕ ರೋಗದ ನಡುವೆಯು ದೀಪಾವಳಿ ಹಬ್ಬವನ್ನು ಜನರು ಮನೆಯಿಂದ, ಸ್ನೇಹಿರೊಡಗೂಡಿ ಆಚರಿಸುತ್ತಿದ್ದಾರೆ. ಆದರೆ ಕಳೆದ ವರ್ಷ ಇದೆಲ್ಲ ಅಸಾಧ್ಯವಾಗಿತ್ತು. ಇನ್ನು ಕೆಲವರಿಗೆ ಸಾಂಕ್ರಾಮಿಕ ರೋಗದಿಂದಾಗಿ ದೂರದ ಊರಿನಲ್ಲಿರುವ ಜನರು ಮನೆಗೆ ಪ್ರಯಾಣಿಸಲು ಮತ್ತು ತಮ್ಮ ಕುಟುಂಬ ಸದಸ್ಯರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಲು ಕಷ್ಟಕರವಾಗಿತ್ತು. ಹಾಗಾಗಿ ಗೂಗಲ್ ಮೀಟ್, ವಾಟ್ಸ್ಆ್ಯಪ್, ಫೇಸ್‌ಬುಕ್ ಮೆಸೆಂಜರ್ ಮತ್ತು ಜೂಮ್‌ನಂತಹ ವೀಡಿಯೊ ಕರೆ ಮಾಡುವ ವೇದಿಕೆಗಳ ಮೂಲಕ ಮನೆಗೆ ಕರೆಮಾಡಿ ಸಂಭ್ರಮವನ್ನು ವೀಕ್ಷಿಸುತ್ತಿದ್ದ ಸ್ಥಿತಿ ನಿರ್ಮಾಣವಾಗಿತ್ತು.

ಈ ವರ್ಷ ಸಾಂಕ್ರಾಮಿಕ ರೋಗಕ್ಕೆ ತುತ್ತಾದವರ ಸಂಖ್ಯೆ ಇಳಿಕೆ ಕಂಡಿದೆ. ಹಾಗಾಗಿ ಕುಟುಂಬದವರ ಜೊತೆಗೆ ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ದಾರೆ. ಅದರಂತೆ ದೀಪಾವಳಿ ಹಬ್ಬವನ್ನು ಸ್ನೇಹಿರರೊಂದಿಗೆ ಅಥವಾ ಕುಟುಂಬದವರೊಂದಿಗೆ ಕೂಡಿ ಆಚರಿಸುವುದು ಒಂದೆಡೆಯಾದರೆ ಫ್ರೀ ಇದ್ದಾಗ ಆನ್​ಲೈನ್​ ಮೂಲಕವು ದೀಪಾವಳಿ ಗೇಮ್​ ಆಡಿ ಸ್ನೇಹಿತರೊಂದಿಗೆ ಸಂತೋಷವಾಗಿರಬಹುದಾಗಿದೆ. ಅದಕ್ಕಾಗಿ ಆನ್​ಲೈನ್​ನಲ್ಲಿರುವ ದೀಪಾವಳಿ ಗೇಮ್​ಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

ಹೆಸರು ಸ್ಥಳ ಪ್ರಾಣಿ ವಸ್ತು (Name Place Animal Thing)

ಹೆಸರು ಪ್ಲೇಸ್ ಅನಿಮಲ್ ಥಿಂಗ್ (Name Place Animal Thing) ಅತ್ಯಂತ ಜನಪ್ರಿಯ ಆಟಗಳಲ್ಲಿ ಒಂದಾಗಿದೆ. ವಿಡಿಯೋ ಕರೆಯನ್ನು ಮಾಡಿ ಅಥವಾ ಸಮಯ ಮತ್ತು ಪದಗಳನ್ನು ಮೂಲಕ ಈ ಆಟ ಆಡಬಹುದಾಗಿದೆ. ಒಬ್ಬ ವ್ಯಕ್ತಿಯು ಆಟವನ್ನು ಪ್ರಾರಂಭಿಸುವಾಗ ವರ್ಣಮಾಲೆಯ ಅಕ್ಷರವನ್ನು ಆರಿಸಿಕೊಳ್ಳಬಹುದು ಮತ್ತು ಹೆಸರು, ಸ್ಥಳ, ಪ್ರಾಣಿ, ವಸ್ತುಗಳ ಬಗ್ಗೆ ಹೆಚ್ಚು ತಿಳಿದಿರುವವರೊಂದಿಗೆ ಆಟವಾಡಿದರೆ ಒಳಿತು.

ತಾಂಬೋಲ (Tambola)

ತಾಂಬೋಲಾ ಎಲ್ಲಾ ವಯೋಮಾನದ ಜನರಿಗೆ ಸಾರ್ವಕಾಲಿಕ ನೆಚ್ಚಿನ ಆಟವಾಗಿದ್ದು, ಇದರಲ್ಲಿ ನೀವು ಕರೆ ಮಾಡಲಾದ ಸಂಖ್ಯೆಗಳನ್ನು ಕತ್ತರಿಸಬೇಕಾಗುತ್ತದೆ. ನೀವು 4 ಬಹುಮಾನ ಸ್ಲಾಟ್‌ಗಳನ್ನು ಇಟ್ಟುಕೊಳ್ಳಬಹುದು: ಸಾಲುಗಳು, 4-ಮೂಲೆಗಳು, ಆರಂಭಿಕ-7 ಮತ್ತು ಪೂರ್ಣ ಮನೆ.

Related Articles

Leave a Reply

Your email address will not be published. Required fields are marked *

Back to top button