ನಮ್ಮನೆಲ್ಲ ಬಿಟ್ಟು ಪವರ್ ಸ್ಟಾರ್(Power Star) ಬಾರದ ಲೋಕಕ್ಕೆ ಹೊಗಿದ್ದಾರೆ. ಆದರೆ ಈ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. 6 ದಿನ ಅಲ್ಲ, 6 ಸಾವಿರ ದಿನಗಳು ಕಳೆದrರು ಅಪ್ಪು(Appu) ನೆನೆಪುಗಳು ನಮ್ಮಿಂದ ದೂರವಾಗುವುದಿಲ್ಲ. ಎಲ್ಲೆ ಹೋದರು, ಎಲ್ಲೆ ಬಂದರು ಪುನೀತ್ ರಾಜ್ಕುಮಾರ್ ಅವರ ನಗು ಮುಖ(Smiling Face) ನಮ್ಮನ್ನ ಹಿಂಬಾಲಿಸಿ ಬರುತ್ತಿದೆ. ನಿನ್ನೆ ಡಾ.ರಾಜ್ಕುಮಾರ್(Dr.Rajkumar) ಕುಟುಂಬಸ್ಥರೆಲ್ಲ ಅಪ್ಪು ಸಮಾಧಿ ಬಳಿ ಬಂದು ಹಾಲು-ತುಪ್ಪ ಕಾರ್ಯವನ್ನು ನೇರವೇರಿಸಿದ್ದರು.
ಇದಾದ ಬಳಿಕ ಅಪ್ಪು ಸಮಾಧಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ(Permission) ನೀಡುತ್ತೇವೆ ಎಂದು ರಾಘಣ್ಣ ಹೇಳಿದ್ದರು. ಅದರಂತೆ ಇಂದಿನಿಂದ ಸಾರ್ವಜನಿಕರಿಗೆ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. 25 ಲಕ್ಷಕ್ಕೂ ಹೆಚ್ಚು ಜನರು ಅಪ್ಪು ಅಂತಿಮ ದರ್ಶನವನ್ನು ಪಡೆದುಕೊಂಡಿದ್ದರು. ಇನ್ನೂ ಅದೆಷ್ಟೋ ಮಂದಿ ಅಪ್ಪು ಅಂತಿಮ ದರ್ಶನಕ್ಕೆ ಕಾದು ಕುಳಿತಿದ್ದರು. ಆದರೆ ಅಂತ್ಯಕ್ರಿಯೆ ವೇಳೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಕಂಠೀರವ ಸ್ಟುಡಿಯೋ(Kanteerava Studio) ಸುತ್ತಮುತ್ತ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ಮತ್ತೆ ಇಂದಿನಿಂದ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಅಪ್ಪು ಸಮಾಧಿ ಬಳಿ ಕಿಕ್ಕೀರಿದು ಸೇರಿದ ಫ್ಯಾನ್ಸ್
ಇಂದಿನಿಂದ ಸಾರ್ವಜನಿಕರಿಗೆ ಅಪ್ಪು ಸಮಾಧಿ ವೀಕ್ಷಣೆಗೆ ಅವಕಾಶ ನೀಡಿರುವ ಹಿನ್ನಲೆ ಮುಂಜಾನೆಯಿಂದಲೇ ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿಗಳು ಜಮಾಯಿಸಿದ್ದಾರೆ. ಅಪ್ಪು ಅಗಲಿದ ನಂತರ ಬೇರೆ ಊರುಗಳಿಂದ ಅಭಿಮಾನಿಗಳು ಆಗಮಿಸಿದ್ದರು. ಇದರಲ್ಲಿ ಕೆಲವರಿಗೆ ಅಪ್ಪು ಅಂತಿಮ ದರ್ಶನ ಸಾಧ್ಯವಾಗಿರಲಿಲ್ಲ. ಕೊನೆಗೆ ಅಪ್ಪು ಸಮಾಧಿ ದರ್ಶನ ಮಾಡಿಯೇ ಊರಿಗೆ ವಾಪಸ್ ಹೋಗುತ್ತೇವೆ ಎಂದು ಬೆಂಗಳೂರಿನಲ್ಲೇ ಇಷ್ಟು ದಿನ ವಾಸ್ತವ್ಯ ಹೂಡಿದ್ದರು. ಇದೀಗ ಬೆಳಗ್ಗೆಯಿಂದಲೇ ಅಪ್ಪು ಸಮಾಧಿ ದರ್ಶನ ಪಡೆಯಲು ಕ್ಯೂನಲ್ಲಿ ನಿಂತಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ಆಗಮಿಸುತ್ತಿದ್ದಾರೆ.
‘ಇವತ್ತಾದ್ರೂ ಅಣ್ಣನನ್ನು ನೋಡಲು ಬಿಡಿ’
ಆರನೇ ದಿನವಾದ್ರೂ ನಮಗೆ ಅಪ್ಪು ದರ್ಶನಕ್ಕೆ ಆವಕಾಶ ಕೊಡಿ ಎಂದು ಅಭಿಮಾನಿಯೊಬ್ಬ ಕಂಠೀರವ ಸ್ಟುಡಿಯೋ ಬಳಿ ಕಣ್ಣೀರು ಹಾಕಿದ್ದಾನೆ. ಅಂತಿಮ ದರ್ಶನ ಮಾಡೋಣ ಅಂತ ಬಂದೆ, ಆದರೆ ಆಗಲಿಲ್ಲ. ಇವತ್ತಾದರೂ ಅಪ್ಪು ಅಣ್ಣನನ್ನು ನೋಡಲು ಅವಕಾಶ ಮಾಡಿಕೊಡಿ ಎಂದು ಯಾದಗಿರಿಯಿಂದ ಬಂದ ಅಪ್ಪು ಅಭಿಮಾನಿ ಮನವಿ ಮಾಡಿಕೊಂಡಿದ್ದಾನೆ. ಬೆಳಗ್ಗೆ 6 ಗಂಟೆಯಿಂದಲೇ ಅಭಿಮಾನಿಗಳು ಆಗಮಿಸಿದ್ದು, ಸರತಿ ಸಾಲಿನಲ್ಲಿ ನಿಂತಿದ್ದಾರೆ.