ದೇಶದಲ್ಲಿ ನೂರು ಕೋಟಿ(Crores)ಗೂ ಹೆಚ್ಚು ಡೋಸ್ ಕೊರೋನಾ ವ್ಯಾಕ್ಸಿನ್(Corona Vaccine) ನೀಡಲಾಗಿದೆ. ಮೊದಲು ಲಸಿಕೆ ಬಂದಾಗ ಜನ ಬೆಚ್ಚಿ ಬೀಳುತ್ತಿದ್ದರು. ಈಗಲೂ ವ್ಯಾಕ್ಸಿನ್(Vaccine) ಹಾಕಿಸಿಕೊಳ್ಳಿ ಅಂದರೆ ಓಡಿ ಹೋಗುವ ಜನರು ಇದ್ದಾರೆ. ಆದರೂ ಭಾರತದಲ್ಲಿ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಆದರೂ ವ್ಯಾಕ್ಸಿನೇಷನ್ ವೇಳೆ ಅಲ್ಲಲ್ಲಿ ಕೆಲ ಎಡವಟ್ಟುಗಳು ನಡೆದಿವೆ. ವ್ಯಾಕ್ಸಿನ್ ಬದಲಾಗಿ ಖಾಲಿ ಸೂಜಿಯನ್ನು ಚುಚ್ಚಿದ ಪ್ರಕರಣಗಳು ನಡೆದಿವೆ. ಕೆಲವೊಂದು ಭಾರಿ ವೈದ್ಯರು(Doctor) ಹಾಗೂ ನರ್ಸ್(Nurse)ಗಳು ಒತ್ತಡದಿಂದ ಹೀಗೆ ಮಾಡುತ್ತಾರೆ.

ಆದರೆ ಇಲ್ಲೊಬ್ಬ ವ್ಯಕ್ತಿ ರೇಬಿಸ್ ವ್ಯಾಕ್ಸಿನ್(Anti-Rabies Shot) ಪಡೆಯಲು ಬಂದಿದ್ದ. ಆದರೆ ಈತನಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ. ಜಾರ್ಖಂಡ್(Jharkhand)ನಲ್ಲಿ ಆರೋಗ್ಯ ಕಾರ್ಯಕರ್ತರ ದೊಡ್ಡ ನಿರ್ಲಕ್ಷ್ಯವೊಂದು ಬೆಳಕಿಗೆ ಬಂದಿದೆ. ನಾಯಿ(Dog) ಕಚ್ಚಿದ ಕಾರಣ ರೇಬಿಸ್ ಲಸಿಕೆ ಪಡೆಯಲು ಬಂದಿದ್ದ ವ್ಯಕ್ತಿಗೆ ಕೊರೋನಾ ಲಸಿಕೆ ಹಾಕಲಾಗಿದೆ. ಜಾರ್ಖಂಡ್ ನ ಪಲಾಮು ಜಿಲ್ಲೆಯ ಆರೋಗ್ಯ ಕೇಂದ್ರದಲ್ಲಿಈ ಘಟನೆ ನಡೆದಿದೆ.
ನಾಯಿ ಕಚ್ಚಿದ್ದಕ್ಕೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ
ರಾಜು ಸಿಂಗ್ ಎಂಬ ವ್ಯಕ್ತಿಗೆ ನಾಯಿ ಕಚ್ಚಿತ್ತು. ಆಂಟಿ ರೇಬಿಸ್ ಲಸಿಕೆಗಾಗಿ ಪಲಾಮು ಜಿಲ್ಲೆಯ ಪಟಾನ್ ಬ್ಲಾಕ್ ಹೆಡ್ಕ್ವಾರ್ಟರ್ಸ್ ಹೆಲ್ತ್ ಸೆಂಟರ್‌ಗೆ ಬಂದಿದ್ದ. ಅಲ್ಲಿ ಆರೋಗ್ಯ ಕಾರ್ಯಕರ್ತರು, ರೇಬಿಸ್ ಲಸಿಕೆ ಬದಲು ಕೊರೊನಾ ಲಸಿಕೆ ಹಾಕಿದ್ದಾರೆ. ರಾಜು ಈಗಾಗಲೇ ಕೊರೊನಾದ ಎರಡೂ ಲಸಿಕೆ ಪಡೆದಿದ್ದ ಎನ್ನಲಾಗಿದೆ. ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಹಾಗೂ ಸಹ ಸಿವಿಲ್ ಸರ್ಜನ್ ಅನಿಲ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆರೋಗ್ಯ ಸಿಬ್ಬಂದಿಯ ನಿರ್ಲಕ್ಷ್ಯ ಇದಕ್ಕೆ ಕಾರಣವಾಗಿದೆ ಎಂದಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
2 ಡೋಸ್ ಕೋವಿಡ್ ಲಸಿಕೆ ಪಡೆದಿದ್ದ ವ್ಯಕ್ತಿ
ಹೌದು ರಾಜು ಸಿಂಗ್ ಈಗಾಗಲೇ ಎರಡೂ ಡೋಸ್ ಕೋವಿಡ್ ಲಸಿಕೆಗಳನ್ನ ಪಡೆದಿದ್ದ. ಮತ್ತೊಮ್ಮೆ ಆತನಿಗೆ ಕೋವಿಡ್ ಲಸಿಕೆ ಡೋಸ್ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಘಟನೆ ಬಳಿಕ ಆತನ ಮೇಲೆ ವಿಶೇಷ ನಿಗಾ ಇರಿಸಲಾಗಿದೆ. ಇಲ್ಲಿಯವರೆಗೆ ದೇಹದಲ್ಲಿ ಯಾವುದೇ ಮಹತ್ವದ ಬದಲಾವಣೆ ಕಂಡುಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ರಾಜು ಸಿಂಗ್ ಮಾತ್ರ ವೈದ್ಯರ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ನಿಮ್ಮ ನಿರ್ಲಕ್ಷಕ್ಕೆ ನಮ್ಮವರನ್ನು ಬಲಿ ತೆಗೆದುಕೊಳ್ಳುತ್ತೀರಾ. ಲಸಿಕೆ ಕೊಡುವಾಗ, ಯಾವ ಲಸಿಕೆ ಎಂದು ಕೇಳದೇ ಚುಚ್ಚಿ ಕಳುಹಿಸಿದ್ದಾರೆ. ನಾನು ಆಸ್ಪತ್ರೆಗೆ ಬಂದ ಕೂಡಲೇ ರೇಬಿಸ್ ಲಸಿಕೆ ಬೇಕು ಎಂದು ಹೇಳಿದ್ದೇ, ಇವರ ನಿರ್ಲಕ್ಷ್ಯದಿಂದ ನನಗೆ ಹೀಗೆ ಆಗಿದೆ. ನನಗೆ ಏನಾದರೂ ಹೆಚ್ಚು, ಕಡಿಮೆ ಆದರೆ ನೀವೇ ಜವಾಬ್ದಾರಿ ಎಂದು ವೈದ್ಯರ ಮೇಲೆ ಕಿಡಿಕಾರಿದ್ದಾರೆ.