ಸಿನಿಮಾಸುದ್ದಿ

ಸಿನಿರಸಿಕರಿಗೆ ದೀಪಾವಳಿ ಧಮಾಕ, ಈ ತಿಂಗಳು ರಿಲೀಸ್ ಆಗಲಿರೋ ಚಿತ್ರಗಳ ಕಂಪ್ಲೀಟ್​ ಮಾಹಿತಿ ಇಲ್ಲಿದೆ..!

ಕೊರೋನಾ(Corona) ಹೊಡೆತಕ್ಕೆ ಸಿಲುಕಿ ನಲುಗಿಹೋಗಿದ್ದ ಚಿತ್ರರಂಗ, ಈಗ ಚೇತರಿಸಿಕೊಳ್ಳುತ್ತಿದೆ. ಕಳೆದ ವರ್ಷ ಹಲವಾರು ಚಿತ್ರಗಳ ನಿರ್ಮಾಣವನ್ನು ನಿಲ್ಲಿಸಲಾಗಿತ್ತು. ಅನೇಕ ಸಿನಿಮಾ(Movies)ಗಳ ಬಿಡುಗಡೆ ದಿನಾಂಕವನ್ನೂ ಮುಂದೂಡಲಾಗಿತ್ತು. ಇದೀಗ ದೀಪಾವಳಿ(Diwali) ಹಬ್ಬದ ಹಿನ್ನಲೆ ಹಲವಾರು ಚಿತ್ರಗಳು ಬಿಡುಗಡೆಗೆ ಸಿದ್ದವಾಗಿ ನಿಂತಿವೆ. ಕೆಲವು ಒಟಿಟಿ(Ott)ಯಲ್ಲಿ ಬಿಡುಗಡೆ ಆದರೆ , ಇನ್ನು ಕೆಲವು ಚಿತ್ರಮಂದಿರಗಳ(Theater)ಲ್ಲಿ ಬಿಡುಗಡೆ ಆಗಲಿವೆ. 2021ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಅಂದರೆ ನವೆಂಬರ್(November) ಮೊದಲೆರಡು ವಾರದಲ್ಲಿ ಬಿಡುಗಡೆ ಆಗಲಿರುವ  ಕನ್ನಡ (Kannada) ತೆಲುಗು(Telugu), ತಮಿಳು(Tamil) , ಮಲಯಾಳಂ (Malayalam) ಸಿನಿಮಾಗಳ ಕಂಪ್ಲೀಟ್​  ಮಾಹಿತಿ ಇಲ್ಲಿದೆ.

ಜೈ ಭೀಮ್: ನವೆಂಬರ್​ 2 -ಅಮೆಜಾನ್​ ಪ್ರೈಮ್​ ( ತಮಿಳು)

ಅಮೆಜಾನ್ ಪ್ರೈಮ್‍ನಲ್ಲಿ ಸೂರ್ಯ ನಾಯಕನಾಗಿ ನಟಿಸಿರುವ ಜೈ ಭೀಮ್ ಸಿನಿಮಾ ನವೆಂಬರ್ 2ರಂದು ಬಿಡುಗಡೆಯಾಗಲಿದೆ. ಟಿ ಜೆ ಜ್ಞಾನವೇಲ್ ನಿರ್ದೇಶನದ ಈ ತಮಿಳು ಚಿತ್ರದಲ್ಲಿ ರಜೀಶಾ ವಿಜಯನ್ , ಪ್ರಕಾಶ್ ರಾಜ್ , ರಾವ್ ರಮೇಶ್ ಮತ್ತು ಲಿಜೊಮೋಲ್ ಜೋಸ್ ನಟಿಸಿದ್ದಾರೆ. ಈ ಚಿತ್ರದ ಮೂಲಕ ಸೂರ್ಯ ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಾತಿ ಆಧಾರಿತ ತಾರತಮ್ಯ ಮತ್ತು ಪೋಲೀಸ್ ದೌರ್ಜನ್ಯದ ಕುರಿತ ಕಥಾ ವಸ್ತುವುಳ್ಳ ಸಿನಿಮಾ.

ಅಣ್ಣಾತೆ: ನವೆಂಬರ್​ 4 – ಚಿತ್ರಮಂದಿರ (ತಮಿಳು)
ಈ ವರ್ಷದ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾ ಅಂದರೆ ಅದು ಸೂಪರ್​ ಸ್ಟಾರ್​ ರಜನಿಕಾಂತ್​ ಅಭಿನಯದ ಅಣ್ಣಾತೆ ಸಿನಿಮಾ. ಈ ತಮಿಳು ಚಿತ್ರ ನವೆಂಬರ್ 4 ರಂದು ತೆರೆ ಕಾಣಲಿದೆ. ಶಿವ ಅವರ ನಿರ್ದೇಶಿಸಿರುವ ಈ ಸಿನಿಮಾದಲ್ಲಿ, ನಯನ ತಾರಾ, ಮೀನಾ, ಖುಷ್ಬೂ, ಕೀರ್ತಿ ಸುರೇಶ್, ಜಾಕಿ ಶ್ರಾಫ್, ಜಗಪತಿ ಬಾಬು, ಪ್ರಕಾಶ್ ರಾಜ್ ಮುಂತಾದವರು ನಟಿಸಿದ್ದಾರೆ.

ಎನಿಮಿ: ನೆವಂಬರ್​ 4 – ಚಿತ್ರಮಂದಿರ ( ತಮಿಳು)

ಈ ಎನಿಮಿ ತಮಿಳು ಚಿತ್ರವು ಕೂಡ ನವೆಂಬರ್ 4ರಂದು ಬಿಡುಗಡೆ ಆಗಲಿದೆ. ವಿಶಾಲ್ ಮತ್ತು ಆರ್ಯ ಮುಖ್ಯ ಪಾತ್ರದಲ್ಲಿರುವ ಈ ಚಿತ್ರ ಸಾಹಸ ಪ್ರಧಾನ ಕಥೆಯುಳ್ಳದ್ದಾಗಿದೆ. ಆನಂದ್ ಶಂಕರ್ ನಿರ್ದೇಶನದ ಮಮತಾ ಮೋಹನ್ ದಾಸ್, ಪ್ರಕಾಶ್ ರಾಜ್ ಮತ್ತು ಮೃಣಾಲಿನಿ ರವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಎಂಜಿಆರ್ ಮಗನ್ : ನವೆಂಬರ್​ 4 – ಡಿಸ್ನಿ ಪ್ಲಸ್​​ ಹಾಟ್​ಸ್ಟಾರ್​ (ತಮಿಳು)

ಶಶಿ ಕುಮಾರ್, ಸಮುದ್ರಕಣಿ, ಸತ್ಯರಾಜ್, ಮೃಣಾಲಿನಿ ರವಿ, ಸಿಂಗಮ್ ಪುಲಿ ಮತ್ತು ಶರಣ್ಯ ಪೊಣ್‍ವಣ್ಣಮ್ ಮುಂತಾದವರು ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ, ಹಳ್ಳಿಯ ಹಿನ್ನೆಲೆಯ ಕಥೆಯುಳ್ಳ ಈ ತಮಿಳು ಸಿನಿಮಾ ನವೆಂಬರ್ 4 ರಂದು ಡಿಸ್ನಿ ಪ್ಲಸ್ ಹಾಟ್‍ಸ್ಟಾರ್‌ನಲ್ಲಿ ಬಿಡುಗಡೆ ಆಗಲಿದೆ. ಪೊನ್ರಾಮ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ವಾ: ನವೆಂಬರ್​ 4- ಚಿತ್ರಮಂದಿರ (ತಮಿಳು)

ರತಿನ್ ಶಿವಾ ನಿರ್ದೇಶನದ ಈ ಚಿತ್ರದಲ್ಲಿ ಅರುಣ್ ವಿಜಯ್ ಮತ್ತು ಕಾರ್ತಿಕಾ ನಾಯರ್ ಮುಖ್ಯ ಪಾತ್ರದಲ್ಲಿ ಇದ್ದಾರೆ. ಚಿತ್ರಕ್ಕೆ ತಮನ್ ಸಂಗೀತವಿದೆ.

ಕುರುಪ್: ನವೆಂಬರ್​ 12 – ಚಿತ್ರಮಂದಿರ (ಮಲಯಾಳಂ)

ದುಲ್ಖರ್ ಸಲ್ಮಾನ್ ಮತ್ತು ಸೊಬಿತಾ ಧುಲಿಪಾಲಾ ಪ್ರಧಾನ ಪಾತ್ರದಲ್ಲಿರುವ ಈ ಸಿನಿಮಾ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ ಸುಕುಮಾರ ಕುರುಪ್ ನಿಜ ಜೀವನವನ್ನು ಆಧರಿಸಿದ ಕಥೆಯನ್ನು ಹೊಂದಿದೆ. ಈ ಚಿತ್ರ ಮಲೆಯಾಳಂ, ತಮಿಳು, ತೆಲುಗು, ಹಿಂದಿ ಮತ್ತು ಕನ್ನಡದಲ್ಲಿ ಬಿಡುಗಡೆ ಆಗಲಿದೆ. ಕುರುಪ್ ನವೆಂಬರ್ 12ರಂದು ತೆರೆ ಕಾಣಲಿದೆ.

ಕನಕಮ್ ಕಾಮಿನಿ ಕಲಹಂ: ನವೆಂಬರ್​ 12 – ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​​ ( ಮಲಯಾಳಂ)

ನಿವಿನ್ ಪೌಲಿ ಮತ್ತು ಗ್ರೇಸಿ ಆ್ಯಂಟೋನಿ ನಾಯಕ, ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಡಿಸ್ನಿ ಪ್ಲಸ್ ಹಾಟ್‍ಸ್ಟಾರ್‌ನಲ್ಲಿ ನವೆಂಬರ್ 12 ರಂದು ಬಿಡುಗಡೆ ಆಗಲಿದೆ. ಈ ಚಿತ್ರವನ್ನು ರತೀಶ್ ಬಾಲಕೃಷ್ಣ ಪೊಡುವಲ್ ನಿರ್ದೇಶಿಸಿದ್ದಾರೆ.

ಪ್ರೇಮಂ ಪೂಜ್ಯಂ: ನವೆಂಬರ್ 14 – ಚಿತ್ರಮಂದಿರ (ಕನ್ನಡ) 

ಲವ್ಲಿ ಸ್ಟಾರ್​ ಪ್ರೇಂ ಕುಮಾರ್ , ಬೃಂದಾ ಆಚಾರ್ಯ ಮತ್ತು ಐಂದ್ರಿತಾ ರೇ ಮುಖ್ಯ ಪಾತ್ರದಲ್ಲಿರುವ ಈ ಚಿತ್ರ ನವೆಂಬರ್ 12 ರಂದು ಬಿಡುಗಡೆ ಆಗಲಿದೆ. ಡಾ. ರಾಘವೇಂದ್ರ ಬಿ ಎಸ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ರಾಘವೇಂದ್ರ ಅವರ ಸಂಗೀತವಿದೆ.

ಮುಗಿಲ್ ಪೇಟೆ: ನವೆಂಬರ್​ 19 – ಚಿತ್ರಮಂದಿರ (ಕನ್ನಡ)

ಮನುರಂಜನ್ ರವಿಚಂದ್ರನ್, ಕಯಾದು ಲೋಹರ್, ತಾರಾ, ಅವಿನಾಶ್, ಸಾಧು ಕೋಕಿಲ, ರಂಗಾಯಣ ರಘು, ಅಪ್ಪಣ್ಣ ಮತ್ತು ಪ್ರಶಾಂತ್ ಸಿದ್ದಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ನವೆಂಬರ್ 19 ರಂದು ಬಿಡುಗಡೆ ಆಗಲಿದೆ. ಈ ಚಿತ್ರವನ್ನು ಭರತ್ ಎಸ್ ನಾವುಂದ ನಿರ್ದೇಶಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button