ಪವರ್ ಸ್ಟಾರ್(Power Star) ನಮ್ಮನೆಲ್ಲ ಬಿಟ್ಟು ದೂರ ಹೋಗಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಯಾರಿಂದಲೂ ಆಗುತ್ತಿಲ್ಲ. ಎಲ್ಲೇ ಹೋದರೂ, ಏನೇ ಮಾಡಿದರೂ ಅಪ್ಪು ನೆನಪು(Appu Memories) ನಮ್ಮನ್ನು ಹಿಂಬಾಲಿಸುತ್ತಿವೆ. ಅಪ್ಪು ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಮನೆ ಮನೆಗಳಲ್ಲೂ ಅಗಲಿದ ಅಪ್ಪು ನೆನದು ಕಂಬನಿ ಮಿಡಿಯುತ್ತಿದ್ದಾರೆ. ಪುನೀತ್ ರಾಜ್ಕುಮಾರ್(Puneeth Rajkuma) ಅವರ ಅಭಿಮಾನಿಬಳಗ ತುಂಬಾ ದೊಡ್ಡದು.

25 ಲಕ್ಷಕ್ಕೂ ಹೆಚ್ಚು ಮಂದಿ ಪುನೀತ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅದರೆ ಈ ಮಧ್ಯೆ ಕಿಡಿಗೇಡಿಯೊಬ್ಬ ಅಪ್ಪು ಬಗ್ಗೆ ಅವಹೇಳನಕಾರಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್(Post) ಮಾಡಿದ್ದ. ಆತನ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗಿತ್ತು. ಆತನನ್ನು ಕೂಡಲೇ ಬಂಧಿಸಿ ಅಥವಾ ನಮ್ಮ ಕೈಗೆ ಸಿಕ್ಕರೆ ನಿಜ ನಾವು ಸುಮ್ಮನೆ ಬಿಡುವುದಿಲ್ಲ ಅಂತ ಅಪ್ಪು ಅಭಿಮಾನಿಗಳು(Fans) ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಬೆಂಗಳೂರು ಸೈಬರ್ ಪೊಲೀಸರು(Bengaluru Cyber Police Team) ಕ್ರಮ ಕೈಗೊಂಡಿದ್ದಾರೆ. ಆತನನ್ನು ಬಂಧಿಸಿರುವ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಅಶ್ಲೀಲ ಪದ ಬಳಿಸ ಪೋಸ್ಟ್ ಮಾಡಿದ್ದವ ಅಂದರ್
ಅಪ್ಪು ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಇರಲಿ ಎಂಬುದು ಈ ಆದೇಶದ ಹಿಂದಿನ ಉದ್ದೇಶ ಆಗಿತ್ತು. ಕುಡಿದ ಅಮಲಿನಲ್ಲಿ ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗಬಹುದು. ಅದನ್ನು ತಪ್ಪಿಸಲು ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿತ್ತು. ಡಾ.ರಾಜ್ಕುಮಾರ್ ನಿಧನದ ಬಳಿಕ ಆದ ಕಹಿ ಘಟನೆಗಳು ಮರುಕಳಿಸಬಾರದೆಂದು ಮಧ್ಯಮಾರಾಟ ನಿಷೇಧ ಮಾಡಲಾಗಿತ್ತು. ಆದರೆ ಇದಕ್ಕೆ ರಿತ್ವಿಕ್ಸ್ ಎಂಬಾತ ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ. ತುಂಬಾ ಅಶ್ಲೀಲ ಪದಗಳಿಂದ ನಿಂದಿಸಿದ್ದ, ಇದು ಅಭಿಮಾನಿಗಳನ್ನ ಕೆಣಕಿತ್ತು.