ಇನ್ನೇನು ದೀಪಾವಳಿ ಹಬ್ಬ ಬಂದೇ ಬಿಡ್ತು. ದೀಪಾವಳಿ ಹಬ್ಬ (Deepavali 2021) ಸಹ ಹಿಂದೂಗಳ ಪಾಳಿಗೆ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಈ ಹಿನ್ನೆಲೆ ಜನರು ಹಬ್ಬಕ್ಕೆ ತಯಾರಿ ಮಾಡಿಕೊಳ್ಳಲು, ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸುವ ಭರಾಟೆಯಲ್ಲಿರುತ್ತಾರೆ. ದೀಪಾವಳಿಗೆ ದೀಪ, ಹೂವು, ಹಣ್ಣು, ಹೊಸ ಬಟ್ಟೆ ಮುಂತಾದ ವಸ್ತುಗಳನ್ನು ಸಾಮಾನ್ಯವಾಗಿ ಖರೀದಿಸುತ್ತಾರೆ.

ಇನ್ನು, ದೀಪಾವಳಿ ಅಂದ್ರೆ ಬಹುತೇಕ ಮನೆಗಳಲ್ಲಿ ಪಟಾಕಿಗೂ ಪ್ರಮುಖವಾದ ಸ್ಥಾನಮಾನ ಇದ್ದೇ ಇರುತ್ತದೆ. ಬೆಳಗ್ಗೆಯಿಂದ ರಾತ್ರಿಯವರೆಗೂ ಮಕ್ಕಳು, ಹಿರಿಯರೆನ್ನದೆ ಪಟಾಕಿ ಸಿಡಿಸುತ್ತಿರುತ್ತಾರೆ. ಅಂದ ಹಾಗೆ, ನೀವೂ ಈ ಬಾರಿ ಪಟಾಕಿ ಖರೀದಿಸೋಕೆ ಹೊರಟಿದ್ದೀರಾ..? ಹಾಗಾದ್ರೆ, ಸ್ವಲ್ಪ ತಡೀರಿ.. ಈ ವರ್ಷ ದೀಪಾವಳಿಗೆ ಪಟಾಕಿ ಖರೀದಿಸುವ ಮುನ್ನ ಸ್ವಲ್ಪ ಇಲ್ನೋಡಿ.. ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಮತ್ತು ಸಿಡಿಸಲು ರಾಜ್ಯ (ಕರ್ನಾಟಕ) ಸರ್ಕಾರ ಅನುಮತಿ ನೀಡಿದೆ.
ಹೌದು, ಶನಿವಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಅಂಗಡಿಗಳು ಇಂದಿನಿಂದ (ನವೆಂಬರ್ 1) ಮತ್ತು 10ರ ನಡುವೆ ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಅಧಿಕಾರಿಗಳಿಂದ ಅಗತ್ಯ ಅನುಮತಿ ಪಡೆಯುವುದು ಸಹ ಕಡ್ಡಾಯವಾಗಿದೆ.