Indian Air Force Recruitment 2021: ಭಾರತೀಯ ವಾಯು ಪಡೆ(Indian Air Force) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 83 ಮಲ್ಟಿ ಟಾಸ್ಕಿಂಗ್ ಸ್ಟಾಫ್(Multi Tasking Staff), ಸಿವಿಲಿಯನ್ ಮೆಕ್ಯಾನಿಕಲ್ ಟ್ರಾನ್ಸ್ಪೋರ್ಟ್ ಡ್ರೈವರ್(Civilian Mechanical Transport Driver), ಲೋಯರ್ ಡಿವಿಷನ್ ಕ್ಲರ್ಕ್(Lower Division Clerk), ಕಾರ್ಪೆಂಟರ್(Carpenter), ಫೈರ್ಮ್ಯಾನ್(Fireman), ಸೂಪರಿಂಟೆಂಡೆಂಟ್ (Superintendent) ಹಾಗೂ ಕುಕ್(Cook) ಪೋಸ್ಟ್ಗಳು ಖಾಲಿ ಇವೆ. 10ನೇ ತರಗತಿ, 12ನೇ ತರಗತಿ, ಡಿಪ್ಲೋಮಾ ಹಾಗೂ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಆಫ್ಲೈನ್(ಪೋಸ್ಟಲ್) ಮೂಲಕ ನವೆಂಬರ್ 29ರವರೆಗೆ ಅರ್ಜಿ ಹಾಕಬಹುದು. ಅಕ್ಟೋಬರ್ 29ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಭಾರತೀಯ ವಾಯುಪಡೆ |
ಜಾಹೀರಾತು ಸಂಖ್ಯೆ | 05/2021/DR |
ಹುದ್ದೆಯ ಹೆಸರು | ಮಲ್ಟಿ ಟಾಸ್ಕಿಂಗ್ ಸ್ಟಾಫ್, ಸಿವಿಲಿಯನ್ ಮೆಕ್ಯಾನಿಕಲ್ ಟ್ರಾನ್ಸ್ಪೋರ್ಟ್ ಡ್ರೈವರ್, ಲೋಯರ್ ಡಿವಿಶನ್ ಕ್ಲರ್ಕ್, ಕಾರ್ಪೆಂಟರ್, ಫೈರ್ಮ್ಯಾನ್, ಸೂಪರಿಂಟೆಂಡೆಂಟ್, ಕುಕ್. |
ಒಟ್ಟು ಹುದ್ದೆಗಳು | 83 |
ವಿದ್ಯಾರ್ಹತೆ | 10ನೇ ತರಗತಿ, 12ನೇ ತರಗತಿ, ಪದವಿ, ಡಿಪ್ಲೋಮಾ, |
ಉದ್ಯೋಗದ ಸ್ಥಳ | ಪ್ಯಾನ್ ಇಂಡಿಯಾ |
ಸಂಬಳ | ಮಾಸಿಕ ₹18,000-25,500 |
ಅರ್ಜಿ ಸಲ್ಲಿಸುವ ಬಗೆ | ಆಫ್ಲೈನ್(ಪೋಸ್ಟಲ್) |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ | 29/10/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 29/11/2021 |