ಅರುಣಾಚಲ ಪ್ರದೇಶದ(Arunachala Pradesh) ಮುಖ್ಯಮಂತ್ರಿ ಪ್ರೇಮಾ ಖಂಡು(CM Prema Khudu) ಅವರು ಇಂಡೋ-ಟಿಬೆಟ್ ಗಡಿ ಸಮೀಪದ ತವಾಂಗ್ ಜಿಲ್ಲೆಯ ಚುನಾದಲ್ಲಿ ಭಾರತೀಯ ಸೇನೆಯ ಯೋಧರೊಂದಿಗೆ ಸಂವಾದ ನಡೆಸಿದರು. ಮುಖ್ಯಮಂತ್ರಿಯ ಭೇಟಿಯ ಸಂದರ್ಭದಲ್ಲಿ ಅರುಣಾಚಲ ಸ್ಕೌಟ್ಸ್ನ ಯೋಧರು ತಮ್ಮ ರೆಜಿಮೆಂಟಲ್ (ಸೇನಾ ಘಟಕದ) ಹಾಡಿನ ಪ್ರದರ್ಶನವನ್ನು ನಡೆಸಿದರು.

“ಉತ್ತರ ಪುರಬ್ ಸೇ ಆಯೆ ಹಮ್ ನೌಜವಾನ್, ದೇಶ್ ಕಿ ರಕ್ಷಾ ಕರ್ನೇ ಆಯೇ ಹೈ. (ಉತ್ತರ ಪೂರ್ವದಿಂದ ಬಂದ ನವಯುಕರು ನಾವು, ದೇಶದ ರಕ್ಷಣೆಯನ್ನು ಮಾಡಲು ಬಂದಿದ್ದೇವೆ) ರೆಜಿಮೆಂಟಲ್ ಗೀತೆಯನ್ನು ಅರುಣಾಚಲ ಸ್ಕೌಟ್ಸ್ನ ಯೋಧರು #ArunachalScouts ತವಾಂಗ್ ಜಿಲ್ಲೆಯ ಚುನಾಗೆ ನನ್ನ ಭೇಟಿಯ ಸಮಯದಲ್ಲಿ ಪ್ರದರ್ಶಿಸಿದರು. ಇಂಡೋ-ಟಿಬೆಟ್ ಗಡಿ ರಕ್ಷಣೆಗಾಗಿ ಸೇನಾ ದಳವನ್ನು 2010 ರಲ್ಲಿ ಅರುಣಾಚಲದ ಮಾಜಿ ಸಿಎಂ ದಿವಂಗತ ದೋರ್ಜಿ ಖಂಡು ಜಿ ನಿದರ್ಶನದಲ್ಲಿ ಸ್ಥಾಪಿಸಲಾಯಿತು ಎಂದು ಉಲ್ಲೇಖಿಸಿ ಪ್ರೇಮಾ ಖಂಡು ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿದ್ದಾರೆ.
ವೈರಲ್ ಆದ ವಿಡಿಯೋ
ಈ ವಿಡಿಯೋ ಟ್ವಿಟ್ಟರ್ ಪ್ಲಾಟ್ಫಾರ್ಮ್ನಲ್ಲಿ 30,000 ಕ್ಕಿಂತ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ತಮ್ಮ ಸೇನಾ ಹಾಡಿಗೆ ಸೈನಿಕರು ಪ್ರದರ್ಶನ ನೀಡಿರುವುದನ್ನು ನೋಡಿ ನೆಟ್ಟಿಗರು ಸಂತೋಷ ವ್ಯಕ್ತಪಡಿಸಿದ್ದು ಸೈನಿಕರ ಸ್ಫೂರ್ತಿಯನ್ನು ಕೊಂಡಾಡಿದ್ದಾರೆ. ನಮ್ಮ ಇತಿಹಾಸ, ಪರಂಪರೆ, ಹಾಗೂ ಧೈರ್ಯದಲ್ಲಿ ಶ್ರೀಮಂತಿಕೆಯನ್ನು ಹೊಂದಿದ್ದೇವೆ ಎಂದು ಟ್ವಿಟ್ಟರ್ ಬಳಕೆದಾರರು ಬರೆದುಕೊಂಡಿದ್ದು ನಿಜಕ್ಕೂ ಇದು ಅತ್ಯಂತ ಇಷ್ಟವಾಗುವಂತಹ ಪ್ರದರ್ಶನ ಎಂದು ಬರೆದುಕೊಂಡಿದ್ದಾರೆ.
ನಮ್ಮ ನಾಯಕರು ಎಂದು ಇನ್ನೊಬ್ಬ ಬಳಕೆದಾರರು ಬರೆದುಕೊಂಡಿದ್ದರೆ ದೇಶದ ಸೇವೆ ಹಾಗೂ ಸುರಕ್ಷೆ ಅರುಣಾಚಲ ಪ್ರದೇಶದ ಕೆಚ್ಚೆದೆಯ ಹಾಗೂ ಭಾವೋದ್ರಿಕ್ತ ಹುಡುಗರು ಎಂದು ಕೊಂಡಾಡಿದ್ದಾರೆ