ದೀಪಾವಳಿ ಹಬ್ಬವನ್ನು (Diwali 2021) ಸಡಗರದಿಂದ ಸಂಭ್ರಮಿಸಲು ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹೀಗಿರುವಾಗ Poco ತನ್ನ ಹಲವಾರು ಸ್ಮಾರ್ಟ್ಫೋನ್ಗಳ ಮೇಲೆ ರಿಯಾಯಿತಿಗಳನ್ನು ಘೋಷಿಸಿದೆ. ಫ್ಲಿಪ್ಕಾರ್ಟ್ನ (Flipkart) ದೀಪಾವಳಿ ಮಾರಾಟದಲ್ಲಿ Poco X3 Pro, Poco M2 Pro, Poco C3 ಮತ್ತು ಇತರ ಮಾದರಿಯನ್ನು ರಿಯಾಯಿತಿ ದರದಲ್ಲಿ ನೀಡುತ್ತದೆ.

ಅಕ್ಟೋಬರ್ 28 ರಿಂದ ನವೆಂಬರ್ 3 ರವರೆಗೆ ಫ್ಲಿಪ್ಕಾರ್ಟ್ ಬಿಗ್ ದೀಪಾವಳಿ ಮಾರಾಟ (Flipkart Big Diwali Sale) ನಡೆಸಲಿದೆ. ಇದರಲ್ಲಿ ಪೊಕೊ ಸ್ಮಾರ್ಟ್ಫೋನ್ಗಳನ್ನು ಕಡಿಮೆ ಬೆಲೆಗೆ ಗ್ರಾಹಕರಿಗೆ ದೊರಕುವಂತೆ ಸೇಲ್ ಮಾಡುತ್ತಿದೆ. Poco ಕೆಲವು ಮಾದರಿಗಳ ಮೇಲೆ ಇದೇ “ಕೊನೆಯ ಬಾರಿಗೆ” ಎಂದು ಹೇಳುವ ಮೂಲಕ ರಿಯಾಯಿತಿ ನೀಡುತ್ತಿದೆ.
ಮಾರಾಟದ ಸಮಯದಲ್ಲಿ, Poco X3 Pro ನ ಎರಡೂ ಮಾದರಿಗಳು 7,000 ರೂಪಾಯಿಗಳ ಬೃಹತ್ ಮುಂಗಡ ರಿಯಾಯಿತಿಯೊಂದಿಗೆ ಖರೀದಿಗೆ ಲಭ್ಯವಿರುತ್ತವೆ. ಇದರರ್ಥ 6GB RAM ಹೊಂದಿರುವ Poco X3 Pro ಅದರ ಮೂಲ ಬೆಲೆ 23,999 ರಿಂದ 16,999 ರೂ.ಗೆ ಮಾರಾಟವಾಗುತ್ತದೆ. ಅದೇ ರೀತಿ, ಫೋನ್ನ 8GB RAM ಆಯ್ಕೆ ಮೂಲ ಬೆಲೆ 25,999 ರೂ. ಆಗಿದ್ದುಮ 18,999 ರೂಗೆ ಸಿಗುತ್ತದೆ.
ಮುಂಗಡ ರಿಯಾಯಿತಿಗಳ ಜೊತೆಗೆ, Flipkart ಫೋನ್ಗಳ ಮೇಲೆ ಬ್ಯಾಂಕ್ ರಿಯಾಯಿತಿಯನ್ನು ನೀಡುತ್ತಿದೆ. ಖರೀದಿಯ ಮೇಲೆ ಈ ಎಲ್ಲಾ ಕೊಡುಗೆಗಳನ್ನು ಪಡೆಯುವುದರಿಂದ, ಜನರು Poco X3 Pro ನ ಮೂಲ ರೂಪಾಂತರವನ್ನು 15,749 ರೂಗೆ ಖರೀದಿಸಲು ಸಾಧ್ಯವಾಗುತ್ತದೆ. 8GB RAM ಹೊಂದಿರುವ Poco X3 Pro ರೂ 17,749 ಕ್ಕೆ ಲಭ್ಯವಿರುತ್ತದೆ.