ರಾಜ್ಯಸುದ್ದಿ

ನೀರಿನಲ್ಲಿ ಈಜಾಡುತ್ತಿದ್ದ ವ್ಯಕ್ತಿಯ ಮೇಲೆ ಅಲಿಗೇಟರ್​ ದಾಳಿ: ಭಯಾನಕವಾಗಿದೆ ಈ ದೃಶ್ಯ..!

ನೀರಿನಲ್ಲಿ ಈಜುತ್ತಿರುವ ವ್ಯಕ್ತಿಯೊಬ್ಬನಿಗೆ ಅಲಿಗೇಟರ್ (Alligator)​ ದಾಳಿ ಮಾಡಿರುವ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣವಾದ ಫೇಸ್​ಬುಕ್​ನಲ್ಲಿ ವೈರಲ್​ ಆಗಿದೆ. ಮಾಹಿತಿಯಂತೆ, ಬ್ರೆಜಿಲ್‌ನ (Brazil) ಕ್ಯಾಂಪೋ ಗ್ರಾಂಡೆಯಲ್ಲಿರುವ ಲಾಗೋ ಡಾ ಅಮೋರ್‌ ಸರೋವರದಲ್ಲಿ ವ್ಯಕ್ತಿಯೊಬ್ಬ ಈಜುತ್ತಿದ್ದನು ಈ ವೇಳೆ ಅಲಿಗೇಟರ್​ ದಾಳಿ ಮಾಡಿದೆ. ಶನಿವಾರ ಈ ಘಟನೆ ಸಂಭವಿಸಿದೆ.

ಲಾಗೋ ಡಾ ಅಮೋರ್‌ ಪ್ರವಾಸಿತಾಣವಾಗಿದ್ದು, ಜನಪ್ರಿಯವಾಗಿದೆ. ಆದರೆ ಸರೋವರದಲ್ಲಿ ಅಲಿಗೇಟರ್‌ಗಳಿದ್ದು, ಈಜಾಡುವುದನ್ನು ನಿಷೇಧಿಸಲಾಗಿದೆ. ಆದರೆ ವ್ಯಕ್ತಿ ಎಚ್ಚರಿಕೆಯನ್ನು ನಿರ್ಲಕ್ಷಿಸಿ, ಸರೋವರದಲ್ಲಿ ಈಜಾಡಿದ್ದಾನೆ ಈ ವೇಳೆ ಅಲಿಗೇಟರ್​ ಆತನ ಮೈ ಮೇಲೆ ಬಂದು ಕಚ್ಚಿದೆ.

ವಿಲಿಯನ್ ಕೇಟಾನೊ ಎಂಬ ವ್ಯಕ್ತಿ ಅಲಿಗೇಟರ್​ ದಾಳಿಗೆ ಒಳಗಾದ ಈಜುಗಾರರನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದ್ದಾನೆ. ಸಂಜೆ 4.40 ರ ಸುಮಾರಿಗೆ ಅಪಾಯವಿದ್ದರು, ನೀರಿನಲ್ಲಿ ಈಜುತ್ತಿರುವ ವ್ಯಕ್ತಿಯನ್ನು ಗಮನಿಸಿದರು. ಸ್ವಲ್ಪ ಸಮಯದ ನಂತರ, ಅಲಿಗೇಟರ್ ಈಜಾಡುತ್ತಿರುವ ವ್ಯಕ್ತಿಯನ್ನು ಕಂಡು ವೇಗವಾಗಿ ಆತನ ಬಳಿ ಬಂದಿದೆ. ತಕ್ಷಣವೇ ಅವನ ಮೇಲೆ ದಾಳಿ ಮಾಡಿ ಅವನ ಕೈಯನ್ನು ಕಚ್ಚಿದೆ. ಈಜುತ್ತಿರುವ ವ್ಯಕ್ತಿ ಅಲಿಗೇಟರ್​ ದಾಳಿ ಮಾಡಲು ಬರುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಬೇಗನೆ ದಡಕ್ಕೆ ಹಿಂತಿರುಗಲು ಪ್ರಯತ್ನಿಸಿದನು. ಈ ವೇಳೆ ರಭಸದಿಂದ ಬಂದ ಅಲಿಗೇಟರ್​ ಆತನ ಕೈಗೆ ಕಚ್ಚಿ ನೀಡಿನಲ್ಲಿ ಎಳೆದಾಡಿದೆ.

ವೀಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿ ಕೇಟಾನೊ, “ಇದ್ದಕ್ಕಿದ್ದಂತೆ, ನನಗೆ ಆಶ್ಚರ್ಯವಾಗುವಂತೆ, ಅಲಿಗೇಟರ್ ಅವನನ್ನು ಬೆನ್ನಟ್ಟಲು ಪ್ರಾರಂಭಿಸುತ್ತದೆ. ಅವನು ತಪ್ಪಿಸಿಕೊಳ್ಳಲು ವೇಗವಾಗಿ ಈಜಲು ಪ್ರಯತ್ನಿಸಿದನು, ಆದರೆ ಅಲಿಗೇಟರ್ ಅವನ ಮೇಲೆ ದಾಳಿ ಮಾಡಿ ತೋಳಿಗೆ ಕಚ್ಚಿದೆ, ಕೈಯಿಂದ ರಕ್ತ ಬರುತ್ತಿದ್ದರು ಹೇಗಾದರು ದಡ ಸೇರಿ ಕೊನೆಗೆ ವ್ಯಕ್ತು ಜೀವ ಉಳಿಸಿಕೊಂಡಿದ್ದಾನೆ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button