ರಾಜ್ಯಸುದ್ದಿ

21ನೇ ವಯಸ್ಸಿಗೆ ಎರಡು ಮಕ್ಕಳ ಅಮ್ಮನಾದ ಕೆಜಿಎಫ್​ ಚಾಪ್ಟರ್ 2 ನಟಿ..!

90ರ ದಶಕದಲ್ಲಿ ಟಾಪ್​ ನಟಿಯಾಗಿದ್ದ ರವೀನಾ ಟಂಡನ್ (Happy Birthday Raveena Tandon) ಅವರ ಹುಟ್ಟುಹಬ್ಬವಿಂದು. ಅಕ್ಟೋಬರ್​  26ರಂದು ಅಂದರೆ ಇಂದು ಬರ್ತ್​ ಡೇ ಸೆಲೆಬ್ರೇಟ್​ ಮಾಡಿಕೊಳ್ಳುತ್ತಿರುವ ನಟಿ ರವೀನಾ ಟಂಡನ್​ ಅವರು ತಮ್ಮ ಸಿನಿ ಜೀವನದಲ್ಲಿ ಸಾಕಷ್ಟು ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಮೋಹ್ರಾ  (Mohra) ಸಿನಿಮಾದಲ್ಲಿ ಅವರಿಗೆ ಈ ಇಂಡಸ್ಟ್ರಿಯಲ್ಲಿ ಹೊಸ ಗುರುತು ಸಿಕ್ಕಿತ್ತು. ಜನರು ಈ ಸಿನಿಮಾದ ನಂತರ ಅವನ್ನು ಮಸ್ತ್​ ಮಸ್ತ್ ಹುಡುಗಿ (Mast Mast Girl) ಎಂದೇ ಕರೆಯಲಾರಂಭಿಸಿದರು. ಸಿನಿ ಜೀವನದ ಆರಂಭದಲ್ಲಿ ಗ್ಲಾಮರಸ್​ ಪಾತ್ರಗಳಲ್ಲಿ ನಟಿಸಿದ್ದ ಈ ನಟಿ ನಂತರದಲ್ಲಿ ಪಾತ್ರಗಳಿಗೆ ಪ್ರಾಮುಖ್ಯತೆ ಇರುವ ಸಿನಿಮಾಗಳಲ್ಲಿ ನಟಿಸಲಾರಂಭಿಸಿದರು. ಈ ಮೂಲಕ ಅವರು ತಮ್ಮ ಅಭಿನಯಸಾಮರ್ಥ್ಯವನ್ನೂ ಸಾಬೀತು ಪಡಿಸಿದರು.

ಹಿಂದಿ, ತೆಲುಗು ಹಾಗೂ ಕನ್ನಡದಲ್ಲಿ ನಟಿಸಿರುವ ಈ ನಟಿ ಒಂದು ಕಾಲದಲ್ಲಿ ಟಾಪ್​ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ರವೀನಾ ಟಂಡನ್​ ಅವರು ತಮ್ಮ ಸಿನಿ ಜೀವನದ ಆರಂಭವನ್ನು 1991ರಲ್ಲಿ ಪತ್ಯಾರ್​ ಕೆ ಫೂಲ್​ ಚಿತ್ರದ ಮೂಲಕ ಮಾಡಿದ್ದರು. ಈ ಸಿನಿಮಾದಲ್ಲಿ ರವೀನ್ ಅವರು ಸಲ್ಮಾನ್​ ಖಾನ್ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಮೊದಲ ಸಿನಿಮಾದ ಮೂಲಕವೇ ರವೀನಾ ಅಭಿಮಾನಿಗಳ ಹೃದಯದಲ್ಲಿ ಜಾಗ ಗಿಟ್ಟಿಸಿಕೊಂಡರು. ನಂತರ ಮೋಹ್ರಾ, ದಿಲ್ವಾಲೆ, ಅಂದಾಜ್​ ಅಪ್ನಾ ಅಪ್ನಾ ಹಾಗೂ ದುಲ್ಹೆ ರಾಜ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ತಮಗಿಂತ ಹಿರಿಯ ಕಲಾವಿದರ ಜೊತೆ ಸಹ ಕೆಲಸ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button