ಭಾರತದಲ್ಲಿ ಕರೋನಾ ವೈರಸ್(Coronavirus) ಹರಡಲು ಆರಂಭವಾಗಿ ಸರಿಯಾಗಿ ಒಂದು ವರ್ಷವಾಗಿದೆ ಮತ್ತು ಈಗ ಅನೇಕ ಜನರು ಸ್ವಚ್ಛತೆಯತ್ತ ಗಮನ ಹರಿಸುತ್ತಿದ್ದಾರೆ. ಪ್ರತಿಯೊಬ್ಬರೂ ಹೊರಗೆ ಹೋಗಿ ಬಂದಾಗ ಕೈಕಾಲು ತೊಳೆಯುವುದು, ದಿನಸಿ ತೊಳೆಯುವುದು, ಸ್ಯಾನಿಟೈಸರ್ (Sanitizer)ಬಳಸುವುದು, ಬಾಗಿಲಿನ ಹಿಡಿಕೆಗಳನ್ನು ಆಗಾಗ್ಗೆ ಒರೆಸುವುದು ಮುಂತಾದ ಕ್ಲೀನಿಂಗ್(Cleaning) ಸಂಬಂಧಿತ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಇದೆಲ್ಲದರ ಜೊತೆಗೆ ನಾವು ದಿನನಿತ್ಯ ಬಳಸುವ ನಮ್ಮ ಟಾಯ್ಲೆಟ್‌ನಲ್ಲಿರುವ(Toilet) ಎಲ್ಲವನ್ನೂ ಹೇಗೆ ಮತ್ತು ಯಾವಾಗ ಸ್ವಚ್ಛಗೊಳಿಸಬೇಕು ಎಂಬುದನ್ನು ಇಲ್ಲಿದೆ.

ಐಷಾರಾಮಿ ಶೌಚಾಲಯಕ್ಕಿಂತಲೂ ಸ್ವಚ್ಛ ಶೌಚಾಲಯ ಮುಖ್ಯ. ಅದನ್ನು ಸಂಪೂರ್ಣವಾಗಿ ಪಾಲಿಸಬೇಕು ಕೂಡ. ಟಾಯ್ಲೆಟ್ ಕ್ಲೀನ ಮಾಡಲು ಕ್ಲೀನರ್‌ಗಳು, ಉತ್ತಮ ಟಾಯ್ಲೆಟ್ ಬ್ರಷ್, ಸ್ವಲ್ಪ ಸೋಂಕುನಿವಾರಕಗಳನ್ನು ಬಳಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ನಿಮ್ಮ ಶೌಚಾಲಯವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬುದು ಎಷ್ಟು ಮುಖ್ಯವೋ ಹಾಗೆಯೇ ಅಸಂಖ್ಯಾತ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ನಿಮ್ಮನ್ನು ತೊಂದರೆಗೆ ಸಿಲುಕಿಸಲು ಕಾಯುತ್ತಿವೆ ಎಂಬುದನ್ನ ಮರೆಯಬಾರದು.
ಹಾಗಾದ್ರೆ ಟಾಯ್ಲೆಟ್ ಕ್ಲಿನ್ ಮಾಡುವ ಸುಲಭ ವಿಧಾನ ಇಲ್ಲಿದೆ
ಸೋಂಕು ನಿವಾರಕ:
ಸೋಂಕು ನಿವಾರಕವನ್ನು ಶೌಚಾಲಯದಲ್ಲಿ ಸಿಂಪಡಿಸಿ ಮತ್ತು ರಾತ್ರಿಯಿಡೀ ಬಿಡಿ. ಕೆಲವು ವೈರಸ್‌ಗಳು ಸುಲಭವಾಗಿ ನಿರ್ಮೂಲನೆಯಾಗದ ಕಾರಣ, ಟಾಯ್ಲೆಟ್‌ನಲ್ಲಿ ಹಾಗೆಯೇ ಉಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಅವುಗಳನ್ನು ನಾಶಮಾಡಲು ಈ ಸೋಂಕುನಿವಾರಕ ಸ್ಪ್ರೇ ಹೆಚ್ಚು ಸಮಯ ಇರಬೇಕು.