ಹಾವೇರಿ: ಉಪ ಚುನಾವಣೆ (by election) ಹಿನ್ನೆಲೆಯಲ್ಲಿ ಹಾನಗಲ್ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (cm basavaraj bommai) ಭರ್ಜರಿ ಮತಬೇಟೆಗೆ ಇಳಿದಿದ್ದಾರೆ. ಬಮ್ಮನಹಳ್ಳಿ ಗ್ರಾಮದಲ್ಲಿ ಪ್ರಚಾರದಲ್ಲಿ ಮಾತನಾಡಿದ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅನ್ನಭಾಗ್ಯ, ಅನ್ನಭಾಗ್ಯ ಅಂತಾರೆ(annabhagya scheme). ಸ್ವಾತಂತ್ರ್ಯ ಬಂದ್ಮೇಲೆ ಪಡಿತರದಲ್ಲಿ ಅಕ್ಕಿನೇ ಕೊಡ್ತಿರಲಿಲ್ಲವೇನೋ ಅನ್ನೋ ರೀತಿಯಲ್ಲಿ ಹೇಳ್ತಿದ್ದಾರೆ. ಅಕ್ಕಿಗೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಹಣ ಕೊಡ್ತಿದೆ.

29 ರುಪಾಯಿ ಕೊಟ್ಟವರನ್ನು ಬಿಟ್ಟು 3 ರುಪಾಯಿ ಕೊಟ್ಟವರ ಫೋಟೋ ಹಾಕ್ಕೊಂಡ್ರು. 30 ಕೆಜಿ ಇದ್ದಿದ್ದು 7 ಕೆಜಿ ಆಯ್ತು, ನಂತರ 3 ಕೆಜಿ ಆಯ್ತು. ಚುನಾವಣೆ ಬಂದಾಗ ಏಳು ಕೆಜಿ ಅಂದರು. ಕೇಂದ್ರ ಸರ್ಕಾರವನ್ನ ಮರೆಮಾಚಿ ಅನ್ನಭಾಗ್ಯ ಅನ್ನಭಾಗ್ಯ ಅಂದರು. ಅವರ ಯೋಜನೆಗಳು ಜನರ ಮನೆ ಬಾಗಿಲಿಗೆ ಮುಟ್ಟಲಿಲ್ಲ. 2018ರಲ್ಲಿ ಜನರು ಅವರನ್ನ ಮನೆ ಬಾಗಿಲಿಗೆ ಬರಬೇಡಿ ಅನ್ನೋ ಫಲಿತಾಂಶ ನೀಡಿದರು ಎಂದು ವ್ಯಂಗ್ಯವಾಡಿದರು.
ಬೈ ಎಲೆಕ್ಷನ್ನಲ್ಲಿ ಗೆಲುವು ನಿಶ್ಚಿತ
ಹಿಂದೆ ಉಪಚುನಾವಣೆಯಲ್ಲಿ ಗೆದ್ದಾಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಣಬಲ, ತೋಳ್ಬಲದಿಂದ ಗೆದ್ದಿದ್ದಾರೆ ಅಂತಾ ಹೇಳಿದರು. ಅವರು ಗೆದ್ದಾಗ ಜನಬಲ ಅಂತಾರೆ. ಅವರ ಅನುಭವ ಮತ್ತು ಸೋಲಿನ ಭಯದಿಂದ ಆ ರೀತಿ ಮಾತನಾಡ್ತಿದ್ದಾರೆ. ಹಾನಗಲ್ನಲ್ಲಿ ಈ ಬಾರಿ ಬಿಜೆಪಿಯ ಭಾವುಟ ನೂರಕ್ಕೆ ನೂರರಷ್ಟು ಹಾರುತ್ತದೆ. ಹಾನಗಲ್ ತಾಲೂಕಿನ ಬಿಜೆಪಿಯ ವಿಜಯ ನಿಶ್ಚಿತ. ಇವತ್ತಿನಿಂದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಮ್ಮ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಪ್ಪತ್ತೈದು ಸಾವಿರ ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.