ಇತ್ತೀಚೆಗೆ ಟಿಕ್ಟಾಕ್ನಲ್ಲಿ (TikTok) ಒಂದು ದಂಪತಿ, 10 ತಿಂಗಳಲ್ಲಿ 20 ಲಕ್ಷ ಹಣವನ್ನು ಹೇಗೆ ಕೂಡಿಟ್ಟರು ಎಂಬ ಕುತೂಹಲಕರವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಟೇಕ್ ಅವೇ ತಿಂಡಿ ತಿನಿಸುಗಳು (Food takeways), ಬ್ರಾಂಡೆಡ್ ಪ್ರಾಡಕ್ಟ್ಗಳನ್ನು (Branded Products) ಕೊಳ್ಳುವುದನ್ನು ನಿಲ್ಲಿಸಿರುವುದೇ ಇದಕ್ಕೆ ಮುಖ್ಯ ಕಾರಣ ಎಂದೂ ದಂಪತಿಗಳು ಹೇಳಿಕೊಂಡಿದ್ದಾರೆ. ಟಿಕ್ಟಾಕ್ನಲ್ಲಿ ಈ ದಂಪತಿ ಮಾಡಿರುವ ವಿಡಿಯೋ ಅದೆಷ್ಟೋ ಮಂದಿಗೆ ಸೇವಿಂಗ್ಸ್ ಟಿಪ್ಸ್ (Saving Tips in Kannada) ಆದರೆ, ಇನ್ನಷ್ಟು ಮಂದಿಗೆ ಹಣ ಉಳಿತಾಯ ಮಾಡಲು ಪ್ರೇರಣೆಯಾಗಿದೆ.

ಅಬ್ಬಿ ಡುನ್ಸುಮುರೆ ಎಂಬ ಮಹಿಳೆ ತಾನು ಮತ್ತು ತನ್ನ ಗಂಡ ಹೇಗೆ ದುಂದು ವೆಚ್ಚ ಮಾಡುತ್ತಿದ್ದೆವು ಮತ್ತು ಅದಕ್ಕೆ ಹೇಗೆ ಕಡಿವಾಣ ಹಾಕಿದರು ಎಂಬುದನ್ನು ಹಂಚಿಕೊಂಡಿದ್ದಾರೆ. ಮುಂದಿನ ಮೂರು ವರ್ಷದಲ್ಲಿ ಇದೇ ರೀತಿ ಮಾಡಿ, ಸುಮಾರು 1 ಕೋಟಿ ಮೂವತ್ತು ಲಕ್ಷ ಉಳಿಸಲು ದಂಪತಿ ಪಣ ತೊಟ್ಟಿದ್ದಾರಂತೆ.
ಉಳಿತಾಯ ಮಾಡಿದ್ದು ಹೇಗೆ? (How to save money):
ಅಬ್ಬಿ ಡುನ್ಸುಮುರೆ ಹೇಳುವ ಪ್ರಕಾರ, ಮೊದಲು ಸೇವಿಂಗ್ಸ್ ಅಕೌಂಟ್ ಒಂದನ್ನು ತೆರೆಯಬೇಕು (Open separate Savings Account). ದಿನನಿತ್ಯದ ಖರ್ಚಿಗೆ ಬಳಕೆ ಮಾಡುವ ಹಣ ಮತ್ತು ಉಳಿತಾಯ ಮಾಡುವ ಹಣ ಎರಡನ್ನೂ ಬೇರೆ ಬೇರೆ ಖಾತೆಯಲ್ಲಿ ಇರಿಸಬೇಕು ಎಂಬುದು ಮೊದಲ ಟಿಪ್ಸ್. ಅಬ್ಬಿ ಹೇಳುವ ಪ್ರಕಾರ, ಬಟ್ಟೆ, ತಿನಿಸು ಮತ್ತಿತರ ವಸ್ತುಗಳನ್ನು ಖರೀದಿಸುವಾಗ ಬ್ರಾಂಡ್ ಎಂದು ಹಿಂದೆ ಓಡಬಾರದು. ಅದರ ಬದಲು ಕಡಿಮೆ ಮೊತ್ತಕ್ಕೆ ಸಿಗುವ ಬ್ರಾಂಡ್ ಅಲ್ಲದ ಪ್ರಾಡಕ್ಟ್ಗಳನ್ನು ಖರೀದಿಸಬೇಕು (Buy products without brand). ಇದರಿಂದ ಅರ್ಧಕ್ಕರ್ದ ಉಳಿತಾಯವಾಗಲಿದೆ. ಜತೆಗೆ ಕೇವಲ ಬ್ರಾಂಡೆಡ್ ಪ್ರಾಡಕ್ಟ್ ಮಾತ್ರ ಉತ್ತಮ ಕ್ವಾಲಿಟಿಯದ್ದಾಗಿರುವುದಿಲ್ಲ. ಬ್ರಾಂಡ್ ಇಲ್ಲದ ಪ್ರಾಡಕ್ಟ್ಗಳು ಕೂಡ ಉತ್ತಮವಾಗಿರುತ್ತವೆ. ತುಂಬಾ ಹಣ ಕೊಟ್ಟು ಆಚೆ ಊಟ ಮಾಡುವುದು, ಕಾಫಿ ತಿಂಡಿ ತಿನ್ನುವುದು ಮತ್ತು ಮನೆಗೆ ಊಟ ತರಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಮನೆಯಲ್ಲೇ ಅಡಿಗೆ ಮಾಡಿ ತಿನ್ನುವುದರಿಂದ ದೊಡ್ಡ ಮೊಟ್ಟದ ಸೇವಿಂಗ್ಸ್ ಆಗಲಿದೆ ಜತೆಗೆ ಆರೋಗ್ಯವೂ ಚೆನ್ನಾಗಿರಲಿದೆ ಎನ್ನುತ್ತಾರೆ ಅಬ್ಬಿ ಡುನ್ಸುಮುರೆ.