Massive Fire At mumbai apartment: ಮುಂಬೈನ ಅಪಾರ್ಟ್ ಮೆಂಟ್ ವೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ನಗರದ ಕ್ಯಾರೆ ರಸ್ತೆಯಲ್ಲಿರುವ ಅವಿಘ್ನ ಪಾರ್ಕ್ (Avighna Park Tower) ಅಪಾರ್ಟ್ ಮೆಂಟ್ ನ 19ನೇ ಮಹಡಿಯಲ್ಲಿ ಅಗ್ನಿ ಅವಘಡ ಘಟಿಸಿದೆ.
ಇದ್ದಕ್ಕಿದ್ದಂತೆ 19ನೇ ಅಂತಸ್ತಿನಿಂದ ದಟ್ಟ ಹೊಗೆ ಬಂದಾಗ ಅಗ್ನಿ ಅವಘಡ ಬೆಳಕಿಗೆ ಬಂದಿದೆ. ಈ ಅಂತಸ್ತಿನಲ್ಲಿದ್ದ ವ್ಯಕ್ತಿ ಅಗ್ನಿ ಅನಾಹುತದಿಂದ ಬಚಾವ್ ಆಗಲು ಕಟ್ಟಡದಿಂದ ಕೆಳಗೆ ಜಿಗಿದಿದ್ದಾನೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯಲ್ಲಿ ಅರುಣ್ ತಿವಾರಿ (30) ಎಂದು ಗುರುತ್ತಿಸಲಾಗಿದೆ. ಅಗ್ನಿ ಅವಘಡದ ಸ್ಥಳದಿಂದ ಕೆಳಗೆ ಬೀಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೆಳೆಗೆ ಬಿದ್ದ ಅರುಣ್ ತಿವಾರಿ ಸಾವನ್ನಪ್ಪಿದ್ದಾರೆ ಎಂದು ಕೆಇಎಂ ಆಸ್ಪತ್ರೆಯ ಉಪ ಡೀನ್ ಡಾ ಪರ್ವಿನ್ ಬಂಗಾರ್ ತಿಳಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.