ದೇಶಸುದ್ದಿ

ಭಾರತೀಯ ಸೇನಾ ಪಡೆಯಿಂದ ಉಗ್ರರ ಅಂತಿಮ ಬೇಟೆ: ಅಡಗಿ ಕುಳಿತವರ ವಿರುದ್ಧ ಅಂತಿಮ ಕಾರ್ಯಾಚರಣೆ..!

Army to go for final assault : ಜಮ್ಮು(Jammu) ಮತ್ತು ಕಾಶ್ಮೀರ(Kashmir)ದಲ್ಲಿ ಕಳೆದ 15 ದಿನಗಳಿಂದ ಉಗ್ರರ(Terrorist) ಅಟ್ಟಹಾಸ ಮಿತಿಮೀರಿದೆ. ಸಿಕ್ಕ ಸಿಕ್ಕವರನ್ನ ಗುಂಡಿಕ್ಕಿ ಕೊಂದು ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದರು. ಭಾರತೀಯ ಸೇನಾ(Army) ಪಡೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಡೆ ಕಾರ್ಯಾಚರಣೆ ನಡೆಸಿ ಉಗ್ರರ ಹುಟ್ಟಡಗಿಸಿದ್ದರು. ಕೆಲ ಉಗ್ರರು ಸೇನಾ ಪಡೆಯಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದರು.

ಆದರೆ ಇಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್​​(Poonch)ನ ಅರಣ್ಯಪ್ರದೇಶಗಳಲ್ಲಿ ಯೋಧರಿಗೆ ಹೆದರಿ ಕೆಲ ಉಗ್ರರು ಅಡಗಿ ಕೂತಿದ್ದಾರೆ. ಸೇನಾ ಪಡೆ ಅವರನ್ನು ಸದೆ ಬಡೆಯುವುದಕ್ಕೆ ಅಂತಿಮ ಕಾರ್ಯಾಚರಣೆ ಶುರು ಮಾಡಿದೆ. ಈಗಾಗಲೇ ಉಗ್ರರು ಅಡಗಿರುವ ಸ್ಥಳಗಳ(Places)ನ್ನು ಗುರುತಿಸಿ, ಸೇನಾ ಪಡೆ ಅವರನ್ನು ಸುತ್ತುವರೆದಿದೆ. ಸೇನಾ ಪಡೆಯ ಮಾತುಗಳನ್ನ ಕೇಳಿ ಶರಣಾದರೆ(surrender)ಅವರಿಗೆ ಉಳಿಗಾಲ. ಇಲ್ಲವಾದರೆ ಅವರನ್ನು ಸದೆ ಬಡೆಯಲು ಭಾರತೀಯ ಸೇನಾ ಪಡೆ ತುದಿಗಾಲಿನಲ್ಲಿ ನಿಂತಿದೆ. ಉಗ್ರರನ್ನು ಕೊಂದು ಮತ್ತೆ ಕಾಶ್ಮೀರದಲ್ಲಿ ಶಾಂತಿ(Peace) ನೆಲಸುವಂತೆ ಮಾಡಲು ಸಜ್ಜಾಗಿದ್ದಾರೆ.

ರಣಹೇಡಿಗಳಂತೆ ಅಡಗಿ ಕೂತಿರುವ ಉಗ್ರರು

ಕಾಶ್ಮೀರದ ಪೂಂಚ್​ ಅರಣ್ಯ ಪ್ರದೇಶದಲ್ಲಿ ನಾಲ್ಕರಿಂದ ಆರು ಮಂದಿ ಭಯೋತ್ಪಾದಕರು ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ವಿಶೇಷ ಸೇನಾ ಪಡೆ ಉಗ್ರರನ್ನು ಸುತ್ತುವರೆದಿದೆ. ಭಯೋತ್ಪಾದಕರ ಚಲನವಲನ ಪತ್ತೆ ಹಚ್ಚುವುದಕ್ಕಾಗಿ ಡ್ರೋನ್​ ಕ್ಯಾಮರಾಗಳನ್ನ ಬಳಸಲಾಗುತ್ತಿದೆ. ಎಲ್ಲ ಸಿದ್ಧತೆಗಳನ್ನ ಮಾಡಿಕೊಂಡಿರುವ ಸೇನಾ ಪಡೆ ಉಗ್ರರ ವಿರುದ್ಧ ತೊಡೆ ತಟ್ಟಿ ನಿಂತಿದೆ. ಉಗ್ರರ ವಿರುದ್ಧ ಅಂತಿಮ ಕಾರ್ಯಾಚರಣೆ ಯಾವುದೇ ಕ್ಷಣದಲ್ಲೂ ಆರಂಭವಾಗಬಹುದು ಎಂದು ಹೇಳಲಾಗುತ್ತಿದೆ. ಈ ಕಾರ್ಯಾಚರಣೆ  ಪೂರ್ಣಗೊಳ್ಳುವವರೆಗೂ ಮೆಂಧರ್​ನಲ್ಲಿರುವ ಸ್ಥಳೀಯರು ತಮ್ಮ ಮನೆ ಬಿಟ್ಟು ಹೊರಗೆ ಬಾರದಂತೆ ಆದೇಶ ನೀಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button