ಸಿನಿಮಾಸುದ್ದಿ

ಮತ್ತೆ ಶುರುವಾಯ್ತು ಥಿಯೇಟರ್ ಸಮಸ್ಯೆ: ಪ್ರಮುಖ ಚಿತ್ರಮಂದಿರಕ್ಕಾಗಿ Salaga-Real Estate ನಡುವೆ ಹಗ್ಗಜಗ್ಗಾಟ..!

ಸ್ಯಾಂಡಲ್‍ವುಡ್ ಸಿನಿಮಾಗಳಿಗೆ ದಶಕಗಳಿಂದ ಕೆಜಿ ರಸ್ತೆಯ ಚಿತ್ರಮಂದಿರಗಳೇ ಮುಖ್ಯ ಚಿತ್ರಮಂದಿರಗಳು (Main Theaters). ಅದೆಷ್ಟೇ ಮಲ್ಟಿಪ್ಲೆಕ್ಸ್​ಗಳು ಬರಲಿ, ಥಿಯೇಟರ್​ಗಳು ಎದ್ದೇಳಲಿ, ಆದರೆ ಕೆಂಪೇಗೌಡ ರಸ್ತೆಯ ಥಿಯೇಟರ್​ಗಳಲ್ಲಿ ರಿಲೀಸ್ ಆಗದಿದ್ದರೆ, ಆ ಸಿನಿಮಾ ತೆರೆಗೆ ಬಂದಿಲ್ಲ ಎನ್ನುವಷ್ಟು ನಂಬಿಕೆ.

ಹೀಗಾಗಿಯೇ ಪ್ರತಿ ವಾರ ಕೆಜಿ ರಸ್ತೆಯ ಒಂದಲ್ಲಾ ಒಂದು ಥಿಯೇಟರ್​ನಲ್ಲಿ ಹೊಸ ಸಿನಿಮಾ ರಿಲೀಸ್ ಆಗಿ, ಸಂಭ್ರಮ ಮನೆ ಮಾಡಿರುತ್ತೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಜಿ ರಸ್ತೆಯ ಕೆಲ ಪ್ರಮುಖ ಚಿತ್ರಮಂದಿರಗಳಿಗೆ ಬೀಗ ಬಿದ್ದಿದೆ. ಗೀತಾ, ಹಿಮಾಲಯ, ಅಲಂಕಾರ್, ಕಲ್ಪನಾ, ಸಾಗರ್, ಮೆಜೆಸ್ಟಿಕ್ ಥಿಯೇಟರ್​ಗಳು ಬಂದ್ ಆಗಿವೆ. ಹೀಗಾಗಿಯೇ ಉಳಿದ ಥಿಯೇಟರ್​ಗಳಿಗೆ ಬೇಡಿಕೆ ಹೆಚ್ಚು.

ಇದರ ನಡುವೆಯೇ ಕೊರೋನಾ ಎರಡನೇ ಅಲೆಯ (Corona Second Wave) ಲಾಕ್‍ಡೌನ್ ಅನ್‍ಲಾಕ್ ಆಗಿ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಸಂಪೂರ್ಣ ಆಸನ ಭರ್ತಿಗೆ ಅನುಮತಿ ಸಿಕ್ಕ ಬೆನ್ನಲ್ಲೇ ಕಾರಣಾಂತರಗಳಿಂದ ಸಂತೋಷ್, ನರ್ತಕಿ ಹಾಗೂ ಸಪ್ನಾ ಥಿಯೇಟರ್​ಗಳೂ ಕಾರಣಾಂತರಗಳಿಂದ ಬಾಗಿಲು ಮುಚ್ಚಿವೆ. ಹೀಗಾಗಿಯೇ ಅಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾಗಳು ಕೆಂಪೇಗೌಡ ರಸ್ತೆಯ ಬೇರೆ ಬೇರೆ ಚಿತ್ರಮಂದಿರಗಳಿಗೆ ಶಿಫ್ಟ್ ಆಗಿವೆ. ಈಗ ಈ ಬೆಳವಣಿಗೆ ಚಿತ್ರತಂಡಗಳ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.

Related Articles

Leave a Reply

Your email address will not be published. Required fields are marked *

Back to top button