ತಿರುವನಂತಪುರಂ (ಅ.18) : ಕಳೆದ ಎರಡು ದಿನಗಳಿಂದ ಕೇರಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಿನ ಜನರ ಜೀವನ ಅಸ್ತವ್ಯಸ್ತವಾಗಿದೆ. ನದಿಗಳು ಉಕ್ಕಿ ಹರಿಯುತ್ತಿದೆ. ಮನೆ, ರಸ್ತೆ ಎಲ್ಲಾ ಕಡೆಗಳಲ್ಲಿ ನೀರು ನುಗ್ಗಿದೆ. ಬಹುತೇಕರ ಜೀವನ ಸಂಕಷ್ಟಕ್ಕೆ ಈಡಾಗಿದೆ.
ಇಂತಹ ಸಮಯದಲ್ಲಿ ಆಲಪ್ಪುಜಾದಲ್ಲಿ (Alappuzha) ಯುವ ಜೋಡಿಗಳಾದ ಆಕಾಶ್ ಮತ್ತು ಐಶ್ವರ್ಯ ವಿವಾಹವಾಗಿದ್ದಾರೆ. ಅಚ್ಚರಿ ವಿಚಾರವೆಂದರೆ ಪ್ರವಾಹದ ನಡುವೆಯು ಪಾತ್ರೆಯೊಂದರ (Large Vessel ) ಮೇಲೆ ಕುಳಿತುಕೊಂಡು ದೇವಸ್ಥಾನ ತಲುಪಿ ಆ ಬಳಿಕ ಇಬ್ಬರು ವಿವಾಹವಾಗುವ ಮೂಲಕ ಒಂದಾಗಿದ್ದಾರೆ. ಸದ್ಯ ಈ ಸ್ಟೋರಿ ವೈರಲ್ ಆಗಿದೆ.
ಆಕಾಶ್ ಮತ್ತು ಐಶ್ವರ್ಯ ಈ ಮೊದಲು ಕುಟುಂಬ ಸಮ್ಮುಖದಲ್ಲಿ ಅಕ್ಟೋಬರ್ 18ರಂದು ತಮ್ಮ ವಿವಾಹ ನಿಗದಿ ಪಡಿಸಿಕೊಂಡಿದ್ದರು. ಆದರೆ ಕೇರಳದಲ್ಲಿ ಕಳೆದ ಎರಡು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿದ್ದ, ಕೆಲವೆಡೆ ಪ್ರವಾಹ ಎದುರಾಗಿತ್ತು. ಯುವ ಜೋಡಿಗಳಿದ್ದ ಆಲಪ್ಪುಳ ತಲವಾಡಿಯಲ್ಲೂ ರಸ್ತೆಯೆಲ್ಲಾ ಜಲಾವೃತಗೊಂಡಿತ್ತು. ಆದರೆ ಆಕಾಶ್ ಮತ್ತು ಐಶ್ವರ್ಯ ಏನೇಯಾದರು ವಿವಾಹವಾಗಬೇಕು ಎಂದುಕೊಂಡಿದ್ದರು. ಅದರಂತೆ ದೊಡ್ಡ ಪಾತ್ರೆಯೊಂದನ್ನು ಬಳಸಿಕೊಂಡು ಅಲ್ಲಿನ ಹತ್ತಿರದ ಪನಯನ್ನೂರ್ಕಾವು ದೇವಸ್ಥಾನದಲ್ಲಿ ಹೋಗಿ ವಿವಾಹವಾಗಿದ್ದಾರೆ. ಸದ್ಯ ಯುವ ಜೋಡಿ ದೊಡ್ಡ ಪಾತ್ರೆಯಲ್ಲಿ ಕುಳಿತುಕೊಂಡು ದೇವಸ್ಥಾನ ತೆರಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.